• search
  • Live TV
ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿಕ್ಕಬಳ್ಳಾಪುರ ಚಿತ್ರಣ : ಕಾಂಗ್ರೆಸ್‌ ಕೋಟೆಯಲ್ಲಿ ಕಮಲ ಅರಳುವುದೇ?

|

ಚಿಕ್ಕಬಳ್ಳಾಪುರ, ಏಪ್ರಿಲ್ 11 : ಕಾಂಗ್ರೆಸ್ ಭದ್ರಕೋಟೆ ಚಿಕ್ಕಬಳ್ಳಾಪುರದಲ್ಲಿ ಕಮಲ ಅರಳಿಸಲು ತಂತ್ರ ರೂಪಿಸಲಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿಗೆ ಗೆಲುವಿದಾಗಿ ಸಾಕಷ್ಟು ಶ್ರಮ ಹಾಕಬೇಕಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏಪ್ರಿಲ್ 18ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಬಿ.ಎನ್.ಬಚ್ಚೇಗೌಡ ಅಭ್ಯರ್ಥಿ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದ ಎಂ.ವೀರಪ್ಪ ಮೊಯ್ಲಿ ಕಣದಲ್ಲಿದ್ದಾರೆ.

ಚಿಕ್ಕಬಳ್ಳಾಪುರ ಚುನಾವಣಾ ಪುಟ

1977ರ ಬಳಿಕ 1996ರಲ್ಲಿ ಒಂದು ಬಾರಿ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದು ಬಿಟ್ಟರೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಭದ್ರಕೋಟೆ. ಕಳೆದ ಎರಡು ಚುನಾವಣೆಗಳಲ್ಲಿ ಸತತವಾಗಿ ಗೆದ್ದು ಯುಪಿಎ ಸರ್ಕಾರದಲ್ಲಿ ಸಚಿವರೂ ಆಗಿದ್ದ ವೀರಪ್ಪ ಮೊಯ್ಲಿ ಅವರು ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿದ್ದಾರೆ.

ಚಿಕ್ಕಬಳ್ಳಾಪುರ: ಜೆಡಿಎಸ್- 'ಕೈ' ಕದನ, ಗೆದ್ದವರಿಗೆ ಕೈ ತುಂಬ ಕೆಲಸ

2014ರ ಚುನಾವಣೆಯಲ್ಲಿಯೂ ವೀರಪ್ಪ ಮೊಯ್ಲಿ, ಬಿ.ಎನ್.ಬಚ್ಚೇಗೌಡ ಎದುರಾಳಿಯಾಗಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್‌ನಿಂದ ಕಣಕ್ಕಿಳಿದು 3,46,339 ಮತಗಳನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು ಎದುರಾಳಿ ಬಿಜೆಪಿಯಾಗಿದೆ....

ವಿಧಾನಸಭೆ ಬಲಾಬಲ

ವಿಧಾನಸಭೆ ಬಲಾಬಲ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚಿಕ್ಕಬಳ್ಳಾಪುರ, ಗೌರಿ ಬಿದನೂರು, ಬಾಗೇಪಲ್ಲಿ, ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ನೆಲಮಂಗಲ, ಯಲಹಂಕ ವಿಧಾನಸಭಾ ಕ್ಷೇತ್ರವಿದೆ.

* ಕಾಂಗ್ರೆಸ್ - ಚಿಕ್ಕಬಳ್ಳಾಪುರ, ಗೌರಿ ಬಿದನೂರು, ಬಾಗೇಪಲ್ಲಿ, ದೊಡ್ಡಬಳ್ಳಾಪುರ, ಹೊಸಕೋಟೆ

* ಜೆಡಿಎಸ್ -ದೇವನಹಳ್ಳಿ, ನೆಲಮಂಗಲ

* ಬಿಜೆಪಿ - ಯಲಹಂಕ

ನೀರಿನ ಭರವಸೆಯೇ ಚುನಾವಣೆ ವಿಚಾರ

ನೀರಿನ ಭರವಸೆಯೇ ಚುನಾವಣೆ ವಿಚಾರ

ಚಿಕ್ಕಬಳ್ಳಾಪುರದಲ್ಲಿ ನೀರಿನ ವಿಚಾರವೇ ಚುನಾವಣಾ ವಿಷಯ. 2014ರ ಚುನಾವಣೆಯಲ್ಲಿ ಎತ್ತಿನಹೊಳೆ ಯೋಜನೆ ಮೂಲಕ ಕ್ಷೇತ್ರಕ್ಕೆ ನೀರನ್ನು ತರುವುದಾಗಿ ಭರವಸೆ ನೀಡಿ ವೀರಪ್ಪ ಮೊಯ್ಲಿ ಗೆದ್ದಿದ್ದರು. ನೀರು ಇನ್ನೂ ಬಾರದಿದ್ದರೂ ಮತ್ತೊಂದು ಚುನಾವಣೆ ಬಂದಿದೆ.

ಗೆಲುವಿನ ಅಂತರ ಹೆಚ್ಚುತ್ತಿದೆ

ಗೆಲುವಿನ ಅಂತರ ಹೆಚ್ಚುತ್ತಿದೆ

2009ರ ಚುನಾವಣೆಯಲ್ಲಿ 11,649 ಮತಗಳ ಅಂತರದಿಂದ ವೀರಪ್ಪ ಮೊಯ್ಲಿ ಗೆದ್ದಿದ್ದರು. 2014ರ ಚುನಾವಣೆಯಲ್ಲಿ ಈ ಅಂತರ 35,218ಕ್ಕೆ ಏರಿಕೆಯಾಗಿದೆ. ಈ ಬಾರಿಯೂ ಗೆದ್ದು ಹ್ಯಾಟ್ರಿಲ್ ಬಾರಿಸುವ ಉತ್ಸಾಹದಲ್ಲಿ ಅವರಿದ್ದಾರೆ.

ಕುಮಾರಸ್ವಾಮಿ ಮತ ಒಡೆದಿದ್ದರು

ಕುಮಾರಸ್ವಾಮಿ ಮತ ಒಡೆದಿದ್ದರು

2014ರ ಚುನಾವಣೆಯಲ್ಲಿ ಬಿಜೆಪಿ ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿತ್ತು. ಆದರೆ, ಎಚ್.ಡಿ.ಕುಮಾರಸ್ವಾಮಿ ಅವರು ಕಣಕ್ಕಿಳಿದು ಮತ ವಿಭಜನೆ ಮಾಡಿದ್ದರು.

* ಎಂ.ವೀರಪ್ಪ ಮೊಯ್ಲಿ 4,24,800 ಮತ

* ಬಿ.ಎನ್.ಬಚ್ಚೇಗೌಡರು 4,15,280 ಮತ

* ಎಚ್.ಡಿ.ಕುಮಾರಸ್ವಾಮಿ 3,46,339 ಮತಗಳನ್ನು ಪಡೆದಿದ್ದರು.

ಮೈತ್ರಿಯೇ ದೊಡ್ಡ ಸವಾಲು

ಮೈತ್ರಿಯೇ ದೊಡ್ಡ ಸವಾಲು

ಕಳೆದ ಚುನಾವಣೆಯಲ್ಲಿ ಎಂ.ವೀರಪ್ಪ ಮೊಯ್ಲಿ 4,24,800 ಮತ ಎಚ್.ಡಿ.ಕುಮಾರಸ್ವಾಮಿ ಎಚ್.ಡಿ.ಕುಮಾರಸ್ವಾಮಿ 3,46,339 ಮತಗಳನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ ಇಬ್ಬರು ಮೈತ್ರಿ ಮಾಡಿಕೊಂಡಿರುವುದು ಬಿಜೆಪಿಗೆ ದೊಡ್ಡ ಸವಾಲಾಗಿದೆ.

English summary
Chikkaballapur lok sabha seat political picture. Sitting MP M. Veerappa Moily Congress-JD(S) candidate and B.N.Bachegowda BJP candidate. Election will be held on April 18, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X