ಉಪ ಚುನಾವಣೆ ಬಳಿಕ ರಮೇಶಕುಮಾರ್ ಸತ್ಯ ಹೊರಹಾಕುತ್ತೇನೆ: ಸುಧಾಕರ್

ಚಿಕ್ಕಬಳ್ಳಾಪುರ, ಡಿಸೆಂಬರ್ 03: ಉಪ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಕುರಿತ ಸತ್ಯಗಳನ್ನು ಹೊರಹಾಕುತ್ತೇನೆಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಉಪ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸುಧಾಕರ್, ಈ ಇಬ್ಬರ ಕುರಿತು ಕೆಲ ಸತ್ಯಗಳನ್ನು ಹೇಳಬೇಕಿದೆ, ಉಪ ಚುನಾವಣೆ ಇರುವುದರಿಂದ ಸಾಧ್ಯವಾಗುತ್ತಿಲ್ಲ, ಮುಂದೆ ಎಲ್ಲವನ್ನು ಜನರ ಎದುರು ಬಿಚ್ಚಿಡುತ್ತೇನೆಂದು ಎಂದು ಹೇಳಿದರು.

ನಾಯಕರಾದವರು ಅವರ ಹಿರಿತನ, ಅನುಭವಕ್ಕೆ ತಕ್ಕಂತೆ ಮಾತನಾಡಬೇಕು, ಆಧಾರ ರಹಿತವಾಗಿ ನಿಂದನೆ ಮಾಡಬಾರದು, ತಮ್ಮ ಬಗ್ಗೆ ಅಪಪ್ರಚಾರ ಮಾಡುವುದರಿಂದ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.

Rameshkumar To Throw Out The Truth After The By Election: Sudhakar

ನನ್ನ ರಾಜಕೀಯ ಗುರು ಎಸ್.ಎಂ.ಕೃಷ್ಣ ಅವರು, ಕಾಂಗ್ರೆಸ್ ನಿಂದ ನನಗೆ ಟಿಕೆಟ್ ಕೊಡಿಸಿದ್ದು ಅವರು ಎಂದರು. ಅದರಲ್ಲಿ ಡಾ. ಜಿ.ಪರಮೇಶ್ವರ್ ಕೂಡಾ ಒಬ್ಬರೆಂದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು, ಅವರು ನಟನೆಯನ್ನೇ ಮುಂದುವರೆಸಿಕೊಂಡು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+