• search
  • Live TV
ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿಕ್ಕಬಳ್ಳಾಪುರ: ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ತಂದೆಗೆ ಸಜೆ

|

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 06: ಸ್ವಂತ ಮಗಳಿಗೆ ಪದೇ-ಪದೇ ಲೈಂಗಿಕ ಕಿರುಕುಳ ನೀಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ತಂದೆಗೆ ನ್ಯಾಯಾಲಯವು 10 ವರ್ಷ ಕಾರಾಗೃಹ ಸಜೆ ಮತ್ತು 10,000 ದಂಡ ವಿಧಿಸಿದೆ.

ಚಿಕ್ಕಬಳ್ಳಾಪುರ ನಗರದಲ್ಲಿ ವಾಸವಿದ್ದ ಪಾಂಡುರಂಗ (54) ಎಂಬಾತ ಎಂಜಿನಿಯರಿಂಗ್ ಓದುತ್ತಿದ್ದ ತನ್ನ ಮಗಳು ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಪದೇ-ಪದೇ ಚಿತ್ರೀಕರಣ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ.

ಪೋಕ್ಸೊ ತಿದ್ದುಪಡಿ ಅಂಗೀಕಾರ: ಅಪ್ರಾಪ್ತರ ಮೇಲಿನ ಅತ್ಯಾಚಾರಕ್ಕೆ ಗಲ್ಲು

2013 ರಲ್ಲಿ ಘಟನೆ ನಡೆದಿದ್ದು, ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಪಾಂಡುರಂಗನ ಮಗಳು ಅಪ್ಪನ ಕಿರುಕುಳ ತಾಳಲಾರದೆ ನವೆಂಬರ್ 28, 2013 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಆರಂಭದಲ್ಲಿ ಮಾನಸಿಕ ಕ್ಷೋಭೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿತ್ತು. ಆದರೆ ಘಟನೆ ನಡೆದ ಒಂದು ತಿಂಗಳ ನಂತರ ಆತನ ಪತ್ನಿಯೇ ಪೊಲೀಸ್ ಠಾಣೆಗೆ ಗಂಡ, ಮಗಳಿಗೆ ನೀಡಿದ್ದ ಲೈಂಗಿಕ ಕಿರುಕುಳದ ಬಗ್ಗೆ ಮಾಹಿತಿ ನೀಡಿ ದೂರು ಕೊಟ್ಟಿದ್ದಳು.

ಅದರಂತೆ ತನಿಖೆ ನಡೆಸಿದ ಚಿಕ್ಕಬಳ್ಳಾಪುರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅದರಂತೆ ವಿಚಾರಣೆ ನಡೆಸಿ ಅಂತಿಮವಾಗಿ ಆರು ವರ್ಷದ ನಂತರ ಆರೋಪಿಗೆ 10 ವರ್ಷ ಜೈಲು ಸಜೆ ಜೊತೆಗೆ 10,000 ದಂಡ ಜುಲ್ಮಾನೆ ವಿಧಿಸಲಾಗಿದೆ.

English summary
A Man who Sexually harassed his daughter and influenced her to kill her self sent to Jail for 10 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X