ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಕೆ.ಸುಧಾಕರ್‌ಗೆ ಭರ್ಜರಿ ಗೆಲುವು
ಚಿಕ್ಕಬಳ್ಳಾಪುರ, ಮೇ 15: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ.ಕೆ.ಸುಧಾಕರ್ ಅವರು 30000 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಈ ಬಾರಿ ಸುಧಾಕರ್‌ಗೆ ಗೆಲುವು ಸುಲಭವಲ್ಲ ಎಂದೇ ಎಣಿಸಲಾಗಿತ್ತು, ಅಲ್ಲಿ ನವೀನ್ ಕುಮಾರ್ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು ಅಲ್ಲದೆ ಸುಧಾಕರ್ ಅವರ ತಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಮೇಲೂ ಸಹ ಕಾಂಗ್ರೆಸ್‌ನ ಮುಖಂಡರ ಸಿಟ್ಟಾಗಿದ್ದರು.
ಆದರೆ ಎಲ್ಲ ಅಡೆತಡೆಗಳನ್ನು ಮೀರಿರುವ ಸುಧಾಕರ್ ಅವರು 30000 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇಲ್ಲಿ ಜೆಡಿಎಸ್‌ನ ಬಚ್ಚೇಗೌಡ ಅವರು ದ್ವಿತೀಯ ಸ್ಥಾನ ಪಡೆದಿದ್ದರೆ, ಬಿಜೆಪಿಯ ಜಿವಿ ಮಂಜುನಾಥ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಕಳೆದ ಬಾರಿ ಕೂಡ ಸುಧಾಕರ್ ಅವರು ಚಿಕ್ಕಬಳ್ಳಾಪುರದಿಂದ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು, ಆಗ ಅವರು 15048 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಈ ಬಾರಿ ಅವರು ಗೆಲುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ.












Click it and Unblock the Notifications