ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗುವಿನ ಚಿಕಿತ್ಸೆಗೆ 16 ಕೋಟಿ ರೂ.; ಸಂಕಷ್ಟದಲ್ಲಿ ದಂಪತಿ

By ಚಿಕ್ಕಬಳ್ಳಾಪುರ ಪ್ರತಿನಿಧಿ
|
Google Oneindia Kannada News

ಚಿಕ್ಕಬಳ್ಳಾಪುರ, ಫೆಬ್ರವರಿ 23; ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ಮಲ್ಲಸಂದ್ರ ಗ್ರಾಮದ ನಂದೀಶ ಮತ್ತು ಸೌಮ್ಯಾ ಲತಾ ದಂಪತಿಗಳ ಮುದ್ದಿನ ಮಗ ಯಶ್ವಿಕ್. ಹೆರಿಗೆಯ ನಂತರ ಅವನ ಲಾಲನೆ ಪಾಲನೆಯಲ್ಲಿ 8 ತಿಂಗಳು ಕಳೆದು, 9ನೇ ತಿಂಗಳು ತುಂಬುತ್ತಿದ್ದಾಗ ಅವನಲ್ಲೇನೋ ದೈಹಿಕ ತೊಂದರೆ ಇರುವುದನ್ನು ಪೋಷಕರು ಗಮನಿಸಿದರು.

ತೀರಾ ತನ್ನದೇ ಪ್ರಾಯದ ಇತರ ಮಕ್ಕಳಂತೆ ಕುಳಿತುಕೊಳ್ಳಲಾರನು. ತನ್ನ ತಲೆಯನ್ನು ಎತ್ತಲಾರನು, ಹಾಲು ಕುಡಿಯುವಾಗಲೆಲ್ಲಾ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಉಸಿರಾಡಲಾಗದೆ ಬಿಕ್ಕುವನು. ವೈದ್ಯರಿಗೆ ತೋರಿಸಿದಾಗ ಆಘಾತ ನೀಡುವಂತಹ ವಿಚಾರ ತಿಳಿದುಬಂತು.

ಹುಬ್ಬಳ್ಳಿ: ವೈದ್ಯರ ಎಡವಟ್ಟಿಗೆ ಎರಡು ವರ್ಷದ ಮಗು ಬಲಿಹುಬ್ಬಳ್ಳಿ: ವೈದ್ಯರ ಎಡವಟ್ಟಿಗೆ ಎರಡು ವರ್ಷದ ಮಗು ಬಲಿ

ಅವನಿಗೆ ದೇಹದ ಸ್ನಾಯುಗಳನ್ನು ದುರ್ಬಲಗೊಳಿಸುವ ಅತಿ ಅಪರೂಪದ ಒಂದು ನರಸಂಬಂಧಿತ ಕಾಯಿಲೆ ಇರುವುದು ಪತ್ತೆಯಾಯಿತು. ಈ ಕಾಯಿಲೆಯ ಹೆಸರು ಸ್ಪೈನಲ್ ಮಸ್ಕುಲರ್ ಅಟ್ರೋಫಿ ಪ್ರತಿ 1000 ಮಕ್ಕಳಲ್ಲಿ ಒಂದು ಮಗುವಿಗೆ ಈ ಕಾಯಿಲೆ ಬರಬಲ್ಲದು. ಈ ಕಾಯಿಲೆ ತಗುಲಿದ ಮಕ್ಕಳು ಎರಡು ವರ್ಷಗಳಿಗಿಂತ ಹೆಚ್ಚು ಸಮಯ ಬದುಕಲಾರವು.

ಚಿತ್ರದುರ್ಗ ವಿಶೇಷ: ಕೊಳವೆ ಬಾವಿಗೆ ಮಗು ಬಿದ್ದು ಸತ್ತು 19 ವರ್ಷವಾದರೂ ಸಿಗದ ಪರಿಹಾರ!ಚಿತ್ರದುರ್ಗ ವಿಶೇಷ: ಕೊಳವೆ ಬಾವಿಗೆ ಮಗು ಬಿದ್ದು ಸತ್ತು 19 ವರ್ಷವಾದರೂ ಸಿಗದ ಪರಿಹಾರ!

Child Need 16 Crore For Treatment

ಸಮಾಧಾನದ ಸಂಗತಿಯೆಂದರೆ, ಇದನ್ನು ಗುಣಪಡಿಸಲು ಜೀನ್ ಥೆರಪಿ ಔಷಧಿವೊಂದಿದೆ. ಆ ಔಷಧಿಯ ಹೆಸರು ಝೊಲ್ಗೆನ್ಸ್ಮಾ. ಕೇವಲ ಒಂದೇ ಒಂದು ಝೊಲ್ಗೆನ್ಸ್ಮಾ ಇಂಜೆಕ್ಷನ್ ಕೊಟ್ಟರೆ ಸಾಕು, ತೀರಾಳ ಈ ಸ್ನಾಯು ಸಮಸ್ಯೆ ಶಾಶ್ವತವಾಗಿ ಗುಣವಾಗಿ ಸಾಮಾನ್ಯ ಮಕ್ಕಳಂತೆ ಬೆಳೆಯಬಲ್ಲನು 2006 ರಲ್ಲಷ್ಟೇ ಈ ಔಷಧಿಯನ್ನು ಕಂಡುಹಿಡಿಯಲಾಗಿತ್ತು.

 5 ತಿಂಗಳ ಬಳಿಕ ಮತ್ತೆ ಸಂಬಂಧಿಕರನ್ನು ಸೇರಿದ ಕಾಬೂಲ್‌ನಲ್ಲಿ ನಾಪತ್ತೆಯಾಗಿದ್ದ ಮಗು 5 ತಿಂಗಳ ಬಳಿಕ ಮತ್ತೆ ಸಂಬಂಧಿಕರನ್ನು ಸೇರಿದ ಕಾಬೂಲ್‌ನಲ್ಲಿ ನಾಪತ್ತೆಯಾಗಿದ್ದ ಮಗು

ಆದರೆ ಸಮಸ್ಯೆ ಏನೆಂದರೆ, ಝೊಲ್ಗೆನ್ಸ್ಮಾ ಭಾರತದಲ್ಲೆಲ್ಲೂ ಸಿಗುವುದಿಲ್ಲ, ಅಮೆರಿಕದಿಂದ ಇದನ್ನು ತರಿಸಬೇಕು ಮತ್ತು ಕೇವಲ 14 ದಿನಗಳ 'ಶೆಲ್ಫ್ ಲೈಫ್'ವುಳ್ಳ ಇದರ ಬೆಲೆ 16 ಕೋಟಿ ರೂಪಾಯಿ. ಹೌದು, ನಿಜ ಇದು ನಂಬಲೇ ಬೇಕಾದ ಸತ್ಯ ಅಕ್ಷರಶಃ 16 ಕೋಟಿ ರೂಪಾಯಿಗಳು. ಯಶಸ್ವಿನ್ ತಂದೆ ನಂದಿಶ ಗ್ರಾಮ ಪಂಚಾಯಿತಿ ಕಂಪನಿಯೊಂದರಲ್ಲಿ ಖರ ವಸೂಲಿ ಉದ್ಯೋಗಿ. ತಾಯಿ ಸೌಮ್ಯ ಲತಾ ಗೃಹಿಣಿ. 16 ಕೋಟಿ ರೂಪಾಯಿ ಹಣ ಒಗ್ಗೂಡಿಸಲು ಅವರಿಗೆ ಕನಸಲ್ಲೂ ಸಾಧ್ಯವಾಗದ ಮಾತು.

ಆಗ ಅವರು ಮೊರೆ ಹೋದುದು ಟ್ವಿಟ್ಟರ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್‌ಗಳಲ್ಲೂ ಖಾತೆಗಳನ್ನು ತೆರೆದು ತೀರಾಳ ಕತೆಯನ್ನು ಹಂಚಿಕೊಂಡರು. ಕಂದನ ಬದುಕಿಸೋಕೆ ಒಂದು ತಿಂಗಳ ಗಡುವು ಇದ್ದು, ಇಂತಹ ಸಮಸ್ಯೆ ಇರೋ ಕಂದನಿಗೆ ಎರಡು ತಿಂಗಳಲ್ಲಿ ಚಿಕಿತ್ಸೆ ಕೊಡಿಸಬೇಕು.

ಅಮೆರಿಕಾದಲ್ಲಿ ಸಿಗುವ ಆ ಒಂದು ಚಿಕಿತ್ಸೆ ಸಿಗಬೇಕಿತ್ತು. ಆದರೆ ಮಗುವಿಗೆ ಇನ್ನೂ ಸಂಜೀವಿನಿ ಸಿಕ್ಕಿಲ್ಲ. ಅದು ಕೂಡ ವೈದ್ಯರು ಒಂದು ತಿಂಗಳಲ್ಲಿ ಚಿಕಿತ್ಸೆ ಕೊಡಿಸಲೇಬೇಕು. ಇಲ್ಲವಾದಲ್ಲಿ ಮಗುವಿನ ಜೀವಕ್ಕೆ ಅಪಾಯ ಎಂದು ಹೇಳಿದ್ದಾರೆ. ಇದರಿಂದ ಹೆತ್ತಮ್ಮ ಕರುನಾಡಿನ ಜನತೆ ಮುಂದೆ ಕಂದನನ್ನು ಉಳಿಸಿಕೊಡಿ ಅಂತಾ ಮನವಿ ಮಾಡಿದ್ದಾರೆ.

English summary
Chikkaballapur district Bagepalli child suffering from disease. Child need 16 crore treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X