ಚಿಕ್ಕಬಳ್ಳಾಪುರ ಜಿಲ್ಲೆಗೆ 2 ನಿಗಮ ಮಂಡಳಿ ಅಧ್ಯಕ್ಷ ಸ್ಥಾನ..?: ವರಿಷ್ಠರ ಬಳಿ ಮುಖಂಡರ ಲಾಬಿ
ಚಿಕ್ಕಬಳ್ಳಾಪುರ, ಅಕ್ಟೋಬರ್ 30: ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಲು ಕಾಂಗ್ರೆಸ್ ಬಯಸಿದೆ. ಅದಕ್ಕಾಗಿ ಪಕ್ಷ ನಿಷ್ಠೆ, ಸೇವೆ ಮತ್ತು ಹಿರಿತನದ ಮಾನದಂಡದಲ್ಲಿ ನಿಗಮ, ಮಂಡಳಿಗಳ ತಂತ್ರಕ್ಕೆ ಮೊರೆ ಹೋಗಿದ್ದು, ಅಧಿಕಾರ ಮತ್ತು ಸವಲತ್ತು ಅನುಭವಿಸಲು ಅರ್ಹರಾದವರ ಪಟ್ಟಿ ತಯಾರಿಸಲು ಮುಂದಾಗಿದೆ.
ಅದರಂತೆ ಆಡಳಿತಾರೂಢ ಕಾಂಗ್ರೆಸ್ ತನ್ನ ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ಹಂಚುವ ಮತ್ತೊಂದು ಮಹತ್ವದ ಟಾಸ್ಕ್‌ಗೆ ಅಣಿಯಾಗುತ್ತಿದೆ. ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ನಾಮ ನಿರ್ದೇಶನ ಸಂಬಂಧ ಮಾನದಂಡಗಳಡಿ ಅಧಿಕಾರ ಹಂಚಲು ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂಬ ಊಹಾ ಪೋಹಗಳ ನಡುವೆ ಆಕಾಂಕ್ಷಿಗಳ ಲಾಭಿಯು ಹೆಚ್ಚತೊಡಗಿದೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಹಲವು ನಿಗಮ ಮಂಡಳಿ ಅಧ್ಯಕ್ಷ ಗಿರಿ, ನಿರ್ದೇಶಕರು ಹಾಗೂ ಸದಸ್ಯ ಹುದ್ದೆಗಳು ಜಿಲ್ಲೆಯ ಹಲವು ಮುಖಂಡರಿಗೆ ಸಿಕ್ಕಿತ್ತು. ಈಗ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಯಾರಿಗೆ ಮಣೆ ಹಾಕಲಿದ್ದಾರೆ ಎಂಬ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಮಟ್ಟದ ಲಾಬಿಯೂ ನಡೆದಿದೆ.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಲಾಬಿ ಹೆಚ್ಚಾಗಿದೆ. ಹಿರಿಯ ಮುಖಂಡರು ಮತ್ತು ಕಾರ್ಯಕರ್ತರ ಕೋಟಾದಲ್ಲಿ ಅಧ್ಯಕ್ಷಗಿರಿ ಗಿಟ್ಟಿಸಲು ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ಪಕ್ಷದ ಸಂಘಟನೆ ಮತ್ತು ಚುನಾವಣೆ ಗೆಲುವಿನಲ್ಲಿ ಹಾಕಿರುವ ಶ್ರಮದ ಲೆಕ್ಕ ನೆನಪಿಸಿ ಹುದ್ದೆ ಗಿಟ್ಟಿಸಲು ನಾನಾ ರೀತಿಯ ಕಸರತ್ತುಗಳನ್ನು ನಡೆಸಿದ್ದಾರೆ.
ಅಳೆದು ತೂಗಿ ಮಣೆ
ಪಕ್ಷದಲ್ಲಿ ಹೆಚ್ಚುತ್ತಿರುವ ಭಿನ್ನಮತ ಹಾಗೂ ಅಸಮಾಧಾನಗಳಿಗೆ ಇತಿಶ್ರೀ ಹಾಡಲು ಕಾಂಗ್ರೆಸ್ ಪಕ್ಷ ಶೀಘ್ರದಲ್ಲೇ ನಿಗಮ ಮಂಡಳಿ ಅಧ್ಯಕರ ನೇಮಕಕ್ಕೆ ನಾನಾ ಸರ್ಕಸ್‌ಗಳನ್ನು ನಡೆಸಿದೆ. ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದಲೂ ನಿಗಮ ಮಂಡಳಿ ನೇಮಕ ಅತ್ಯವಶ್ಯಕವಾಗಿರುವುದರಿಂದ ವರಿಷ್ಠರು ಜಾತಿ, ಧರ್ಮ, ಸಂಘಟನೆ ಹೀಗೆ ಎಲ್ಲವನ್ನೂ ಅಳೆದು ತೂಗಿ ಮಣೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ.

ಸದ್ಯದ ಮಟ್ಟಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಹಲವರ ಹೆಸರು ಕೇಳಿ ಬರುತ್ತಿದೆ. ಅವರ ಪೈಕಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ನಂದಿ ಆಂಜಿನಪ್ಪ, ಹಿರಿಯ ಮುಖಂಡ ಯಲುವಹಳ್ಳಿ ಎನ್.ರಮೇಶ್, ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ ಅವರ ಹೆಸರು ರೇಸ್ ನಲ್ಲಿದೆ. ಜಿಲ್ಲೆಯಿಂದ 10ಕ್ಕೂ ಹೆಚ್ಚು ಮಂದಿ ನಿಗಮ ಮಂಡಳಿ ಅಧ್ಯಕ್ಷಗಿರಿಗೆ ಹೆಸರುಗಳು ಮುಂಚೂಣಿಗೆ ಬಂದಿವೆ ಎನ್ನುತ್ತಿವೆ ಕೆಲ ವಿಶ್ವಾಸನಿಯ ಮೂಲಗಳು.
ಬಿಜೆಪಿ ಅವಧಿಯಲ್ಲಿ ಜಿಲ್ಲೆಗೆ ಬಂಪರ್
ಈಗಾಗಲೇ ಕೆಲವು ಹೆಸರುಗಳನ್ನು ಅಂತಿಮಗೊಳಿಸಿರುವ ವರಿಷ್ಠರು ಉಳಿದವರ ಲಾಬಿ ವೇಳೆ ಅವರನ್ನು ಒಲೈಸುವ, ಮಾತು ಕೇಳದೇ ಇದ್ದರೆ ಗದರಿ ಮುಂದೆ ನೋಡೋಣ ಎನ್ನುವ ಸಮಾಧಾನದ ಮಾತುಗಳನ್ನು ಹೇಳಿ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ. ಹುದ್ದೆ ಸಿಗುವ ಭರವಸೆ ಸಿಕ್ಕಿರುವ ಮುಖಂಡರು ಆಶಾಭಾವದಿಂದ ಇದ್ದಾರೆ. ಆದರೆ, ಹುದ್ದೆ ಈ ಸಿಗುವುದು ಅನುಮಾನವಾಗಿರುವ ಮುಖಂಡರು ಈಗಾಗಲೇ ತಮ್ಮ ಮುನಿಸನ್ನು ಹೊರಹಾಕುತ್ತಿದ್ದಾರೆ.
ಇನ್ನು ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲೆಯ ಮೂವರಿಗೆ ನಿಗಮ ಮಂಡಳಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಸಿಕ್ಕಿತ್ತು. ಅಲ್ಲದೇ, ಸಾಕಷ್ಟು ಮಂದಿಯನ್ನು ನಾನಾ ನಿಗಮ, ಸಂಸ್ಥೆಗಳ ನಿರ್ದೇಶಕರನ್ನಾಗಿ ಮಾಡ ಲಾಗಿತ್ತು. ಈ ಮೂಲಕ ಜಿಲ್ಲೆಗೆ ಅತಿ ಹೆಚ್ಚು ನಿಗಮ ಮಂಡಳಿ ಹುದ್ದೆಗಳನ್ನು ನೀಡಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರಕಾರ ಬದ್ಧವಾಗಿದೆ ಎಂದು ಸಾರಲಾಗಿತ್ತು. ಆದರೆ, ಕೆಲವರಿಗೆ ಚುನಾವಣೆ ಇನ್ನು ಕೆಲವೇ ತಿಂಗಳಿದ ಎನ್ನುವ ಹೊತ್ತಲ್ಲಿ ಹುದ್ದೆಗಳು ಸಿಕ್ಕಿದ್ದು ಅಸಮಾಧಾನಕ್ಕೂ ಕಾರಣವಾಗಿತ್ತು.
ಪ್ರಬಲ ನಿಗಮ ಅನುಮಾನ
ಸದ್ಯ ಕಾಂಗ್ರೆಸ್‌ನಲ್ಲಿ ನಿಗಮ ಮಂಡಳಿ ಅಧ್ಯಕ್ಷಗಿರಿಗೆ ಭಾರಿ ಸಂಖ್ಯೆಯ ಮುಖಂಡರ ಪಟ್ಟಿಯೇ ಇದೆ. ಸಾಕಷ್ಟು ಅಸಮಾಧಾನಿತ ಶಾಸಕರಿಗೆ ಪ್ರಬಲ ನಿಗಮ ಮಂಡಳಿಗಳ ಹುದ್ದೆಗಳನ್ನು ನೀಡು ವುದು ಅನಿವಾರ್ಯವಾಗಿದೆ. ಹೀಗಾಗಿ ಜಿಲ್ಲೆಗೆ ಪ್ರಮುಖವಾದ ನಿಗಮ ಮಂಡಳಿ ಅಧ್ಯಕ್ಷಗಿರಿ ಸಿಗುವುದು ಅನುಮಾನ ಎಂದೇ ಹೇಳಲಾ ಗುತ್ತಿದೆ. ಸಿಕ್ಕರೂ ಒಂದು ಅಥವಾ ಎರಡು ನಿಗಮ ಅಂತಿಮ ಎಂದು ಹೇಳಲಾಗುತ್ತಿದೆ.]
ಕೇವಲ ಮುಖಂಡರು ಮಾತ್ರವಲ್ಲ. ಎರಡನೇ ಹಂತದ ನಾಯಕರು ಮತ್ತು ಕಾರ್ಯಕರ್ತರು ಕೂಡಾ ನಮಗೂ ನಿಗಮ ಮಂಡಳಿ ಅಧ್ಯಕ್ಷಗಿರಿ ಬೇಕೆಂಬ ಬೇಡಿಕೆ ಮಂಡಿಸಿದ್ದಾರೆ. ವರಿಷ್ಠರು ಮತ್ತು ಕಾರ್ಯಕರ್ತರಿಗೆ 50-50 ಅನುಪಾತದಲ್ಲಿ ನಿಗಮ ಮಂಡಳಿ ಅಧ್ಯಕ್ಷರಿ ಕೊಡುವುದಾದರೆ, ಜಿಲ್ಲೆಯಲ್ಲಿ ಯಾರಿಗೆ ಸಿಗಲಿದೆ ಎಂಬ ಕುತೂಹಲವೂ ಗರಿಗೆದರಿದೆ. ನಿಟ್ಟಿನಲ್ಲಿ ಸಾಕಷ್ಟು ಮಂದಿ ಸ್ಥಳೀಯ ಪ್ರಭಾವಿ ಮುಖಂಡರ ಮೂಲಕ ಲಾಬಿ ನಡೆಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ತೆಕ್ಕೆಯಲ್ಲಿರುವ ಸಂಸದ ಸ್ಥಾನವನ್ನು ಕೈ ವಶ ಮಾಡಿಕೊಳ್ಳಬೇಕಾದರೆ, ಹಲವರಿಗೆ ಸ್ಥಾನಮಾನ ನೀಡಲೇಬೇಕಾದ ಅನಿವಾರ್ಯತೆ ಇದೆ. ಆದರೆ, ಯಾರಿಗೆ ಯಾವ ಹುದ್ದೆ ಸಿಗಲಿದೆ. ಆನಂತರ ಉದ್ಭವವಾಗುವ ಅಸಮಾಧಾನವನ್ನು ಹೇಗೆ ನಿವಾರಿಸಲಿದ್ದಾರೆ ಎನ್ನುವುದರ ಮೇಲೆ ಲಾಭ-ನಷ್ಟದ ಲೆಕ್ಕಾಚಾರಗಳು ನಿಂತಿವೆ.\
ಈ ಕುರಿತು ಪ್ರತಿಕ್ರಿಯೆ ನೀಡಿರುವ ಚಿಕ್ಕಬಳ್ಳಾಪುರ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಕೇಶವರೆಡ್ಡಿ, "ಕಳೆದ 6 ವರ್ಷಗಳಿಂದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಹಲವು ಏಳುಬೀಳುಗಳ ಮಧ್ಯೆಯೂ ಪಕ್ಷದಲ್ಲಿ ಯಾವುದೇ ಸಮಸ್ಯೆ ಬಾರದಂತೆ ಮುನ್ನಡೆಸಿದ್ದೇನೆ. ನನಗೂ ಕೂಡಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ವರಿಷ್ಠರನ್ನು ಕೇಳಿದ್ದೇನೆ. ಕೊಡುವ ಭರವಸೆಯೂ ಇದೆ. ಅಧಿಕಾರ ಕೊಟ್ಟರೆ ನಿಭಾಯಿಸುತ್ತೇನೆ. ಇಲ್ಲವಾದಲ್ಲಿ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ" ಎಂದು ತಿಳಿಸಿದ್ದಾರೆ.
ಪಕ್ಷದ ಮತ್ತೊಬ್ಬ ಹಿರಿಯ ಮುಖಂಡರಾದ ಯಲುವಹಳ್ಳಿ ಎನ್. ರಮೇಶ್ ಮಾತನಾಡಿ "ನನಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ವರಿಷ್ಠರ ಮಟ್ಟದಲ್ಲಿ ಚರ್ಚೆಯಾಗಿದೆ ಎಂದು ಗೊತ್ತಾಗಿದೆ. ಆದರೆ, ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಕು ಎಂದು ಹಿರಿಯ ಮುಖಂಡರಿಗೆ ಕೇಳಿದ್ದೇನೆ. ಹುದ್ದೆ ಕೊಡುವ ವಿಶ್ವಾಸವೂ ಇದೆ. ಮುಂದೆ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ. ಎಂಬುದನ್ನು ಕಾದು ನೋಡೋಣ" ಎಂದು ತಿಳಿಸಿದ್ದಾರೆ.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications