ಚಿಕ್ಕಬಳ್ಳಾಪುರದಲ್ಲಿ ಹಿಪ್ಪುನೇರಳೆ ಸೊಪ್ಪಿಗೆ ಹೆಚ್ಚಾಯ್ತು ಬೇಡಿಕೆ, ಬೆಳಗಾರರಿಗೆ ಕಂಟಕವಾಯ್ತು ಚಳಿಗಾಲ!

ಚಿಕ್ಕಬಳ್ಳಾಪುರ ನವೆಂಬರ್ 21:- ಚಿಕ್ಕಬಳ್ಳಾಪುರದಲ್ಲಿ ರೇಷ್ಮೆ ಗೂಡಿನ ದರ ಕುಸಿತದ ಪರಿಣಾಮ ಹಿಪ್ಪುನೇರಳೆ ಸೊಪ್ಪಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಇದರಿಂದ ಸೊಪ್ಪಿನ ಬೆಲೆ ಏರಿಕೆಯಾಗಿದ್ದು ಮುಂಬರುವ ಬೇಸಿಗೆಯಲ್ಲಿ ಇದರ ಬೆಲೆ ಮತ್ತಷ್ಟು ಏರಿಕೆಯಾಗಲಿದೆ.

ಹೌದು.. ರೇಷ್ಮೆಗೆ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೇಷ್ಮೆ ಹುಳ ಸಾಕಲು ಹಿಪ್ಪು ನೇರಳೆ ಸೊಪ್ಪಿನ ಅಭಾವ ಸೃಷ್ಟಿಯಾಗಿದೆ. ಇದರಿಂದಾಗಿ ರೇಷ್ಮೆ ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ಚಳಿ ಹೆಚ್ಚಾಗಿರುವುದರಿಂದ ಹಿಪ್ಪು ನೇರಳೆ ಸೊಪ್ಪು ಬೆಳೆವಣಿಗೆಯಲ್ಲಿ ಕುಂಠಿತಗೊಳ್ಳುತ್ತಿರುವ ಪರಿಣಾಮ ಹಿಪ್ಪುನೇರಳೆ ಸೊಪ್ಪಿಗೆ ಹೆಚ್ಚು ಬೇಡಿಕೆ ಇದೆ. ಪ್ರಸ್ತುತ ರೇಷ್ಮೆಹುಳ ಇಟ್ಟಿರುವ ರೈತರು ಹಿಪ್ಪುನೇರಳೆ ಸೊಪ್ಪಿಗಾಗಿ ಅಲೆದಾಡುವಂತಹ ಪರಿಸ್ಥಿತಿ ಉದ್ಭವಿಸಿದೆ.

problem-of-not-growing-hippenerale-soppu

14,158 ಹೆಕ್ಟೇ‌ರ್‌ನಲ್ಲಿ ಹಿಪ್ಪು ನೇರಳೆ ಸೊಪ್ಪು ಬೆಳೆ

ಜಿಲ್ಲೆಯಲ್ಲಿ ಸುಮಾರು 14,150ಕ್ಕೂ ಹೆಚ್ಚು ಹೆಕ್ಟೇ‌ರ್ ಪ್ರದೇಶದಲ್ಲಿ ಹಿಪ್ಪು ನೇರಳೆ ಸೊಪ್ಪು ಬೆಳೆಯಲಾಗುತ್ತಿದೆ. 16200ಕ್ಕೂ ಅಧಿಕ ರೇಷ್ಮೆ ಬೆಳೆಗಾರರು, 4450ಕ್ಕೂ ಅಧಿಕ ರೇಷ್ಮೆ ಗೂಡು ಖರೀದಿಸುವ ರೀಲರ್‌ಗಳಿದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಡ್ಲಘಟ್ಟ ತಾಲೂಕಿನ ರೈತರು ರೇಷ್ಮೆ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ.

ಸೊಪ್ಪಿನ ಬೆಳೆ ಬೆಳವಣಿಗೆಯಲ್ಲಿ ಕುಂಠಿತ:-

ಪ್ರಸ್ತುತ ವಾತಾವರಣದಲ್ಲಿ ಚಳಿ ಹೆಚ್ಚಾಗಿರುವುದರಿಂದ ಸೊಪ್ಪಿನ ಬೆಳೆ ಬೆಳೆವಣಿಗೆಯಲ್ಲಿ ಕುಂಠಿತವಾಗಿದೆ. ಇದಲ್ಲದೆ ಬಹುತೇಕ ಕಡೆ ಸೊಪ್ಪಿನಲ್ಲಿ ವೈರಸ್ ರೋಗ ಬಾಧೆ ಹೆಚ್ಚಳವಾಗಿದ್ದು, ಸೊಪ್ಪಿನ ಚಿಗುರಿನ ಕೊಡಿಗೆ ನುಸಿ ರೋಗ, ಬೂದಿ ರೋಗ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಬೆಳೆಗಾರರು ರೋಗ ನಿಯಂತ್ರಿಸಲು ಔಷಧಗಳನ್ನು ಸಿಂಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

problem-of-not-growing-hippenerale-soppu

ಸೊಪ್ಪಿಗೆ ಅಭಾವ

ಹಿಪ್ಪು ನೇರಳೆ ಬೆಳೆ ಒಂದು ಬಾರಿ ಕಟಾವಾದ ನಂತರ 50 ದಿನಗಳಿಗೆ ಮತ್ತೊಂದು ಕಟಾವು ಮಾಡಬಹುದಾಗಿದೆ. ಕಳೆದ ಹಲವು ದಿನಗಳಿಂದ ಚಳಿ ಹೆಚ್ಚಾಗಿರುವ ಕಾರಣಕ್ಕೆ 60 ದಿನಗಳಾದರೂ ಸೊಪ್ಪು ಬೆಳೆಯುತ್ತಿಲ್ಲ. ಇದರ ಪರಿಣಾಮ ಸೊಪ್ಪಿಗೆ ಬೇಡಿಕೆ ಸೃಷ್ಟಿಯಾಗಿ ಬೆಲೆ ದುಬಾರಿಯಾಗಿದೆ.

100 ಮೊಟ್ಟೆಗೆ 40 ಮೂಟೆ ಸೊಪ್ಪು ಅವಶ್ಯ:-

100 ಮೊಟ್ಟೆ ರೇಷ್ಮೆ ಹುಳ ಸಾಕಲು ಕನಿಷ್ಠ 35 ರಿಂದ 40 ಮೂಟೆ ಗುಣಮಟ್ಟದ ಹಿಪ್ಪು ನೇರಳೆ ಸೊಪ್ಪು ಅಗತ್ಯವಿದೆ. ಪ್ರಸ್ತುತ ಚಳಿ ಹೆಚ್ಚಾಗಿರುವುದರಿಂದ ಹಿಪ್ಪು ನೇರಳೆ ಸೊಪ್ಪಿನ ಕೊಡಿ ಮೇಲೆಳುತ್ತಿಲ್ಲ. ಹಾಗಾಗಿ ನಿಧಾನಗತಿಯಲ್ಲಿ ಬೆಳೆಯುತ್ತಿರುವ ಹಿಪ್ಪು ನೇರಳೆ ಸೊಪ್ಪಿಗೆ ಬೇಡಿಕೆ ಸೃಷ್ಟಿಯಾಗಿದೆ.

problem-of-not-growing-hippenerale-soppu

1 ಮೂಟೆ ಬೆಲೆ 600 ರೂಪಾಯಿ:--

1 ಎಕರೆ ಜಮೀನಿನಲ್ಲಿ ಬೆಳೆಯಬಹುದಾದ ಹಿಪ್ಪುನೇರಳೆ ಸೊಪ್ಪಿನಲ್ಲಿ 125 ರಿಂದ 150 ಮೊಟ್ಟೆ ಹುಳ ಸಾಕಾಣಿಕೆ ಮಾಡಬಹುದು. ಬರೀ ಸೊಪ್ಪು ಬೆಳೆದು ಮಾರಾಟ ಮಾಡುವವರಿಗೆ ಪ್ರಸ್ತುತ ಉತ್ತಮ ಆದಾಯ ದೊರೆಯುತ್ತಿದೆ. 1 ಮೂಟೆ ಹಿಪ್ಪು ನೇರಳೆ ಸೊಪ್ಪು 550ರಿಂದ 700 ರೂ.ವರೆಗೆ ಮಾರಾಟವಾಗುತ್ತಿದೆ. ಮುಂಬರುವ ದಿನಗಳಲ್ಲಿ ಸೊಪ್ಪಿನ ಬೆಲೆಯಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ರೇಷ್ಮೆ ಬೆಳೆಗಾರರು.

ಸೊಪ್ಪಿಗಿಂತ ಗೂಡಿನ ದರ ಕಡಿಮೆ:-

ಪ್ರಸ್ತುತ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ದರ 350ರಿಂದ 470ರ ಆಸುಪಾಸಿನಲ್ಲಿದೆ. ಸ್ವಂತ ಹಿಪ್ಪುನೇರಳೆ ಸೊಪ್ಪು ಹೊಂದಿರುವ ರೈತರಿಗೆ ಲಾಭದಾಯಕವಾದರೂ, ಸೊಪ್ಪು ಖರೀದಿಸಿ ರೇಷ್ಮೆ ಹುಳ ಸಾಕುವ ರೈತರಿಗೆ ಸೊಪ್ಪಿನ ಬೆಲೆ ದುಬಾರಿಯಾಗಿದೆ. ಹೀಗಾಗಿ ಇದನ್ನೇ ನಂಬಿಕೊಂಡಿರುವ ಬೆಳೆಗಾರರಲ್ಲಿ ಸದ್ಯ ಆತಂಕ ಮನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+