ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಸುಧಾಕರ್ ಸಿಕ್ಕಿರುವುದು ಈ ಕ್ಷೇತ್ರದ ಜನರ ಭಾಗ್ಯ: ಸಚಿವ ಮುನಿರತ್ನ ಪ್ರಶಂಸೆ

By ಚಿಕ್ಕಬಳ್ಳಾಪುರ ಪ್ರತಿನಿಧಿ
|
Google Oneindia Kannada News

ಚಿಕ್ಕಬಳ್ಳಾಪುರ, ಜನವರಿ 9: ಡಾ.ಕೆ. ಸುಧಾಕರ್ ಅವರ ದೂರದೃಷ್ಟಿ ಮತ್ತು ಅವರ ಜನಪರ ಕಾಳಜಿ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಬಿಂಬಿತವಾಗುತ್ತಿದೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರನ್ನು ಪ್ರಶಂಸಿಸಿದರು.

ಭಾನುವಾರ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಭಾಗವಹಿಸಿ, ಫಲಪುಷ್ಪ ಪ್ರದರ್ಶನ ಸೇರಿದಂತೆ ಉತ್ಸವದ ವಿವಿಧ ಮಜಲುಗಳನ್ನು ವೀಕ್ಷಿಸಿ ಮಾತನಾಡಿದ ಅವರು, 10 ಮಂದಿ ಮಾಡುವ ಕೆಲಸವನ್ನು ಸುಧಾಕರ್ ಅವರೊಬ್ಬರೇ ಅದ್ಧೂರಿಯಾಗಿ ಮಾಡುತ್ತಿರುವುದು ಪ್ರಶಂಸನೀಯ ಎಂದರು.

ಸಿಎಂ ವಿರುದ್ಧ ಸಿದ್ದರಾಮಯ್ಯ ಹೇಳಿಕೆ: ಸುಧಾಕರ್, ಅಶ್ವಥ್ ನಾರಾಯಣ ಗರಂಸಿಎಂ ವಿರುದ್ಧ ಸಿದ್ದರಾಮಯ್ಯ ಹೇಳಿಕೆ: ಸುಧಾಕರ್, ಅಶ್ವಥ್ ನಾರಾಯಣ ಗರಂ

ಏಳು ದಿನದ ಚಿಕ್ಕಬಳ್ಳಾಪುರ ಉತ್ಸವ ಯಶಸ್ವಿಯಾಗಿ ಮಾಡುತ್ತಿರುವುದು ಸಂತಸ ತಂದಿದೆ. ಯಾವುದೇ ಕೆಲಸ ಶ್ರದ್ಧೆಯಿಂದ ಮಾಡುವುದು ಸುಧಾಕರ್ ಅವರ ಜಾಯಮಾನ. ಇದಕ್ಕೆ ಚಿಕ್ಕಬಳ್ಳಾಪುರ ಉತ್ಸವವೇ ಸಾಕ್ಷಿಯಾಗಿದೆ. ಚಿಕ್ಕಬಳ್ಳಾಪುರಕ್ಕೆ ಸುಧಾಕರ್ ನೀಡಿದ ಕೊಡುಗೆ ಈವರೆಗೆ ಯಾವುದೇ ನಾಯಕರು ನೀಡಿಲ್ಲ. ಜನಸೇವೆಯ ಕಾಳಜಿ ಕಮ್ಮಿ ಜನರಲ್ಲಿರಲಿದೆ. ಅಂತಹವರಲ್ಲಿ ಸುಧಾಕರ್ ಅವರೂ ಒಬ್ಬರು ಎಂದರು.

ಸುಧಾಕರ್‌ ಹೊಗಳಿದ ಮುನಿರತ್ನ

ಸುಧಾಕರ್‌ ಹೊಗಳಿದ ಮುನಿರತ್ನ

ಸುಧಾಕರ್ ಅವರಿಗೆ ಒಳ್ಳೆಯದಾಗಲಿ, ಚಿಕ್ಕಬಳ್ಳಾಪುರದ ಮತದಾರರಿಗೆ ಸುಧಾಕರ್ ಸಿಕ್ಕಿರುವುದು ಈ ಕ್ಷೇತ್ರದ ಜನರ ಭಾಗ್ಯ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಉತ್ಸವವನ್ನು ಕಣ್ಣುತುಂಬಿಕೊಳ್ಳಬೇಕು. ತೋಟಗಾರಿಕಾ ಇಲಾಖೆಯಿಂದ ಭೋಗ ನಂದೀಶ್ವರ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಆಕರ್ಷಣೀಯವಾಗಿ ಮಾಡಲಾಗಿದೆ. ಈ ಉತ್ಸವವನ್ನು ಜಿಲ್ಲೆಗೆ ತಂದ ಸುಧಾಕರ್ ಅವರಿಗೆ ಉತ್ತಮ ಭವಿಷ್ಯ ಇದೆ. ಇಂತಹ ನಾಯಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.

20 ನಿಮಿಷದಲ್ಲಿ ಚಪಾತಿ ಪಲ್ಯ ತಯಾರಿಸಿದ ನೂರಾರು ಮಹಿಳೆಯರು

20 ನಿಮಿಷದಲ್ಲಿ ಚಪಾತಿ ಪಲ್ಯ ತಯಾರಿಸಿದ ನೂರಾರು ಮಹಿಳೆಯರು

ಚಿಕ್ಕಬಳ್ಳಾಪುರ ಉತ್ಸವದ ಪ್ರಯುಕ್ತ ನಗರದ ವಿಶ್ವೇಶ್ವರಯ್ಯ ಶಾಲಾ ಮೈದಾನದಲಿ ಅಡುಗೆ ಸ್ಪರ್ಧೆ ಆಯೋಜಿಸಲಾಗಿತ್ತು. ಚಿಕ್ಕಬಳ್ಳಾಪುರ ಮಾತ್ರವಲ್ಲದೇ ತಾಲೂಕಿನ ವಿವಿಧ ಗ್ರಾಮಗಳಿಂದ ಮತ್ತು ಮಂಚೇನಹಳ್ಳಿ ತಾಲೂಕಿನ ಹಲವು ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರಿಗಾಗಿ ಚಪಾತಿ ಮಾಡುವ ಸ್ಪರ್ಧೆಯನ್ನು ಭಾನುವಾರ ಏರ್ಪಡಿಸಲಾಗಿತ್ತು.

20 ನಿಮಿಷ ನಿಗದಿ ಮಾಡಿದ್ದ ಸಮಯದಲ್ಲಿ ಚಪಾತಿಯ ಜೊತೆಗೆ ತಮ್ಮದೇ ಆಯ್ಕೆಯ ಪಲ್ಯ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಬಗೆಯ ಸ್ಥಳೀಯ ಆಹಾರ ಖಾದ್ಯಗಳನ್ನು ಉಣಬಡಿಸುವಲ್ಲಿ ಮಹಿಳೆಯರು ಗಮನ ಸೆಳೆದರು. ಮೊದಲ ಸುತ್ತಿನಲ್ಲಿ ಸ್ಪರ್ಧಿಗಳೆಲ್ಲರೂ ಚಪಾತಿ ಮತ್ತು ಅವರಿಗೆ ಇಷ್ಟವಾದ ಪಲ್ಯ ಮಾಡಿದರು. ಎರಡನೇ ಸುತ್ತಿನಲ್ಲಿ ಅವರಿಗೆ ಇಷ್ಟವಾದ ವಿವಿಧ ಬಗೆಯ ಸಸ್ಯ ಮತ್ತು ಮಾಂಸಹಾರದ ಖಾದ್ಯಗಳನ್ನು ಮಾಡಿ ಅಡುಗೆ ಸ್ಪರ್ಧೆಗೆ ಕಳೆ ತಂದರು.

ಫಲಪುಷ್ಪ ಪ್ರದರ್ಶನಕ್ಕೆ ಜನ ಸಾಗರ

ಫಲಪುಷ್ಪ ಪ್ರದರ್ಶನಕ್ಕೆ ಜನ ಸಾಗರ

ನಗರದ ಹೊರವಲಯದ ಕೆ.ವಿ ಕ್ಯಾಂಪಸ್ ಬಳಿಯ ವಿಶಾಲ ಮೈದಾನದಲ್ಲಿ ಆಯೋಜಿಸಿರುವ ಅದ್ಧೂರಿ ಫಲಪುಷ್ಪ ಪ್ರದರ್ಶನ ಜನರನ್ನು ಕೈ ಬೀಸಿ ಕರೆಯುವಲ್ಲಿ ಯಶಸ್ವಿಯಾಯಿತು. ಜಿಲ್ಲೆಯ ಐತಿಹಾಸಿಕ, ಧಾರ್ಮಿಕ ಹಿನ್ನಲೆ ಹೊಂದಿರುವ ನಂದಿಯ ಭೋಗನಂದೀಶ್ವರ ದೇವಾಲಯದ ಹೂವಿನ ಅಲಂಕಾರದ ಪ್ರತಿರೂಪ ಅತ್ಯಂತ ಆಕರ್ಷಕವಾಗಿತ್ತು. ದೇವಾಲಯದ ಮುಖ್ಯದ್ವಾರ, ನಂದಿ ಬಸವಣ್ಣ, ಗರ್ಭ ಗುಡಿಯಲ್ಲಿರುವ ಶಿವಲಿಂಗವನ್ನು ಯಥಾವತ್ತು ಹೂವಿನಲ್ಲಿ ಸಿದ್ದಪಡಿಸಿರುವುದು ವೀಕ್ಷಕರನ್ನು ಮಂತ್ರಮುಗ್ದಗೊಳಿಸುವಲ್ಲಿ ಯಶಸ್ಸು ಕಂಡಿತು.

ಭಾನುವಾರ ರಜಾದಿನವಾದ ಕಾರಣ ಸಹಸ್ರಾರು ಸಂಖ್ಯೆಯಲ್ಲಿ ಭೇಟಿ ನೀಡಿದ ಜನರು ಪುಷ್ಪಾಲಂಕಾರವನ್ನು ಕಣ್ಣು ತುಂಬಿಕೊಂಡರು.

ಫಲ ಪುಷ್ಪ ಪ್ರದರ್ಶನದಲ್ಲಿ ವಿದ್ಯಾರ್ಥಿ, ಯುವಕರಿಗೆ ಸ್ಪೂರ್ತಿದಾಯಕವಾಗುವ ನಿಟ್ಟಿನಲ್ಲಿ ಮಣ್ಣಿನ ಕಲಾಕೃತಿ ಮೂಲಕ ಅರಳಿಸಿರುವ ಸ್ವಾಮಿ ವಿವೇಕಾನಂದರ ಭವ್ಯ ಮೂರ್ತಿ ಇಡೀ ಫಲಪುಷ್ಪ ಪ್ರದರ್ಶನಕ್ಕೆ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ನೋಡುಗರ ಬಾಯಲ್ಲಿ ನೀರುಣಿಸಿದ ನಾನಾ ಬಗೆಯ ಖಾದ್ಯಗಳು

ನೋಡುಗರ ಬಾಯಲ್ಲಿ ನೀರುಣಿಸಿದ ನಾನಾ ಬಗೆಯ ಖಾದ್ಯಗಳು

ಉತ್ಸವದ ಹಿನ್ನಲೆಯಲ್ಲಿ ಭಾನುವಾರ ನಗರದ ವಿಶ್ವೇಶ್ವರಯ್ಯ ಶಾಲಾ ಮೈದಾನದಲ್ಲಿ ಅಡುಗೆ ಸ್ಪರ್ಧೆ ನಡೆಯಿತು. ಇದರಲ್ಲಿ 86 ಸ್ಪರ್ಧಿಗಳು ಭಾಗವಹಿಸಿ ವಿವಿಧ ಬಗೆಯ ಸ್ಥಳೀಯ ಆಹಾರ ಖಾದ್ಯಗಳನ್ನು ಉಣಬಡಿಸಿದರು. ಮೊದಲ ಸುತ್ತಿನಲ್ಲಿ ಸ್ಪರ್ಧಿಗಳೆಲ್ಲರೂ ಚಪಾತಿ ಮತ್ತು ಅವರಿಗೆ ಇಷ್ಟವಾದ ಪಲ್ಯಗಳನ್ನು ಮಾಡಿದರು. ಎರಡನೇ ಸುತ್ತಿನಲ್ಲಿ ಅವರಿಗೆ ಇಷ್ಟವಾದ ವಿವಿಧ ಬಗೆ ಸಸ್ಯ ಮತ್ತು ಮಾಂಸಹಾರದ ನಾನಾ ಬಗೆಯ ಖಾದ್ಯಗಳನ್ನು ಮಾಡಿ ಅಡುಗೆ ಸ್ಪರ್ಧೆಗೆ ಕಳೆ ತಂದರು. ಈ ಅಡುಗೆ ಸ್ಪರ್ಧೆಯನ್ನು ಮಾಜಿ ನಗರಸಭೆ ಸದಸ್ಯರಾದ ಲೀಲಾವತಿ ಹಾಗೂ ಆಹಾರ ಮಾತ್ತು ನಾಗರಿಕರ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕಿ ಸವಿತ ಅವರು ಚಾಲನೆ ನೀಡಿದರು. ಈ ವೇಳೆ ನೂರಾರು ಮಹಿಳೆಯರು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಅದೇ ರೀತಿಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಸೇರಿದಂತೆ ಹಲವು ಗಣ್ಯರು ಪುಷ್ಪ ಪ್ರದರ್ಶನ ಒಟ್ಟು 8 ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಸಿಗಲಿದೆ.

English summary
Minister Munirathna apricial Minister Dr. K sudhakar for well organising Chikkaballapur utsava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X