Chikkaballapur: ಜಾನುವಾರಗಳಿಗೆ ಕಾಲುಬಾಯಿ ಜ್ವರ ಹೆಚ್ಚಳ: ಅ. 21ರಿಂದ ಲಸಿಕೆ ಅಭಿಯಾನ
ಚಿಕ್ಕಬಳ್ಳಾಪುರ ಅಕ್ಟೋಬರ್ 19: ಸೀಳು ಗೊರಸುಳ್ಳ ಸಾಕುಪ್ರಾಣಿ ಹಾಗೂ ಕಾಡು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಕಾಲುಬಾಯಿ ಜ್ವರ ಗಾಳಿಯಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು ಆತಂಕ ಪಡುವ ಅಗತ್ಯವಿಲ್ಲ, ಆದರೆ ಸಕಾಲಕ್ಕೆ ಲಸಿಕೆ ಹಾಕಿಸಿ ಔಷದೋಪಚಾರ ಮಾಡಿ ಆರೈಕೆ ಮಾಡುವುದರಿಂದ ರೋಗವನ್ನು ನಿಯಂತ್ರಿಸಬಹುದು ಎಂದು ಜಿಲ್ಲಾಧಿಕಾರಿ ಪಿ. ಎನ್. ರವೀಂದ್ರ ತಿಳಿಸಿದರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 6ನೇ ಸುತ್ತಿನ ಕಾಲುಬಾಯಿ ಲಸಿಕಾ ಅಭಿಯಾನ ಅಕ್ಟೋಬರ್ 21ರಿಂದ ನವೆಂಬರ್ 20 ವರೆಗೆ ಹಮ್ಮಿಕೊಳ್ಳಲಾಗಿದೆ. ಕಳೆದ ಏಪ್ರಿಲ್ ಮತ್ತು ಮೇನಲ್ಲಿ ಹಮ್ಮಿಕೊಂಡಿದ್ದ 5ನೇ ಸುತ್ತಿನ ಲಸಿಕಾ ಅಭಿಯಾನದಡಿ ಜಿಲ್ಲೆಯ 1,77,661 ( ಹಸು ಎಮ್ಮೆ ಪೈಕಿ ) 1,76,191 ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಶೇ. 99% ರಷ್ಟು ಸಾಧನೆ ತೋರಲಾಗಿದೆ.

2002 ರಿಂದ 2019 ರವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ 60:40ರ ಅನುದಾನದಲ್ಲಿ 17ನೇ ಸುತ್ತಿನ ರಸಿಕ ಅಭಿಯಾನ ಬಳಿಕ ಕೇಂದ್ರದ ಶೇಕಡ 100ರಷ್ಟು ಅನುದಾನದಲ್ಲಿ 5ನೇ ಹಂತದ ರಸಿಕ ಅಭಿಯಾನ ಕೈಗೊಳ್ಳಲಾಗಿದೆ. ಇದೀಗ ಜಿಲ್ಲೆಯಲ್ಲಿ 6ನೇ ಹಂತದ ಅಭಿಯಾನ 30 ದಿನ ನಡೆಯಲಿದ್ದು ಪಶು ವೈದ್ಯ ಮತ್ತು ಪಶು ಪಾಲನಾ ಇಲಾಖೆ ಜೊತೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ಲಸಿಕಾ ಅಭಿಯಾನದ ಯಶಸ್ವಿಗಾಗಿ ಸಹಕಾರ ನೀಡಲಿದೆ .
2019 ರಲ್ಲಿ ನಡೆಸಿದ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 2,40,212 ( ಧನ ಮತ್ತು ಎಮ್ಮೆ ) ಜಾನುವಾರುಗಳಿವೆ. ಲಸಿಕಾ ಅಭಿಯಾನ ಯಶಸ್ವಿಗಾಗಿ 73 ತಾಂತ್ರಿಕ ತಂಡಗಳನ್ನ ರಚಿಸಲಾಗಿದೆ. ಒಂದು ತಂಡಕ್ಕೆ ತಲಾ ಒಬ್ಬ ಪಶು ವೈದ್ಯಾಧಿಕಾರಿ ನೇತೃತ್ವ ವಹಿಸಲಿದ್ದು 220 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈಗಾಗಲೇ 1,89,800 ಡೋಸ್ ಲಸಿಕೆ ಮತ್ತು ಔಷಧ ಸರಬರಾಜು ಪ್ರತಿದಿನ 50ರಿಂದ 60 ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ ಆನ್ಲೈನಲ್ಲಿ ಪ್ರತಿದಿನದ ಪ್ರಗತಿಯನ್ನು ತಾಲೂಕು ಪಶು ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತದೆ.
ಅಭಿಯಾನ ಯಶಸ್ವಿಗೊಳಿಸಲು ಸಲಹೆ :-
ಕಾಲುಬಾಯಿ ಜ್ವರದ ನಿರ್ಮೂಲನೆಗಾಗಿ ಕಡ್ಡಾಯವಾಗಿ ರಾಸುಗಳಿಗೆ ಲಸಿಕೆ ಹಾಕಿಸಬೇಕು. ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ pn ರವೀಂದ್ರ ಮನವಿ ಮಾಡಿದರು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅಭಿಯಾನದ ಪೋಸ್ಟರ್ ಗಳನ್ನ ಬಿಡುಗಡೆಗೊಳಿಸಿ ಮಾತನಾಡಿ, ಜಾನುವಾರು ಮಾಲೀಕರು ಅಭಿಯಾನವನ್ನು ಬಳಸಿಕೊಂಡು ಜಾನುವಾರುಗಳನ್ನು ಕಾಲು ಬಾಯಿ ರೋಗದಿಂದ ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಯಾವ ಯಾವ ಪ್ರಾಣಿಗಳಿಗೆ ಲಸಿಕೆ?
ಸೀಳು ಗೊರ ಸುಳ್ಳ ದನ ಎಮ್ಮೆ ಹಂದಿ ಕುರಿ ಮೇಕೆ ಹಾಗೂ ಇತರೆ ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ರೋಗವಾಗಿದ್ದು ಈ ಪ್ರಾಣಿಗಳಿಗೆ ಲಸಿಕೆ ಹಾಕಿಸುವ ಅವಶ್ಯಕತೆ ಇದೆ.
ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಜಿ ಟಿ ನಿಟ್ಟಾಲಿ, ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಎಚ್ ಎನ್ ರಂಗಪ್ಪ, ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾಕ್ಟರ್ ಲಕ್ಷ್ಮಣ್, ಮುಖ್ಯ ಪಶು ವೈದ್ಯಧಿಕಾರಿಗಳಾದ ಡಾ. ಎಂ ಎನ್ ಚನ್ನಕೇಶವರೆಡ್ಡಿ, ಡಾ. ಬಿಕೆ ರಮೇಶ್, ಡಾಕ್ಟರ್ ಮಾರುತಿ, ತಾಂತ್ರಿಕ ವಿಭಾಗದ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಎಸ್. ಎಂ. ಶೀಲಾ, ಕೋಚಿಂಗ್ ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಡಿ.ಕೆ ಶಿವಕುಮಾರ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.












Click it and Unblock the Notifications