'ಅಮ್ಮ' ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಿರುವವರು ಯಾರು?

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಅಕ್ಟೋಬರ್ 05: ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಆಡಳಿತ ಯಂತ್ರ ಕುಸಿಯದಂತೆ ನಿವೃತ್ತ ಐಎಎಸ್ ಅಧಿಕಾರಿ ಶೀಲಾ ನೋಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಆದರೆ, ಎಲ್ಲವನ್ನು' ಅಮ್ಮ' ನಿಭಾಯಿಸುತ್ತಿದ್ದಾರೆ ಎಂದು ಎಐಎಡಿಎಂಕೆ ಹೇಳಿಕೊಂಡಿದೆ.

ಮುಖ್ಯಮಂತ್ರಿ ಜಯಲಲಿತಾ ಅವರು ಅನಾರೋಗ್ಯಪೀಡಿತರಾಗಿದ್ದು, ತಮಿಳುನಾಡಿನ ರಾಜ್ಯಭಾರದ ಹೊಣೆಯನ್ನು ಅವರ ಆಪ್ತ ಸಖಿ ಶಶಿಕಲಾ ನಟರಾಜನ್ ವಹಿಸಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಆದರೆ, ಶಶಿಕಲಾರಿಗಿಂತ ನಿವೃತ್ತ ಐಎಎಸ್ ಅಧಿಕಾರಿ ಶೀಲಾ ಬಾಲಕೃಷ್ಣನ್ (62) ಆದೇಶವೇ ನಡೆಯುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಜಯಲಲಿತಾ ಸಂಪುಟದ ಹಿರಿ, ಕಿರಿ ಸಚಿವರು ಕೂಡಾ ಶೀಲಾ ಅವರಿಗೆ ಸಲಾಮ್ ಮಾಡಿ ಆಜ್ಞೆ ಪಾಲಿಸುತ್ತಿದ್ದಾರೆ.[ಜಯಾ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಬಹಿರಂಗ ಪಡಿಸಿ: ಹೈಕೋರ್ಟ್]

ಕೇರಳ ಮೂಲದ ಶೀಲಾ ಭಾಸ್ಕರನ್ ಅವರ ಮೇಲೆ ಜಯಲಲಿತಾ ಅವರಿಗೆ ಅಪಾರ ವಿಶ್ವಾಸವಿದೆ. ಜಯಾ ಅವರ ಸಲಹೆ ಪಡೆದು ಕಳೆದ ವಾರದಿಂದ ಶೀಲಾ ಅವರು ರಾಜ್ಯದ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ.[ತಮಿಳರ 'ಅಮ್ಮ' ಜಯಲಲಿತಾರಿಗೆ ನಿಜಕ್ಕೂ ಏನು ಕಾಯಿಲೆ?]

ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

ಈ ನಡುವೆ ಜಯಾ ಆರೋಗ್ಯದ ಬಗ್ಗೆ ಎರಡು ದಿನಗಳ ಒಳಗಾಗಿ ಮಾಹಿತಿ ನೀಡುವಂತೆ ಸರಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದೆ. ಆದೇಶಿಸಿದೆ. ಸಾಮಾಜಿಕ ಹೋರಾಟಗಾರರೊಬ್ಬರ ಅರ್ಜಿ ಹಿನ್ನೆಲೆಯಲ್ಲಿ ಈ ಆದೇಶ ಹೊರ ಬಂದಿದೆ.[ಜಯಾ ಸಿಂಗಪುರಕ್ಕೆ ಹೋಗ್ಲಿ ಎಂದಿದ್ದು ಬದ್ಧವೈರಿ ಸ್ವಾಮಿ!]

ಯಾರೀಕೆ ಶೀಲಾ ಬಾಲಕೃಷ್ಣನ್?

ಯಾರೀಕೆ ಶೀಲಾ ಬಾಲಕೃಷ್ಣನ್?

1976ರ ಬ್ಯಾಚಿನ ಐಎಎಸ್ ಅಧಿಕಾರಿ ಶೀಲಾ ಅವರು ಮೂಲತಃ ಕೇರಳದ ತಿರುವನಂತಪುರಂನವರು. 2014ರಲ್ಲಿ ಕರ್ತವ್ಯದಿಂದ ನಿವೃತ್ತರಾದ ಬಳಿಕ ಜಯಾ ಅವರಿಗೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.

ಎರಡನೇ ಮಹಡಿಯಿಂದ ಕಾರ್ಯಭಾರ

ಎರಡನೇ ಮಹಡಿಯಿಂದ ಕಾರ್ಯಭಾರ

ಈಗ ಅಪೋಲೊ ಆಸ್ಪತ್ರೆಯ ಎರಡನೇ ಮಹಡಿಯಿಂದ ಕಾರ್ಯಭಾರ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಜಯಾ ಅವರ ರೂಮಿನ ಅಕ್ಕ ಪಕ್ಕದಲ್ಲಿ ಶಶಿಕಲಾ ನಟರಾಜನ್ ಹಾಗೂ ಶೀಲಾ ಭಾಸ್ಕರನ್ ಅವರ ರೂಮ್ ಗಳಿವೆ.

ಜಯಾ ಅವರ ಆಪ್ತ ವರ್ಗಕ್ಕೆ ಸೇರಿದ ಶೀಲಾ

ಜಯಾ ಅವರ ಆಪ್ತ ವರ್ಗಕ್ಕೆ ಸೇರಿದ ಶೀಲಾ

2002ರಿಂದ ಜಯಾ ಅವರ ಆಪ್ತ ವರ್ಗಕ್ಕೆ ಸೇರಿದ ಶೀಲಾ ಅವರು ಕಷ್ಟಕಾಲದಲ್ಲೂ ಜಯಾ ಅವರ ಜತೆಗಿದ್ದರು. 2011ರಲ್ಲಿ ಮತ್ತೆ ಜಯಾ ಅಧಿಕಾರಕ್ಕೆ ಬಂದರೂ 2014ರ ನಂತರ ಅಧಿಕೃತವಾಗಿ ಸಲಹೆಗಾರ್ತಿ ಪಟ್ಟಕ್ಕೇರಿದರು. ಶೀಲಾ ಅವರ ಪತಿ ಬಾಲಕೃಷ್ಣನ್ ಆರ್ ಅವರು 2012ರಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಯಾದರು. ಶೀಲಾ ಅವರು ನಿವೃತ್ತಿ ಬಳಿಕ ಜಯಾ ಅವರ ಜತೆಯಲ್ಲೇ ಹೆಜ್ಜೆ ಹಾಕತೊಡಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With Tamil Nadu Chief Minister, J Jayalalithaa in hospital for over a week now, questions are being asked about who runs to show. Sheela Balakrishan is a trusted aide of Jayalalithaa and according to many, she is the one who is in charge of the administration in Tamil Nadu today.
Please Wait while comments are loading...