ರಾಗಿಗೆ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತಲೂ ಹೆಚ್ಚಿನ ದರ: ರಾಗಿ ಮಾರಲು ಚಿಕ್ಕಬಳ್ಳಾಪುರ ರೈತರ ಹಿಂದೇಟು!

ಕೋಲಾರ ಜನವರಿ 12: ಇಳುವರಿ ಕುಸಿದರೂ ರಾಗಿಗೆ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತಲೂ ಹೆಚ್ಚಿನ ದರ ಲಭಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಗಿ ಮಾರಲು ರೈತರು ನಿರಾಸಕ್ತಿ ತೋರಿಸುತ್ತಿದ್ದಾರೆ. ಕಳೆದ ವರ್ಷ ಕನಿಷ್ಠ ಬೆಂಬಲ ಬೆಲೆಗೆ ರಾಗಿ ಮಾರಲು ಪೈಪೋಟಿಯಿತ್ತು. ಈ ಬಾರಿ ಬೆಂಬಲ ಬೆಲೆ ಹೆಚ್ಚಿಸಿದರೂ ನೋಂದಣಿ ಮಾಡಿಸುತ್ತಿಲ್ಲ. ಹೀಗಾಗಿ ನೋಂದಣಿ ಅವಧಿಯನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.

ಅರ್ಧದಷ್ಟು ಸಂಗ್ರಹವಿಲ್ಲ

ಆಹಾರ ಇಲಾಖೆ ಮತ್ತು ಆಹಾರ ನಿಗಮ ನಿಯಮಿತಕ್ಕೆ ಸರಕಾರ ರೈತರಿಂದ 6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಸುವ ಗುರಿ ನೀಡಿದೆ. ಆದರೆ ಜ.10 ರ-ವರೆಗೆ ರಾಜ್ಯಾದ್ಯಂತ ಕೇವಲ 1,11,371 ರೈತರು ಮಾತ್ರವೇ ನೋಂದಣಿ ಮಾಡಿಸಿದ್ದು, 2.50 ಮೆಟ್ರಿಕ್‌ ಟನ್‌ ರಾಗಿ ಸಂಗ್ರಹವಾಗಲಿದೆ. ಕಳೆದ ಸಾಲಿನಲ್ಲಿ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 3,578 ರೂ. ನೀಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ268 ರೂ. ಹೆಚ್ಚಿಸಿ 3,846 ರೂ. ಕೊಟ್ಟು, ಚೀಲದ ಹಣ ನೀಡಲಾಗುತ್ತಿದೆ. ಆದರೂ ರೈತರು ಮುಂದೆ ಬರುತ್ತಿಲ್ಲ.

Market price of millet above minimum support price: Farmers reluctant to sell millet

4 ಸಾವಿರ ರೂ. ದಾಟಿದ ರಾಗಿ ಬೆಲೆ!

ಈ ನಡುವೆ ಸಗಟು ಮಾರುಕಟ್ಟೆಯಲ್ಲಿ ರಾಗಿಗೆ ತೀವ್ರ ಬೇಡಿಕೆ ಸೃಷ್ಟಿಯಾಗಿದೆ. ಕ್ವಿಂಟಾಲ್‌ ರಾಗಿಯ ಬೆಲೆ 4 ಸಾವಿರ ರೂ. ದಾಟಿದ್ದು, ಹೊಸ ರಾಗಿ ಹಾಗೂ ಕೆಂಪು ರಾಗಿಗೆ ಬೇಡಿಕೆ ಹೆಚ್ಚಿದೆ. ಇದರಿಂದ ಸಗಟು ಮಾರುಕಟ್ಟೆಯಲ್ಲಿ ರಾಗಿ ಮಾರಲು ರೈತರು ಉತ್ಸುಕರಾಗಿದ್ದಾರೆ. ಗುಣಮಟ್ಟವಿಲ್ಲದಂತಹ ಕಪ್ಪು ರಾಗಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದಾರೆ.

ಶೇ.50ರಷ್ಟು ಗುರಿ ಸಾಧನೆ ಅನುಮಾನ

2022-23ನೇ ಸಾಲಿನಲ್ಲಿ 3,04,537 ರೈತರು 4,54,404 ಮೆಟ್ರಿಕ್‌ ಟನ್‌ ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಕೊಂಡಿದ್ದರು. ಆದರೆ, ಈ ಬಾರಿ 6 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಸಂಗ್ರಹ ಗುರಿ ನೀಡಲಾಗಿದೆ. ಆದರೆ, ಗುರಿಯ ಶೇ.50ರಷ್ಟು ಸಾಧನೆ ಮಾಡುವುದು ಕಷ್ಟ ಎನ್ನುವಂತಹ ಪರಿಸ್ಥಿತಿಯಿದೆ.

Market price of millet above minimum support price: Farmers reluctant to sell millet

ಮಿತಿ ತೆಗೆದರೂ ಪ್ರಯೋಜನವಿಲ್ಲ

ಸರಕಾರ ಈ ಹಿಂದೆ ಸಣ್ಣ ರೈತರಿಂದ ಮಾತ್ರವೇ ರಾಗಿ ಖರೀದಿಸುತ್ತಿತ್ತು. ಆದರೆ, ಈ ಬಾರಿ ನಿಯಮ ಸಡಿಲಿಸಿ ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಎಲ್ಲ ರೈತರಿಂದ ಅವರು ಹೊಂದಿರುವ ಜಮೀನಿಗೆ ಅನುಗುಣವಾಗಿ ರಾಗಿ ಖರೀದಿಸಲಾಗುತ್ತಿದೆ. ಇಷ್ಟಾದರೂ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿಲ್ಲ.

ಭತ್ತಕ್ಕಿಂತ ರಾಗಿಗೇ ಹೆಚ್ಚು ಬೆಲೆ

ಗ್ರಾಮೀಣ ಭಾಗದಲ್ಲಿ ರಾಗಿ ಬಡವರು ಸೇವಿಸುವ ಆಹಾರ, ಅಕ್ಕಿ ಶ್ರೀಮಂತರು ಸೇವಿಸುವ ಆಹಾರ ಎಂದು ಕರೆಯಲಾಗುತ್ತದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಭತ್ತದ ಬೆಲೆಗಿಂತ ಹೆಚ್ಚಾಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಾಲ್‌ ರಾಗಿಗೆ 3846 ರೂ. ಬೆಲೆ ನಿಗದಿ ಮಾಡಿದ್ದರೆ, ಭತ್ತಕ್ಕೆ 2183 ರಿಂದ 2203 ರೂ. ವರೆಗೆ ಬೆಲೆ ನಿಗದಿ ಮಾಡಿದೆ. ಇನ್ನು ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ ರಾಗಿ ಬೆಲೆ 4,000 ರೂ. ದಾಟಿದ್ದು, ಸುಗ್ಗಿಕಾಲ ಮುಗಿದರೆ ರಾಗಿ ಬೆಲೆ ಪ್ರತಿ ಕ್ವಿಂಟಾಲ್‌ಗೆ 5,000 ರೂ. ಸಗಟು ದರ, 60 ರೂ. ಗೂ ಹೆಚ್ಚು ಚಿಲ್ಲರೆ ದರ ಹೆಚ್ಚಾಗಲಿದೆ ಎಂದು ವರ್ತಕರು ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+