ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಬಳ್ಳಾಪುರ; ಮಳೆಯಿಂದ ಆದ ಬೆಳೆ ಹಾನಿ ವೀಕ್ಷಿಸಿದ ಸಿದ್ದರಾಮಯ್ಯ

By ಚಿಕ್ಕಬಳ್ಳಾಪುರ ಪ್ರತಿನಿಧಿ
|
Google Oneindia Kannada News

ಚಿಕ್ಕಬಳ್ಳಾಪುರ, ನವೆಂಬರ್ 24; ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಬೆಳೆ ಹಾನಿ ಪ್ರದೇಶಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಲೆ ರೈತರಿಗೆ ಪರಿಹಾರ ಕೊಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಬುಧವಾರ ನುಗ್ತಹಳ್ಳಿ ಗ್ರಾಮದ ಬಳಿ ಜಾಲಾವೃತವಾದ ರೈತರ ಜಮೀನುಗಳಿಗೆ ಭೇಟಿ ರೈತರ ಸಂಕಷ್ಟವನ್ನು ಆಲಿಸಿದರು. ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ, ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ಹಿರಿಯ ಕಾಂಗ್ರೆಸ್ ಮುಖಂಡರು ಜೊತೆಗಿದ್ದರು.

ಚಿಕ್ಕಬಳ್ಳಾಪುರ; ಭಾರೀ ಮಳೆ, ಜನರಿಗೆ ಪೊಲೀಸರ ಮನವಿ ಏನು? ಚಿಕ್ಕಬಳ್ಳಾಪುರ; ಭಾರೀ ಮಳೆ, ಜನರಿಗೆ ಪೊಲೀಸರ ಮನವಿ ಏನು?

ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, "ಬೆಳೆ ಹಾನಿ ಕುರಿತು ಸರ್ಕಾರ ನಿರ್ಲಕ್ಷ್ಯ ಧೋರಣೆ ಬಿಡಬೇಕು. ತಕ್ಷಣ ಮಳೆಯಿಂದ ಹಾನಿಯಾದ ಬೆಳೆಗೆ ಪರಿಹಾರ ವಿತರಣೆ ಮಾಡಬೇಕು. ಎನ್‌ಡಿಆರ್‌ಎಫ್ ನಿಯಮ ಬಿಟ್ಟು ಹೆಚ್ಚಿನ‌ ಪರಿಹಾರ ನೀಡಬೇಕು. ನಾನು ಈ‌ಹಿಂದೆ ಸಿಎಂ ‌ಅಗಿದ್ದಾಗ ಎಕರೆಗೆ 25 ಸಾವಿರ ‌ಪರಿಹಾರ ನೀಡಿದ್ದೆ" ಎಂದು ಹೇಳಿದರು.

ಅಕಾಲಿಕ ಮಳೆ; ಬೆಳೆ ಹಾನಿ ಪರಿಹಾರ ನೇರ ರೈತರ ಖಾತೆಗೆ ಅಕಾಲಿಕ ಮಳೆ; ಬೆಳೆ ಹಾನಿ ಪರಿಹಾರ ನೇರ ರೈತರ ಖಾತೆಗೆ

Siddaramaiah Inspect The Crop Damage In Chikkaballapur

"ರಾಜ್ಯ ಸರ್ಕಾರದ ಸಚಿವರು ಜಿಲ್ಲೆಗಳಿಗೆ ತೆರಳದೇ ಬೆಂಗಳೂರಿನಲ್ಲೇ ಇದ್ದಾರೆ. ಸರ್ಕಾರ ‌ಇನ್ನೂ ಸಚಿವರಿಗೆ ಜವಾಬ್ದಾರಿ ನೀಡಿಲ್ಲ. ಯಾವ ಜಿಲ್ಲಾ ಮಂತ್ರಿಗಳು ನೆರೆ ಪೀಡಿತ ಪ್ರದೇಶಗಳಿಗೆ ಹೋಗಿಲ್ಲ" ಎಂದು ಸಿದ್ದರಾಮಯ್ಯ ಆರೋಪಿಸಿದರು.

ಕೊಪ್ಪಳ; ಮಳೆಗೆ ಬೆಳೆ ಹಾನಿ, ವರದಿ ನೀಡಲು ಡಿಸಿ ಸೂಚನೆ ಕೊಪ್ಪಳ; ಮಳೆಗೆ ಬೆಳೆ ಹಾನಿ, ವರದಿ ನೀಡಲು ಡಿಸಿ ಸೂಚನೆ

"ಜಿಲ್ಲಾಡಳಿತ ಕೂಡಲೇ ರಾಜಕಾಲುವೆಗಳ ಒತ್ತವರಿ ತೆರುವುಗೊಳಿಸಬೇಕಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಕ್ರಮವಹಿಸಬೇಕಾಗಿತ್ತು . ಈ ಬಗ್ಗೆ ಸರ್ಕಾರಕ್ಕೆ ಪ್ರಬಲವಾಗಿ ಪತ್ರ ಬರೆಯುತ್ತೇನೆ. ಈ ರೀತಿ ಬೇಜಾವಾಬ್ದಾರಿ ವಹಿಸಕೂಡದು ಕೂಡಲೇ ರೈತರಿಗೆ ಪರಿಹಾರ ಕೊಡಬೇಕು" ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ರೈತರ ಜೊತೆ ಮಾತುಕತೆ ನಡೆಸಿದರು. "ರಾಗಿ, ಜೋಳ, ಹಿಪ್ಪು ನೇರಳೆ, ದ್ರಾಕ್ಷಿ ಹಲವಾರು ಬೆಳೆಗಳು ನಷ್ಟವಾಗಿದೆ. ಸದ್ಯ ಈ ವರ್ಷ ವಾಡಿಕೆ ಮಳೆಗಿಂತ ಮೂರು ಪಟ್ಟು ನಾಲ್ಕು ಪಟ್ಟು ಮಳೆ ಜಾಸ್ತಿಯಾಗಿದೆ. ರೈತರಿಗೆ ಸಾಕಷ್ಟು ನಷ್ಟವಾಗಿದೆ. ರಾಗಿ ಶೇ 60ರಷ್ಟು ನಾಶವಾಗಿದೆ. ರೈತರು ಲಕ್ಷಾಂತರ ಬಂಡವಾಳ ಸಾಲ‌ ಮಾಡಿ ವ್ಯವಸಾಯ ಮಾಡಿದ್ದಾರೆ. ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಸಮೀಕ್ಷೆ ಮಾಡಿಸಿ ಒತ್ತುವರಿ ಜಾಗವನ್ನು ತೆರುವುಗೊಳಿಸಲು ಜಿಲ್ಲಾಧಿಕಾರಿಗಳು ನೋಡಿಕೊಳ್ಳಬೇಕು" ಎಂದರು.

"ಜನರ ಕಷ್ಟಗಳಿಗಾಗಿ ಅಧಿಕಾರದಲ್ಲಿ ಇರುವುದು, ಜನರ ಕಷ್ಟ ಕೇಳಿ ಪರಿಹಾರ ಕೊಡಲಿಲ್ಲಾ ಎಂದರೆ ಸರ್ಕಾರ ಅಧಿಕಾರದಿಂದ ಇಳಿಯಬೇಕು. ಒಂದು ನಿಮಿಷ ಅಧಿಕಾರದಲ್ಲಿ‌ ಇರಲು ನಾಲಯಕ್ ಇವರು. ಜನರ ಕಷ್ಟ ಕೇಳಲು ಅಧಿಕಾರದಲ್ಲಿದ್ದಾರೆ. ಅವರೇಗೇನು ಪಿತ್ರಾರ್ಜಿತ ಆಸ್ತಿಯಿಂದ ಬಂದಿಲ್ಲಾ. ಅದು ಜನ ಕೊಟ್ಟಿದ್ದು ಅದು ಬೇಜವಬ್ದಾರಿ, ದುರಹಂಕಾರ ಹೇಳಿಕೆ" ಎಂದು ಸಚಿವ ಸುಧಾಕರ್‌ಗೆ ಟಾಂಗ್ ನೀಡಿದರು.

ಕೋಲಾರ ಜಿಲ್ಲಾ ಪ್ರವಾಸ; ಸಿದ್ದರಾಮಯ್ಯ ಬುಧವಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರವಾಸ ಕೈಗೊಂಡಿದ್ದರು. ಕೋಲಾರ ವಿಧಾನಸಭೆ ಕ್ಷೇತ್ರದ ನಾಗಲಾಪುರ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಬೆಳೆಗಳನ್ನು ವೀಕ್ಷಿಸಿದರು. ಅಕಾಲಿಕ ಮಳೆಯಿಂದಾಗಿ ಹೂವು, ಹಣ್ಣು, ತರಕಾರಿ, ಆಹಾರ ಧಾನ್ಯಗಳು ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಕೋಲಾರ ವಿಧಾನಸಭೆ ಕ್ಷೇತ್ರದ ಜೋಡಿ ಕೃಷ್ಣಾಪುರ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ಶ್ರೀನಿವಾಸಗೌಡ, ನಂಜೇಗೌಡ, ನಜೀರ್ ಅಹಮದ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳ ಭೇಟಿ; ನವೆಂಬರ್ 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆನೆಮೊಡಗು ಗ್ರಾಮಕ್ಕೆ ತೆರಳಿ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಣೆ ಮಾಡಿದ್ದರು.

Recommended Video

KL Rahul ಹಾಗು Pandya ಇಬ್ಬರು ಮುಂದಿನ IPLಗೆ ಹೊಸ ತಂಡ ಸೇರಲಿದ್ದಾರೆ | Oneindia Kannada

English summary
Karnataka leader of opposition Siddaramaiah inspected the rain crop damage in Chikkaballapur district and urge the government to announce compensation for farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X