Get Updates
Get notified of breaking news, exclusive insights, and must-see stories!

ಚಿಕ್ಕಬಳ್ಳಾಪುರದಲ್ಲಿ ನಮ್ಮ ಊರಿಗೆ ನಮ್ಮ ಶಾಸಕ ಅಭಿಯಾನ: ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳಿಗಿಲ್ಲ ಆಹ್ವಾನ!

ಚಿಕ್ಕಬಳ್ಳಾಪುರ ನವೆಂಬರ್ 27: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಅವರು 'ನಮ್ಮೂರಿಗೆ ನಮ್ಮ ಶಾಸಕ' ಎನ್ನುವ ವಿನೂತನ ಅಭಿಯಾನದ ಮೂಲಕ ಗ್ರಾಮಸ್ಥರ ಕಷ್ಟ ಆಲಿಸಲು ಮುಂದಾಗಿದ್ದಾರೆ. ಸಾರ್ವಜನಿಕರಿಂದ ಬರುವ ದೂರುಗಳಿಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲೇ ಸಮಸ್ಯೆಗಳಿಗೆ ಕಾಲ ಮಿತಿಯೊಳಗೆ ಇತ್ಯರ್ಥ ಪಡಿಸುವ ವಿನೂತನ ಕಾರ್ಯಕ್ರಮ ಇದಾಗಿದೆ. ಆದರೆ ಇದಕ್ಕೆ ಸ್ಥಳೀಯ ಚುನಾಯಿತ ಜನಪ್ರತಿ ನಿಧಿಗಳನ್ನು ಆಹ್ವಾನ ನೀಡದಿರುವುದು ಕೆಲವರ ಬೇಸರಕ್ಕೂ ಕಾರಣವಾಗಿದೆ.

ಹೌದು.... ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿಯ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಮ್ಮಗಾನಹಳ್ಳಿ, ರೇಣುಮಾಕಲಹಳ್ಳಿ, ಚಿಕ್ಕನಾರಪನಹಳ್ಳಿ, ಉಪ್ಪಗುಟ್ಟಹಳ್ಳಿ, ಕೊಮ್ಮಲಮರಿ, ದಿನ್ನಹಳ್ಳಿ ಹಾಗೂ ಕರಕಮಾಕಲಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಹಮ್ಮಿಕೊಂಡಿರುವ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದ ಪ್ರಯುಕ್ತ ಜನಸ್ಪಂದನ ಕಾರ್ಯಕ್ರಮ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಸ್ಥಳೀಯ ಗ್ರಾಪಂ ವ್ಯಾಪ್ತಿಯ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸದೇ ಕಾರ್ಯಕ್ರಮ ಮಾಡುತ್ತಿದ್ದು ಇದು ಸರಕಾರದ ಕಾರ್ಯಕ್ರಮವೊ ಅಥವಾ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊ ಎಂಬ ಅನುಮಾನ ಮೂಡುತ್ತಿದೆ ಎಂಬುದು ಸ್ಥಳೀಯ ಜನಪ್ರತಿನಿಧಿಗಳ ಪ್ರಶ್ನೆಯಾಗಿದೆ.

namma oorige namma shasaka campaign in chikkaballapur no invitation to local elected representatives

ಈ ಕುರಿತು ಕಮ್ಮಗುಟ್ಟಹಳ್ಳಿ ಗ್ರಾಪಂ ಉಪಾಧ್ಯಕ್ಷ ಎ. ಕೇಶವ ಮಾತನಾಡಿ, ನಮ್ಮ ಶಾಸಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಬರುತ್ತಾರೆ ಆದರೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿಲ್ಲ, ಗ್ರಾಪಂ ವ್ಯಾಪ್ತಿಯಲ್ಲಿನ ನಮ್ಮ ಗಮನಕ್ಕಿರುವ ಸಮಸ್ಯೆಗಳನ್ನು ಶಾಸಕರ ಬಳಿ ಕೇಳಬಾರದೇ ? ಗ್ರಾಮದ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ನಾವು ಸಹಕಾರ ನೀಡುತ್ತೇವೆ, ನಮ್ಮ ಸಲಹೆ ಸೂಚನೆಗಳನ್ನು ನೀಡುತ್ತೇವೆ, ನಮ್ಮ ಬೇಡಿಕೆಗಳನ್ನು ಸಹ ಸಲ್ಲಿಸಿ ಒಟ್ಟಾರೆ ಗ್ರಾಮಗಳ ಅಭಿವೃದ್ಧಿಗೆ ನಾವು ಪ್ತಯತ್ನಿಸುತ್ತಿದ್ದೇವೆ ಎಂಬುದನ್ನು ಅಧಿಕಾರಿಗಳು ಮರೆತಂತೆ ಇದ್ದು ಶಾಸಕರಿಗೆ ಕೊಡುವ ಪ್ರಧಾನ್ಯತೆ ನಮಗಿಲ್ಲವೇ ಎಂದರು.

ಪ್ರಮುಖ ಸಮಸ್ಯೆಗಳೇನು?

ಪ್ರಯಾಣಿಕರ ತಂಗುದಾಣ ನಿರ್ಮಾಣ, ಜಲ ಮೂಲಗಳಾದ ಕುಂಟೆ, ಅಮಾನಿ ಬೈರ ಸಾಗರ ಕೆರೆ ಜಾಗ ಒತ್ತುವರಿ, ಕಾಲುವೆಗಳ ಒತ್ತುವರಿ ತೆರವು , ಚೆಕ್ ಡ್ಯಾಮ್ ಮುಚ್ಚಿರುವುದು, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ವಿವಿಧ ಗ್ರಾಮಗಳಿಗೆ ರಸ್ತೆ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣಕ್ಕೆ ನಿವೇಶನ, ನಿವೇಶನ ರಹಿತರಿಗೆ ನಿವೇಶನ, ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು, ಆಟದ ಮೈದಾನಕ್ಕೆ ಜಾಗ, ನಮ್ಮ ಹೊಲ ನಮ್ಮ ರಸ್ತೆ ಒತ್ತುವರಿ ತೆರವು, ಅಕ್ರಮ ಸಕ್ರಮದಡಿ ಭೂಮಿ ಮಂಜೂರು ಸೇರಿ ವಿವಿಧ ಸಮಸ್ಯೆಗಳನ್ನು

ಈ ಕುರಿತು ತಹಶೀಲ್ದಾರ್ ಎಂ. ಅನಿಲ್ ಪ್ರತಿಕ್ರಯಿಸಿ ಇದು ಸರ್ಕಾರ ನಿಗದಿಪಡಿಸಿರುವ ಕಾರ್ಯಕ್ರಮವಲ್ಲ, ಶಾಸಕರು ನಿರ್ಧಾರ ಮಾಡಿ, ಎಲ್ಲಾ ಇಲಾಖೆಗಳ ಅಧಿಕಾರಿಗಳ ಒಟ್ಟಿಗೆ ಇಂತಹ ಗ್ರಾಮಕ್ಕೆ ಹೋಗೋಣ ಎಂದರೆ ಅಲ್ಲಿಗೆ ಹೋಗಿ ಸಮಸ್ಯೆಗಳ ಇತ್ಯರ್ಥಕ್ಕೆ ಶ್ರಮಿಸುವ ಕೆಲಸ ಮಾಡುತ್ತಿದ್ದೇವೆ. ಜನಸ್ಪಂದನ ಕಾರ್ಯಕ್ರಮಗಳಾದರೆ ಸ್ಥಳೀಯ ಜನಪ್ರತಿನಿಧಿಗಳಿಗೆ ವಿಶೇಷವಾಗಿ ಅಹ್ವಾನ ನೀಡುತ್ತೇವೆ, ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಪ್ರತಿಯೊಬ್ಬರೂ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಸೂಚನೆ ನೀಡಲಾಗುವುದು ಎಂದರು.

ಗ್ರಾಪಂ ಪ್ರತ್ಯೇಕ ವಾರ್ಡ್ ಸಭೆ -

ಶಾಸಕರು ಗ್ರಾಮಗಳಿಗೆ ಭೇಟಿ ನೀಡುವ ದಿನವೇ ಆಯಾ ಗ್ರಾಮಗಳ ಚುನಾಯಿತ ಸದಸ್ಯರು, ಗ್ರಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸ್ಥಳಗಳಲ್ಲಿ ಸ್ಥಳೀಯ ಗ್ರಾಪಂ ಆಡಳಿತವು ವಾರ್ಡ್ ಸಭೆಗಳನ್ನು ಹಮ್ಮಿಕೊಂಡಿದ್ದು ಅರ್ಜಿ ಹಿಡಿದು ಎತ್ತ ಹೋಗಬೇಕು ಎಂಬ ಚಿಂತೆ ಸಾರ್ವಜನಿಕರದ್ದಾಗಿದೆ.

ರಾದ್ದಾದ ಕಾರ್ಯಕ್ರಮ -

ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮವು ಬುಧವಾರ ನ. 27ರಂದು ನಿಗದಿಯಾಗಿತ್ತು, ಆದರೆ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ಕಾರಣದಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೊ ಇಲ್ಲವೋ ಎಂಬ ಅನುಮಾನದಿಂದ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+