BY Vijayendra: 'ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಹಕಾರ ಸಿಗ್ತಿಲ್ಲ' ಕಾಂಗ್ರೆಸ್ ವಿರುದ್ಧ ಬಿವೈ ವಿಜಯೇಂದ್ರ ಕಿಡಿ
ಬೆಂಗಳೂರು ಡಿಸೆಂಬರ್ 9: ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರ ಉತ್ಸಾಹ ತೋರುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ ಹಿನ್ನೆಡೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಹೀಗಾಗಿ ರಾಜ್ಯ ಸರ್ಕಾರದ ವಿರುದ್ದ ಬೃಹತ್ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಇಂದು ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕು ಆವತಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ ವೈ ವಿಜಯೇಂದ್ರ ಅವರು, ಚಿಕ್ಕಬಳ್ಳಾಪುರ- ಕಾಂಗ್ರೆಸ್ ನಾಯಕರು ಹಾಗೂ ರಾಜ್ಯ ಸರ್ಕಾರ ವಿರುದ್ದ ವಾಗ್ದಾಳಿ ಮಾಡಿದರು.

ಕಳೆದ ಬಾರಿ ಬಿಜೆಪಿ ಸರ್ಕಾರದ ವಿರುದ್ದ 40% ಕಮೀಷನ್ ಆರೋಪ ಮಾಡಿದ್ರು. ಜನ ಕೂಡ ಅದನ್ನ ನಂಬಿ ಕಾಂಗ್ರೆಸ್ ಸರ್ಕಾರನ ಅಧಿಕಾರಕ್ಕೆ ತಂದರು. ಆದ್ರೆ ನಿನ್ನೆ ಜಾರ್ಖಂಡ್ ನ ಕಾಂಗ್ರೆಸ್ ರಾಜ್ಯ ಸಭಾ ಎಂಪಿ ಧೀರಜ್ ಸಾಹೋ ಮನೆ ಮೇಲೆ ಐಟಿ ರೇಡ್ ಆಗಿದೆ. ಅವರ ಮನೆಯಲ್ಲಿ 300- 400 ಕೋಟಿ ಹಣ ಸೀಝ್ ಮಾಡಿದ್ದಾರೆ ಎಂದು ದೂರಿದರು.
ಅದೇ ರೀತಿ ಒರಿಸ್ಸಾದಲ್ಲೂ ನೂರಾರು ಕೋಟಿ ಹಣ ಸೀಝ್ ಆಗಿದೆ. ಇದು ಕಾಂಗ್ರೆಸ್ ಅಧಿಕಾರದ ರಾಜ್ಯ ಗಳಲ್ಲಿ ಅಧಿಕಾರ ಇದ್ದಾಗ ಹೇಗೆ ಕೊಳ್ಳೆ ಹೊಡಿತಾರೆ ಎಂಬುದಕ್ಕೆ ಸಾಕ್ಷಿ. ಐಟಿ ರೇಡ್ ಅದಾಗ ಕೋಟಿ ಕೋಟಿ ಹಣ ಸೀಝ್ ಆಗ್ತಿದೆ. ಬಡವರ ಹಣವನ್ನ ಕಾಂಗ್ರೆಸ್ ಹೇಗೆ ಕಿತ್ತು ತಿಂತಿದ್ದಾರೆ ಎಂಬುದು ಋಜುವಾತಾಗಿದೆ. ಕರ್ನಾಟಕದಲ್ಲಿ ಕೋಟಿ ಕೋಟಿ ಹಣ ಸೀಝ್ ಅಗಿದ್ದು ಕಾಂಗ್ರೆಸ್ ನ ಲೂಟಿ ಜಗಜ್ಜಾಹೀರಾಗಿದೆ ಎಂದು ಕಿಡಿ ಕಾರಿದರು.
ದೇಶದಲ್ಲಿ ಕಾಂಗ್ರೆಸ್ ನ ಪುಡಾರಿಗಳು ಕಾಂಗ್ರೆಸ್ ಸರ್ಕಾರ ಇದ್ದಾಗ ಬಡವರ ಹಣವನ್ನು ಲೂಟಿ ಮಾಡಿದ್ದಾರೆ. ಲೂಟಿ ಮಾಡಿರುವ ಪ್ರತಿಯೊಂದು ರೂಪಾಯಿ ಮರಳಿ ಬಡವರಿಗೆ ಕೊಡಿಸುವ ಕೆಲಸ ಮಾಡ್ತೇವೆ. ಸ್ವತಃ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಯವರೇ ಈ ಬಗ್ಗೆ ಪ್ರತಿಜ್ಞೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಹೇಳೋದು ಒಂದು ಮಾಡೋದು ಒಂದು ಎಂದು ಬಿ ವೈ ವಿಜಯೇಂದ್ರ ಗರಂ ಆದರು.
ಆರ್ ಅಶೋಕ್ ಹಾಗೂ ಕೆಲ ಬಿಜೆಪಿ ಶಾಸಕರ ನಡುವೆ ವೈಮನಸ್ಸು ವಿಚಾರವಾಗಿ ಮಾತನಾಡಿದ ಅವರು, 'ಮೊನ್ನೆ ನಾನು, ಆರ್ ಅಶೋಕ್, ಸುರೇಶ್ ಕುಮಾರ್, ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ ಅವರು ಚರ್ಚೆ ಮಾಡಿ ತೀರ್ಮಾನ ತಗೊಂಡಿದ್ದೀವಿ. ಸದನದಿಂದ ವಾಕ್ ಔಟ್ ಮಾಡಬೇಕು ಅಂತ ತೀರ್ಮಾನ ತಗೊಂಡಿದ್ದೀವಿ.
ಆದ್ರೆ ಕೆಲ ನಮ್ಮ ಶಾಸಕರಿಗೆ ಮಾಹಿತಿ ಕೊರತೆ ಇದೆ. ಮಾಹಿತಿ ಕೊರತೆಯಿಂದ ಕೆಲ ಶಾಸಕರಿಗೆ ಭಿನ್ನಾಭಿಪ್ರಾಯಗಳು ಬಂದಿವೆ. ಆದ್ರೆ ಆರ್ ಅಶೋಕ್ ಹಾಗೂ ಬಿಜೆಪಿ ಶಾಸಕರ ನಡುವೆ ಯಾವುದೇ ಅಸಮಾಧಾನ ಇಲ್ಲ. ಸಭೆ ನಡೆದಾಗ ಕೆಲ ಜಿಲ್ಲೆಯ ಶಾಸಕರು ಸೇರಿರಬಹುದು ಅದು ಅಸಮಾಧಾನ ಅಲ್ಲ ಎಂದು ದೇವನಹಳ್ಳಿ ತಾಲ್ಲೂಕು ಆವತಿ ಗ್ರಾಮದಲ್ಲಿ ಬಿ ವೈ ವಿಜಯೇಂದ್ರ ಹೇಳಿದರು.












Click it and Unblock the Notifications