ರಾರಾಜಿಸುತ್ತಿರುವ ಕೇಸರಿ ಬಂಟಿಂಗ್ಸ್, ಭಗವಾಧ್ವಜ: ಚಿಕ್ಕಬಳ್ಳಾಪುರ ರಾಮಭಕ್ತರಲ್ಲಿ ಹಬ್ಬದ ಸಡಗರ- ಮನೆಗಳ ಮೇಲೆ ರಾಮ ದ್ವಜ
ಚಿಕ್ಕಬಳ್ಳಾಪುರ ಜನವರಿ 22: ಪ್ರಮುಖ ರಸ್ತೆಗಳಲ್ಲಿ ರಾರಾಜಿಸುತ್ತಿರುವ ಕೇಸರಿ ಬಂಟಿಂಗ್ಸ್, ಮನೆಗಳ ಮೇಲೆ ಹಾರಾಡುತ್ತಿರುವ ಭಗವಾಧ್ವಜಗಳು, ಗಮನ ಸೆಳೆಯುತ್ತಿರುವ ಜೈಶ್ರೀರಾಮ್ ಘೋಷ ವಾಕ್ಯ ಬರಹಗಳು, ವಿವಿಧ ದೇಗುಲಗಳಲ್ಲಿ ಆಕರ್ಷಕ ಅಲಂಕಾರ.
ಇವು ಅಯೋಧ್ಯೆಯ ನೂತನ ದೇಗುಲದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಂಡು ಬರುತ್ತಿರುವ ಸಂಭ್ರಮದ ಸಿದ್ಧತೆಗಳು, ಒಂದೆಡೆ ಮುಂಜಾಗ್ರತಾ ದೃಷ್ಟಿಯಿಂದ ಬಿಗಿ ಬಂದೋಬಸ್ತ್ ಕ್ರಮಗಳೊಂದಿಗೆ ಪೊಲೀಸ್ ಇಲಾಖೆಯು ನಿಗಾ ವಹಿಸಿದ್ದರೆ, ಮತ್ತೊಂದೆಡೆ ರಾಮಭಕ್ತರ ಸಮೂಹವು ಹಬ್ಬದ ಸಡಗರ ಆಚರಣೆಯಲ್ಲಿ ತೊಡಗಿದೆ.

ಅಯೋಧ್ಯೆಯಲ್ಲಿ ಜ.22 ಇಂದು ಶ್ರೀ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಸುಮಾರು 550 ವರ್ಷಗಳ ಕನಸು ನನಸಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬರ ಮನೆ ಹಾಗೂ ಮನದಲ್ಲೆಡೆ ಖುಷಿ ಮನೆ ಮಾಡಿದೆ. ಧಾರ್ಮಿಕ ವಿಶೇಷ ಪುಂಜಾ ಕಾರ್ಯಕ್ರಮಗಳು, ಮೆರವಣಿಗೆ ಸೇರಿದಂತೆ ಸೇವಾ ಚಟುವಟಿಕೆಯ ಮೂಲಕ ಶ್ರೀರಾಮನ ಆರಾಧನೆಗೆ ಸಂಘ ಸಂಸ್ಥೆಗಳು ಮುಖಂಡರು ಮುಂದಾಗಿದ್ದಾರೆ.
ಹಿಂದೂಪರ ಸಂಘಟನೆಗಳ ಮುಖಂಡರು, ಆರ್ ಎಸ್ ಎಸ್ ಸ್ವಯಂಸೇವಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಸೇವಾ ಕಾರ್ಯಕರ್ತರು ವಿತರಿಸಿರುವ ಭಗವಾಧ್ವಜಗಳು ಬಹುತೇಕ ಮನೆಗಳ ಮೇಲೆ ಹಾರಾಡುತ್ತಿವೆ. ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನ ದೊಡ್ಡ ಭಜನೆ ರಸ್ತೆ ಎಲೆಪೇಟೆ, ಸುಬ್ಬರಾಯನಪೇಟೆ ಶ್ರೀ ವೇಣುಗೋಪಾಲ ಭಜನೆ ಮಂದಿರ ರಸ್ತೆ ಸೇರಿದಂತೆ ನಗರದ ವಿವಿಧ ಕಡೆ ಕೇಸರಿ ಬಂಟಿಂಗ್ಸ್ ಅಳವಡಿಸಿದ್ದು ಹಬ್ಬದ ಸಡಗರ ವಾತಾವರಣ ನಿರ್ಮಾಣವಾಗಿದೆ ಇಲ್ಲಿನ ಗಂಗಮ್ಮ ಗುಡಿ ದೇಗುಲದ ಆವರಣದಲ್ಲಿ ಅಯೋಧ್ಯೆಯ ಬಾಲರಾಮನ ಮೂರ್ತಿಯ ಮಾದರಿಯನ್ನು ನಿಲ್ಲಿಸಲಾಗಿದೆ.

ಪೊಲೀಸರ ಕಟ್ಟೆಚ್ಚರ:-
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ ಮಾಡಿದೆ. ಧಾರ್ಮಿಕ ಮಹೋತ್ಸವದ ಸಂದರ್ಭದಲ್ಲಿ ಕಾನೂನು ವ್ಯವಸ್ಥೆ ಶಾಂತಿಗೆ ಆಗದಂತೆ ಕಟ್ಟೆಚ್ಚರ ವಹಿಸಿದೆ ಹೆಚ್ಚಿನ ಭದ್ರತೆ ದೃಷ್ಟಿಯಿಂದ ಬೆಂಗಳೂರಿನಿಂದ ಜಿಲ್ಲೆಗೆ ಮೂರು ಕೆಎಸ್ಆರ್ಪಿ ದುಡಿಬಂದಿದ್ದು ಇದರ ಜೊತೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನ ಕನ್ನಡ ಆಗಿದೆ ಠಾಣೆಯಲ್ಲಿ ಮೂವರು ಸಿಬ್ಬಂದಿ ಹೊರತುಪಡಿಸಿ ದಂತೆ ಇತರ ಎಲ್ಲರೂ ಕಾರ್ಯಕರ್ತರು ನಿರ್ವಹಿಸಲು ಸೂಚಿಸಲಾಗಿದೆ. ಸಿಬ್ಬಂದಿ ರಜೆ ಹಾಕಲು ಅವಕಾಶ ನೀಡಿಲ್ಲ, ಎರಡು ದಿನ ಬೀಟ್ ವ್ಯವಸ್ಥೆ, ಪೊಲೀಸ್ ಪೆಟ್ರೋಲಿಂಗ್, ತಪಾಸಣೆ ಕಾರ್ಯವನ್ನು ಚುರುಕುಗೊಳಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯು ಮಾಹಿತಿ ನೀಡಿದೆ.
ಧಾರ್ಮಿಕ ಕಾರ್ಯಕ್ರಮ:-
ರಾಜ್ಯ ಸರ್ಕಾರವು ಎಲ್ಲಾ ಮುಜರಾಯಿ ಇಲಾಖೆಗಳಿಗೆ ಸೇರಿದ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲು ಆದೇಶಿಸಿದೆ ಅದರಂತೆ ನಂದಿಯ ಶ್ರೀ ಭೋಗ ಮತ್ತು ಯೋಗ ನಂದೀಶ್ವರ ಸ್ವಾಮಿ ದೇವಾಲಯ. ರಂಗಸ್ಥಳದ ಶ್ರೀರಂಗ ಸ್ನಾತ ಸ್ವಾಮಿ ದೇವಾಲಯ ವಿರಾಜ್ ವಿದುರಾಶ್ವತ್ ನಾರಾಯಣ ದೇಗುಲ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆಯನ್ನು ಕೈಗೊಳ್ಳಲಾಗುತ್ತದೆ. ಇದರ ನಡುವೆ ವಿವಿಧ ದೇವಾಲಯ ಸಮಿತಿಗಳು ಧಾರ್ಮಿಕ ವಿವಿಧ ಕಾರ್ಯಕ್ರಮಗಳನ್ನ ಆಯೋಜಿಸಿದೆ ಸಭೆಯ ಹಳ್ಳಿಯ ಶ್ರೀರಾಮ ಮಂದಿರ ದೇಗುಲದಲ್ಲಿ ಶ್ರೀ ಸೀತಾರಾಮ ಲಕ್ಷ್ಮಣರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ನೇರಪ್ರಸಾರ ವೀಕ್ಷಣೆಗೆ ಅವಕಾಶ :-
ಅಯೋಧ್ಯ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ನಗರದ ಬಸಪ್ಪನ ಛತ್ರಗುಡಿ ಬಲಮುರಿ ವೃತ್ತ ಸೇರಿದಂತೆ ವಿವಿಧಡೆ ಸ್ಕ್ರೀನ್ ಟಿವಿ ಪರದೆ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.
ಮಾಜಿ ಸಚಿವರ ಮುಂದಾಳತ್ವದಲ್ಲಿ ಪೂಜೆ:-
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಲರಾಮನ ಪ್ರತಿಷ್ಠಾಪನೆ ಅಂಗವಾಗಿ ಮಾಜಿ ಸಚಿವ ಡಾ. ಕೆ. ಸುಧಾಕರ್ ಫೌಂಡೇಶನ್ ವತಿಯಿಂದ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.

ಇನ್ನು ಈ ಕುರಿತು ಮಾಜಿ ಸಚಿವ ಡಾ. ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು ಅಯೋಧ್ಯೆಯಲ್ಲಿ ದೇಗಳ ನಿರ್ಮಾಣದ 500 ವರ್ಷಗಳ ಕನಸು ನನಸಾಗಿದೆ. ಪ್ರಧಾನಿ ಮೋದಿ ಅವರು ದೇವರ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿ ಇತಿಹಾಸವನ್ನು ಬರೆಯಲಿದ್ದಾರೆ ಇದರೊಂದಿಗೆ ಕೋಟ್ಯಂತರ ರಾಮಭಕ್ತರು ಹಾಗೂ ಕಳಸೇವಕರ ಹೋರಾಟ ಬಲಿದಾನ ಶ್ರಮಕ್ಕೆ ಸಾರ್ಥಕತೆ ದೊರೆಯಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಮುಂಜಾಗ್ರತ ಕ್ರಮಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ. ಎಲ್. ನಾಗೇಶ್ ರವರು ಮಾತನಾಡಿ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಕಳೆದ ಎರಡು ದಿನಗಳಿಂದಲೂ ಹೆಚ್ಚಿನ ನಿಗ ವಹಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ.












Click it and Unblock the Notifications