ರೇಷ್ಮೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗಿಲ್ಲ ಮುಕ್ತಿ: ಗ್ರಾಮೀಣ ಭಾಗದಲ್ಲೂ ಅಭಾವ ಅಂತರ್ಜಲ ಮಟ್ಟ ಕುಸಿತ
ಚಿಕ್ಕಬಳ್ಳಾಪುರ /ಶಿಡ್ಲಘಟ್ಟ ಮಾರ್ಚ್ 8: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ವ್ಯಾಪ್ತಿಯ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಈಗಾಗಲೆ ಕುಡಿಯುವ ಮತ್ತು ದಿನ ನಿತ್ಯದ ಬಳಕೆಯ ನೀರಿಗೆ ಆಹಾಕಾರ ಶುರುವಾಗಿದೆ. ಕೃಷಿ ಬಳಕೆಯ ನೀರಿನ ವಿಚಾರದಲ್ಲೂ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗೇ ನಿಲ್ಲ, ಬೇಸಿಗೆಯ ಆರಂಭದ ದಿನಗಳಲ್ಲಿ ಬಿಸಿಲ ಬೇಗೆಗಿಂತಲೂ ನೀರಿನ ಬವಣೆಯ ಬಿಸಿಯೇ ಹೆಚ್ಚಿನ ಪ್ರಮಾಣದಲ್ಲಿ ಎಲ್ಲರಿಗೂ ತಟ್ಟುತ್ತಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್ ತಿಂಗಳಿಂದ ನೀರಿನ ಸಮಸ್ಯೆ ಕಾಣಿಸಿಕೊಂಡು ಜೂನ್ ಜುಲೈನಲ್ಲಿ ಒಂದೆರಡು ಭಾರಿ ಬಿರುಸಿನ ಮಳೆ ಬೀಳುವ ತನಕ ಕುಡಿಯುವ, ಇತರೆ ಬಳಕೆಯ ಹಾಗೂ ಕೃಷಿಗೆ ನೀರಿನ ಸಮಸ್ಯೆ ಸಹಜ. ಆದರೆ ಈ ವರ್ಷ ಜನವರಿಯಿಂದಲೆ ಸಮಸ್ಯೆ ಕಾಣಿಸಿಕೊಂಡಿದೆ. ಫೆಬ್ರವರಿ, ಮಾರ್ಚ್‌ನಲ್ಲಿ ಇನ್ನಷ್ಟು ಬಿಗಡಾಯಿಸಿದ್ದು, ಮುಂದಿನ ಎರಡು ತಿಂಗಳು ಸಮಸ್ಯೆ ತಂದೊಡ್ಡುವ ಲಕ್ಷಣಗಳು ಕಾಣಿಸುತ್ತಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯು ಶಾಶ್ವತ ನದಿ ನಾಲೆಗಳನ್ನು ಹೊಂದಿಲ್ಲ, ಮಳೆ ಅಶ್ರಿತ ಬಯಲು ಸೀಮೆಯಾಗಿದ್ದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಇರುವಂತೆ ಶಿಡ್ಲಘಟ್ಟ ತಾಲೂಕಿನಲ್ಲೂ ಸಹ ಕುಡಿಯುವ ನೀರಿಗಾಗಲಿ, ಕೃಷಿ ಬಳಕೆಯ ನೀರಿಗಾಗಲಿ ಕೊಳವೆಬಾವಿ ಗಳನ್ನು ನೆಚ್ಚಿ ಕೊಂಡಿರುವ ಇಲ್ಲಿನ ಜನತೆಗೆ ಮಳೆಗಾಲದಲ್ಲಿ ಕೆರೆಗಳಲ್ಲಿ ತುಂಬಿರುವ ಮಳೆ ನೀರೆ ಆಸರೆಯಾಗಿದೆ. ಆದರೆ ಕಳೆದ ವರ್ಷ ವಾಡಿಕೆಯಷ್ಟು ಮಳೆ ಬೀಳದ ಕಾರಣ ನವೆಂಬರ್ ಡಿಸೆಂಬರ್ ವೇಳೆಗಾಗಲೆ ಕೆರೆಗಳು ಸಂಪೂರ್ಣ ಬತ್ತಿವೆ. ಅಂತರ್ಜಲ ಮಟ್ಟ ಕುಸಿದಿದೆ. ಕೊಳವೆಬಾವಿ ಗಳಲ್ಲೂ ದಿನ ಕಳೆ ದಂತೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ನೀರಿಗೆ ಹಾಹಾಕಾರ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ನಗರದಲ್ಲಿ ಸಮಸ್ಯೆ ಅನಾವರಣ:
ರೇಷ್ಮೆನಗರಿ ಶಿಡ್ಲಘಟ್ಟದಲ್ಲಿ 55 ಸಾವಿರದಷ್ಟು ಜನ ಸಂಖ್ಯೆಯಿದೆ. ಒಳಚರಂಡಿ(ಯುಜಿಡಿ) ವ್ಯವಸ್ಥೆ ಇರುವ ನಗರಗಳಲ್ಲಿ ನಿಯಮದಂತೆ ಪ್ರತಿ ವ್ಯಕ್ತಿಗೂ ಪ್ರತಿ ದಿನ 135 ಲೀಟನರ್‌ಷ್ಟು ಕುಡಿಯುವ ಮತ್ತು ಇತರೆ ಬಳಕೆಯ ನೀರನ್ನು ಪೂರೈಕೆ ಮಾಡಬೇಕಾಗುತ್ತದೆ.
ಆದರೆ ಶಿಡ್ಲಘಟ್ಟದಲ್ಲಿ ಕೇವಲ 50 ಲೀಟರ್ ನಷ್ಟು ನೀರನ್ನು ಮಾತ್ರವೇ ಪೂರೈಸಲಾಗುತ್ತಿದೆ. ನಿಯಮ ದಂತೆ ಹಾಗೂ ಅಗತ್ಯದಷ್ಟು ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿಲ್ಲ, ಶೇ. 30ರಷ್ಟು ಮಾತ್ರ ಪೂರೈಸುತ್ತಿದ್ದು ಶೇ 70ರಷ್ಟು ಕೊರತೆ ಕಾಡುತ್ತಿದೆ.
ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರಿಗಾಗಿ ನಗರ ದಲ್ಲಿ ಹಾಗೂ ನಗರದ ಸುತ್ತಲಿನ ಕೆರೆಗಳ ಅಂಗಳದಲ್ಲಿ 127 ಕೊಳವೆಬಾವಿಗಳನ್ನು ಕೊರೆಸಿದ್ದು ಸದ್ಯಕ್ಕೆ 105 ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಖಾಸಗಿಯ 10 ಕೊಳವೆಬಾವಿಗಳನ್ನು ವಶಕ್ಕೆ ಪಡೆದಿದ್ದು, ಅವುಗಳ ಪೈಕಿ 5 ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ.
ನಗರದ ನಿವಾಸಿಗಳಿಗೆ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಇದೀಗ ಬೇಸಿಗೆ ಆರಂಭವಾಗುತ್ತಿದ್ದಂತೆ 10-12 ದಿನಕ್ಕೊಮ್ಮೆ ನೀರನ್ನು ಸರಬರಾಜು ಮಾಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಷ್ಟು ಪ್ರಮಾಣದ ನೀರನ್ನು ಪೂರೈಸುವುದು ಸಹ ಕಷ್ಟವಾಗಲಿದೆ.
ಕೆಲವು ಹಳ್ಳಿಗಳಲ್ಲೂ ಸಮಸ್ಯೆ:
ಮಿತ್ತನಹಳ್ಳಿ, ತಾದೂರು. ಜಂಗಮಕೋಟೆ, ಎಲ್.ಎನ್.ಹೊಸೂರು, ಕಳ್ಳಾ ಪುರ ಗ್ರಾಮಗಳಲ್ಲಿ ಈಗಾಗಲೆ ಖಾಸಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರನ್ನು ಪೂರೈಸಲಾ ಗುತ್ತಿದೆ. ಕೆಂಪನಹಳ್ಳಿ, ಭಕ್ತರಹಳ್ಳಿ, ಚೀಮಂಗಲ, ವಲ್ಲಪನಹಳ್ಳಿ, ಸೀತಹಳ್ಳಿ, ಮದ್ದೇಗಾರಹಳ್ಳಿ, ತಲದು ಮ್ಮನಹಳ್ಳಿ, ಹನುಮಂತಪುರ ಸೇರಿದಂತೆ 40 ಗ್ರಾಮ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳಿವೆ.
ಸಾರ್ವಜನಿಕ ಕೊಳವೆ ಬಾವಿಗಳಲ್ಲಿ ನೀರಿಲ್ಲದಾದಾಗ ಖಾಸಗಿ ಕೊಳವೆಬಾವಿ ವಶಕ್ಕೆ ಪಡೆಯ ಬೇಕಾಗುತ್ತದೆ. ಆದರೆ ತಿಂಗಳಿಗೆ ಇಂತಿಷ್ಟು ಹಣ ಕೊಡಲು ಸರಕಾರ ಸಿದ್ದವಿದ್ದರೂ ಖಾಸಗಿ ಬೋರ್ ವೆಲ್ ನ ಮಾಲೀಕರು ನೀರು ಬಿಡಲು ತಯಾರಿಲ್ಲ, ಅವರ ಬೋರ್‌ವೆಲ್ ನಲ್ಲೂ ನೀರಿನ ಕೊರತೆ ಉಂಟಾಗ ಬಹುದೇನೋ ಎಂಬ ಆತಂಕ ಇದಕ್ಕೆ ಕಾರಣ.
ಅದೂ ಅಲ್ಲದೆ ಸರಕಾರದ ಅಧಿಕಾರಿಗಳು ನಾನಾ ಕಾರಣಗಳನ್ನು ಮುಂದಿಟ್ಟು ಬಿಲ್ ಹಣ ನೀಡುವುದು ಬಹಳ ತಡವಾಗುವುದರಿಂದ ಸಾಕಷ್ಟು ರೈತರು ತಮ್ಮ ಬೋರ್ ವೆಲ್‌ಗಳಲ್ಲಿ ನೀರಿದ್ದರೂ ಸರಕಾರಕ್ಕೆ ಬಿಟ್ಟುಕೊಡಲು ಹಿಂದು ಮುಂದು ನೋಡುವಂತಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಇದೊಂದು ಕಾರಣವೂ ಇದೆ.
ಬತ್ತಿದ ಕೆರೆಗಳು:
ಬಯಲುಸೀಮೆ ಭಾಗದ ಶಿಡ್ಲಘಟ್ಟ ದಲ್ಲಿ ಮಳೆನೀರು, ಕೆರೆ ನೀರೆ ಆಧಾರ. ಕೊಳವೆಬಾವಿ ಕೊರೆಸಬೇಕು ನೀರು ಹೊರತೆಗೆದು, ಬಳಸಬೇಕಾದ ಸ್ಥಿತಿ. ಆದರೆ ಶಿಡ್ಲಘಟ್ಟ ತಾಲೂಕಿನ ಯಾವ ಕೆರೆಯಲ್ಲೂ ಸದ್ಯಕ್ಕೆ ನೀರಿಲ್ಲ, ಹಾಗಾಗಿ ಕೊಳವೆಬಾವಿಗಳಲ್ಲೂ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 11.3 ಮೀಟರ್ ನಷ್ಟು ಅಂತರ್ಜಲ ಕುಸಿದಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ 24.08 ಮೀಟರ್‌ನ ಹಂತದಲ್ಲಿದ್ದ ಅಂತರ್ಜಲ ಮಟ್ಟ ಈ ವರ್ಷ ಫೆಬ್ರವರಿ ವೇಳೆಗೆ 35.13 ಮೀಟರ್ ನಷ್ಟು ಆಳಕ್ಕೆ ಕುಸಿದಿದೆ.
ಟ್ಯಾಂಕರ್ ನೀರಿಗೆ ಮೊರೆ:-
ನಗರ ಪ್ರದೇಶದಲ್ಲಿ ವಾಡಿಕೆಯಲ್ಲಿದ್ದ ಟ್ಯಾಂಕರ್ ನೀರಿನ ಬಳಕೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲೂ ಹೆಚ್ಚುತ್ತಿದೆ. ನಗರಕ್ಕೆ ಹೋಲಿಸಿದರೆ, ನೂರು ನೂರೈವತ್ತು ರೂಪಾಯಿ ಕಡಿಮೆಗೆ ಹಳ್ಳಿಗಳಲ್ಲೂಟ್ಯಾಂಕರ್ ನೀರನ್ನು ಪೂರೈಸುವ ಪರಿಪಾಠ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಸಂಪು ನಿರ್ಮಾಣ ಮಾಡಿಕೊಂಡ ಮನೆಗಳವರು ಪೂರ್ತಿ ಟ್ಯಾಂಕರ್ ನೀರು ಹಾಕಿಸಿಕೊಂಡರೆ, ಸಂಪು ಇಲ್ಲದವರು ಅರ್ಧ ಟ್ಯಾಂಕರ್ ಅಥವಾ ಮಿನಿ ಟ್ಯಾಂಕರ್ ನೀರನ್ನು ಹಾಕಿಸಿಕೊಳ್ಳುತ್ತಾರೆ.
ಹುಸಿಯಾದ ನಿರೀಕ್ಷೆ:-
ಕೇಂದ್ರ ಸರಕಾರದ ಜಲ ಜೀವನ್ ಯೋಜನೆ ಕಾಮಗಾರಿ ಸಾಕಷ್ಟು ಗ್ರಾಮಗಳಲ್ಲಿ ಇನ್ನೂ ನಡೆಯುತ್ತಿದೆ. ಬಹುತೇಕ ಗ್ರಾಮಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದಿಲ್ಲ. ಸರಕಾರ ರೂಪಿಸಿರುವ ನೀತಿ ನಿಯಮಗಳಿಂದ ಕಾಮಗಾರಿ ಸಾಕಷ್ಟು ನಿಧಾನಗತಿಯಿಂದ ಸಾಗುತ್ತಿದೆ. ಬೇಸಿಗೆಯ ಕಾಲಕ್ಕೆ ಜಲ ಜೀವನ್ ಯೋಜನೆಯ ನೀರು ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಬೇಸಿಗೆಯಲ್ಲಿ ನೀರಿನ ಬವಣೆ ಮಿತಿ ಮೀರುತ್ತಿದೆ.
ಹಣ ಕೊಟ್ಟು ನೀರು ಖರೀದಿ:-
ಶಿಡಪಟ್ಟ ನಗರದಲ್ಲಿ 4600ಕ್ಕೂ ಹೆಚ್ಚು ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಿವೆ. ನೂಲು ಬಿಚ್ಚಾಣಿಕೆಗೆ ಹೆಚ್ಚಿನ ನೀರಿನ ಅಗತ್ಯವಿದೆ. ನಗರಸಭೆಯಿಂದ ಪೂರೈಕೆಯಾಗುವ ನೀರು ಸಾಕಾಗದೆ ಬಹುತೇಕ ಎಲ್ಲರೀಲರ್ ಗಳೂ ಹಣ ಕೊಟ್ಟು ನೀರನ್ನು ಖರೀದಿಸುತ್ತಾರೆ. ವರ್ಷದ ಎಲ್ಲ ದಿನಗಳಲ್ಲೂ ರೀಲರ್‌ಗಳು ನೀರನ್ನು ಖರೀದಿಸುವುದು ವಾಡಿಕೆ. ಬೇಸಿಗೆಯಲ್ಲಿ ಅದರ ಪ್ರಮಾಣ ದುಪ್ಪಟ್ಟಾಗಲಿದೆ, ಟ್ಯಾಂಕರ್ ನೀರಿಗಾಗಿಯೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಿದೆ ಎಂದು ಅಳಲು ತೋಡಿಕೊಳ್ಳುವರು.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications