ಯಶವಂತಪುರ-ಚಿಕ್ಕಬಳ್ಳಾಪುರ-ದೆಹಲಿ ಹೊಸ ರೈಲಿಗೆ ಹಸಿರು ಬಾವುಟ
ಚಿಕ್ಕಬಳ್ಳಾಪುರ, ಮಾರ್ಚ್ 04: ಯಶವಂತಪುರ-ಚಿಕ್ಕಬಳ್ಳಾಪುರ-ದೆಹಲಿ ಹೊಸ ರೈಲು ನಿಜಾಮುದ್ದೀನ್ ಎಕ್ಸ್‌ಪ್ರೆಸ್ ನಾಳೆಯಿಂದ (ಮಾರ್ಚ್ 05) ಸಂಚಾರ ಆರಂಭಿಸಲಿದೆ.
ಯಶವಂತಪುರ-ದೇವನಹಳ್ಳಿ ಡೇಮೂ ರೈಲು ಸಂಚಾರವನ್ನು ಚಿಕ್ಕಬಳ್ಳಾಪುರದ ವರೆಗೆ ಇತ್ತೀಗಷ್ಟೆ ವಿಸ್ತರಣೆ ಮಾಡಲಾಗಿತ್ತು. ಈಗ ಇದೇ ಮಾರ್ಗಕ್ಕೆ ಮತ್ತೊಂದು ಹೊಸ ರೈಲು ಬಂದಿರುವುದು ಚಿಕ್ಕಬಳ್ಳಾಪುರ ಭಾಗದ ರೈಲು ಪ್ರಯಾಣಿಕರಲ್ಲಿ ಸಂತಸ ಮೂಡಿಸಿದೆ.
ಹೊಸ ರೈಲು, ಯಶವಂತಪುರ ದಿಂದ ಹೊರಟು-ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ- ಶಿಡ್ಲಘಟ್ಟ-ಕೋಲಾರ-ರೇಣುಗುಂಟಾ-ತಿರುಪತಿ-ವಿಜಯವಾಡ-ಮಹಾರಾಷ್ಟ್ರದ ನಾಗಪುರವನ್ನು ಹಾದು ದೆಹಲಿ ತಲುಪಲಿದೆ.

ನ್ಯಾರೋಗೇಜ್‌ನಿಂದಾಗಿ ಹಲವು ರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ರೈಲುಗಳ ಕೊರತೆ ಎದುರಾಗಿತ್ತು. ಈಗ ಬ್ರಾಡ್‌ಗೇಜ್ ಆದ ಕಾರಣ ರೈಲುಗಳ ಸಂಚಾರ ಹೆಚ್ಚಾಗುತ್ತಿದೆ.
ಈ ಹೊಸ ರೈಲಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ನಾಳೆ ಬೆಳಿಗ್ಗೆ 10:30ಕ್ಕೆ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಹಸಿರು ಬಾವುಟ ತೋರಲಿದ್ದಾರೆ.












Click it and Unblock the Notifications