ಚಿಕ್ಕಬಳ್ಳಾಪುರ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕಣದಲ್ಲಿರುವ ಮತ್ತು ನಾಮಪತ್ರ ವಾಪಸ್ ಪಡೆದವರ ವಿವರ

ಚಿಕ್ಕಬಳ್ಳಾಪುರ, ಏಪ್ರಿಲ್‌, 25: ವಿಧಾನಸಭಾ ಚುನಾವಣೆಗೆ ಜಿಲ್ಲೆಯ 5 ಕ್ಷೇತ್ರಗಳಿಂದ ಒಟ್ಟು 70 ಅಭ್ಯರ್ಥಿಗಳು ಕಣದಲ್ಲಿದ್ದು, ಇನ್ನು 12 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ.

ಗೌರಿಬಿದನೂರು ಕ್ಷೇತ್ರದಲ್ಲಿನ ಸ್ಪರ್ಧಿಗಳ ವಿವರ

ಗೌರಿಬಿದನೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಸಿ.ಆರ್. ನರಸಿಂಹಮೂರ್ತಿ, ಬಿಎಸ್‌ಪಿಯಿಂದ ಕೆ. ಪ್ರಕಾಶ್ ಬಾಬು, ಬಿಜೆಪಿ ಎಚ್.ಎಸ್. ಶಶಿಧರ ಕುಮಾರ್, ಕಾಂಗ್ರೆಸ್, ಎಚ್.ಎನ್. ಶಿವಶಂಕರ ರೆಡ್ಡಿ, ಎಎಪಿ ಸೈಯದ್‌ ನಾಸಿರ್ ಅಲಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಸಿ.ಎನ್. ಪ್ರಕಾಶ್, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಲಕ್ಷ್ಮಣ ನಾಯಕ, ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಸಿ.ವಿ. ಶ್ರೀನಿವಾಸ್‌ ಕಣದಲ್ಲಿದ್ದಾರೆ.

Candidates and those who withdrawn nomination in 5 constituencies of Chikkaballapur district

ಇನ್ನು ಪಕ್ಷೇತರ ಅಭ್ಯರ್ಥಿಗಳಾಗಿ ಡಾ. ಕೆ. ಕೆಂಪರಾಜು, ನಸರುಲ್ಲಾ, ಪುಟ್ಟಸ್ವಾಮಿ, ಪುಟ್ಟಸ್ವಾಮಿ ಗೌಡ, ಕೆ. ಪುಟ್ಟಸ್ವಾಮಿಗೌಡ, ಕೆ.ಎಚ್‌. ಪುಟ್ಟಸ್ವಾಮಿ ಗೌಡ, ಜಿ.ಎನ್. ರವಿ, ಎನ್.ಆರ್. ವಿಜಯ್ ಕುಮಾರ್, ಪಿ.ಎಲ್. ಶಶಿಕುಮಾರ್, ಎನ್. ಹನುಮಂತಪ್ಪ ಕಣದಲ್ಲಿದ್ದಾರೆ. ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿಗಳಾದ ಜಿ.ಎ.ಮಂಜು ನಾಥ್, ಬಿ. ಅಶೋಕ್ ಕುಮಾರ್, ಮೀರ್ ಗುಲಾಮ್ ಆಸ್ಕರಿ ನಾಮಪತ್ರ ವಾಪಸ್ ಪಡೆದಿದ್ದಾರೆ.

ಬಾಗೇಪಲ್ಲಿ ಅಖಾಡದ ಸ್ಪರ್ಧಿಗಳ ವಿವರ

ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಎಂ ಡಾ.ಎ.ಅನಿಲ್ ಕುಮಾರ್, ಎಎಪಿ ಡಾ. ಮಧುಸೀತಪ್ಪ, ಬಿಜೆಪಿ ಸಿ.ಮುನಿರಾಜು, ಬಿಎಸ್‌ಪಿ ಟಿ.ಮುನಿಸ್ವಾಮಿ, ಕಾಂಗ್ರೆಸ್ ಎಸ್.ಎನ್‌. ಸುಬ್ಬಾರೆಡ್ಡಿ, ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಅಭ್ಯರ್ಥಿ ಸಿ. ಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಸಿ. ತಿಪ್ಪನ್ನ, ಉತ್ತಮ ಪ್ರಜಾಕೀಯ ಪಕ್ಷದ ಡಿ.ವಿ. ರಾಜೇಶ್ ಕಣದಲ್ಲಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾಗಿ ಡಿ.ಅರುಣ, ಎಸ್.ಎನ್.ಗೋವಿಂದರೆಡ್ಡಿ, ಎ.ಎನ್.ನರೇಂದ್ರ, ಮಿಥುನ್ ರೆಡ್ಡಿ, ಕೆ. ಲಕ್ಷ್ಮೀನರಸಿಂಹಚಾರ್, ಜಿ.ವಿ. ಶ್ರೀರಾಮ, ಎಂ. ಹರೀಶ ಕಣದಲ್ಲಿದ್ದಾರೆ. ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿಗಳಾದ ಎನ್. ಸಂಪಂಗಿ, ಎಸ್. ಅಭಿಷೇಕ್ ನಾಮಪತ್ರ ವಾಪಸ್ ಪಡೆದಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದ "ಕಲಿಗಳು"

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ಪ್ರದೀಪ್ ಈಶ್ವರ್ , ಬಿಎಸ್‌ಪಿಯಿಂದ ಪಿಲ್ಲ ಆಂಜಿನಪ್ಪ, ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ, ಎಎಪಿ ಡಾ.ಎಂ.ಎಂ.ಪಾಷ, ಬಿಜೆಪಿ ಡಾ.ಕೆ.ಸುಧಕಾರ್, ಕರ್ನಾಟಕ ರಾಷ್ಟ್ರ ಸಮಿತಿ ಪಿ.ಆಂಜಿನಪ್ಪ, ಪೌಟೇಸ್ಟ್ ಬ್ಲಾಕ್ ಇಂಡಿಯಾ ಅಭ್ಯರ್ಥಿ ಬಿ.ಕೆ.ಪ್ರಸಾದ್, ಪಕ್ಷೇತರ ಅಭ್ಯರ್ಥಿಗಳಾಗಿ ಅಲ್ತಾಫ್ ಅಹಮದ್, ಎಚ್.ಸಿ.ಚಂದ್ರಶೇಖರ್, ಟಿ.ವೆಂಕಟಶಿವುಡು, ಎನ್.ಸುಧಾಕರ್, ಅಮಾನುಲ್ಲಾ ಕಣದಲ್ಲಿದ್ದು, ಪಕ್ಷೇತರ ಅಭ್ಯರ್ಥಿ ಎಸ್.ಶಹೀನ, ಆರ್‌ಪಿಐ ಅಭ್ಯರ್ಥಿ ಜಿ.ಸಿ, ವೆಂಕಟರಮಣಪ್ಪ ಉಮೇದುವಾರಿಕೆ ಹಿಂಪಡೆದಿದ್ದಾರೆ.

ಶಿಡ್ಲಘಟ್ಟ ಕ್ಷೇತ್ರದಲ್ಲಿನ ಸ್ಪರ್ಧಿಗಳ ವಿವರ

ಶಿಡ್ಲಘಟ್ಟ ಕ್ಷೇತ್ರದಿಂದ ಎಎಪಿ ಮೌಲಾಜಾನ್, ಜೆಡಿಎಸ್ ಎನ್.ರವಿಕುಮಾರ್, ಕಾಂಗ್ರೆಸ್ ಬಿ.ಎ.ರಾಜೀವ್‌ಗೌಡ, ಬಿಜೆಪಿ ಸೀಕಲ್ ರಾಮಚಂದ್ರ ಗೌಡ, ಬಿಎಸ್‌ಪಿ ವೆಂಕಟರಮಣಪ್ಪ, ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಕೆಂಪೇಗೌಡ ಸುಂಡಹಳ್ಳಿ, ರಾಷ್ಟ್ರೀಯ ಸಮಾಜ ದಳ ಪಕ್ಷದ ಅಭ್ಯರ್ಥಿ ಪಿ.ದೇವಪ್ಪ ಕಣದಲ್ಲಿದ್ದಾರೆ.

ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿಗಳಾದ ಪುಟ್ಟು ಆಂಜಿನಪ್ಪ, ನಂಜಪ್ಪ, ಬಾಲಮುರಳಿಕೃ ಬೈರೇಗೌಡ ವೆಂಕಟರಾಮಪ್ಪ, ಎ. ಶ್ರೀನಾಥ, ಎಸ್.ಎ. ಸೈಯದ್ ಗೌಸ್, ಎಚ್‌.ಆರ್. ಸಂದೀಪ್‌ ರೆಡ್ಡಿ ಸ್ಪರ್ಧೆಯಲ್ಲಿದ್ದು, ಪಕ್ಷೇತರ ಅಭ್ಯರ್ಥಿಗಳಾದ ಸಿ, ಎಂ. ಬೈರೇಗೌಡ, ಕೆ. ಸಹನಾ, ಡಿ. ಮುನಿರಾಜು, ಎ. ವೆಂಕಟೇಶಪ್ಪ ಕೆ.ಆರ್. ನಾಮಪತ್ರ ವಾಪಸ್ ಪಡೆದಿದ್ದಾರೆ.

ಚಿಂತಾಮಣಿ ಕ್ಷೇತ್ರದಲ್ಲಿನ ಸ್ಪರ್ಧಿಗಳು

ಚಿಂತಾಮಣಿ ಕ್ಷೇತ್ರದಿಂದ ಜೆಡಿಎಸ್ ಎಂ.ಕೃಷ್ಣಾ ರೆಡ್ಡಿ, ಬಿಎಸ್‌ಪಿಯಿಂದ ವಿ.ನಾಗಪ್ಪ, ಎಎಪಿ ಸಿ.ಬೈರೆಡ್ಡಿ, ಬಿಜೆಪಿ ಜಿ.ಎನ್‌.ವೇಣುಗೋಪಾಲ್, ಕಾಂಗ್ರೆಸ್ ಡಾ.ಎಂ.ಸಿ. ಸುಧಾಕರ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಎಸ್. ಶಿವಾರೆಡ್ಡಿ, ಇಂಡಿಯನ್ ಲೇಬರ್ ಪಾರ್ಟಿ ಅಭ್ಯರ್ಥಿ ಸೈಯದ್‌ ಅಲೀಂ ಪಾಷ ಕಣದಲ್ಲಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾಗಿ ಕೃಷ್ಣಾರೆಡ್ಡಿ, ಎನ್.ಸಿ. ಕೃಷ್ಣಾರೆಡ್ಡಿ, ಸುಧಾಕರ್, ಹಿದಾಯತ್ ಕಣದಲ್ಲಿದ್ದು, ಇಲ್ಲಿ ಯಾವುದೇ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿಲ್ಲ. ಕಣದಲ್ಲಿರುವ ಅಭ್ಯರ್ಥಿಗಳ ಆಯ್ಕೆಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+