ಜಯಾ ಆಸ್ಪತ್ರೆಯಲ್ಲಿದ್ದಾಗ 75 ದಿನಗಳೂ ಸಿಸಿಟಿವಿ ಸ್ವಿಚ್ಡ್ ಆಫ್ ಆಗಿದ್ದೇಕೆ?
Recommended Video

ಮಾರ್ಚ್, ಮಾರ್ಚ್ 22 : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಸತ್ತು ಸ್ವರ್ಗ ಸೇರಿ ಒಂದೂಕಾಲು ವರ್ಷ ಮುಗಿಯುತ್ತ ಬಂದರೂ, ಅವರಿಗೆ ಸಂಬಂಧಿಸಿದ ಸುದ್ದಿಗಳಿಗೆ ಹಿಡಿದುಕೊಂಡಿರುವ ಭೂತ ಮಾತ್ರ ಇನ್ನೂ ಬಿಟ್ಟಿಲ್ಲ. ಇದೀಗ ಮತ್ತೊಂದು ಬೆಚ್ಚಿಬೀಳಿಸುವಂಥ ಸುದ್ದಿ ಹೊರಬಿದ್ದಿದೆ.
ಎಪ್ಪತ್ತೈದು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಅಪೋಲೋ ಆಸ್ಪತ್ರೆಯ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿತ್ತು ಎಂಬ ಆಘಾತಕರ ಸುದ್ದಿಯನ್ನು ಅಪೋಲೋ ಆಸ್ಪತ್ರೆಯ ಚೇರ್ಮನ್ ಡಾ. ಪ್ರತಾಪ್ ಸಿ ರೆಡ್ಡಿಯವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.
ಈ ಸುದ್ದಿ ಹೊರಬೀಳುವುದರೊಂದಿಗೆ, ಜಯಲಲಿತಾ ಅವರ ಸಾವು ಇನ್ನಷ್ಟು ನಿಗೂಢವಾಗುತ್ತ ಸಾಗಿದೆ. ಅಲ್ಲದೆ, ಆಸ್ಪತ್ರೆಯ ಎಲ್ಲ ಸಿಸಿಟಿವಿಗಳನ್ನು ಸ್ವಿಚ್ ಆಫ್ ಮಾಡಿದ್ದೇಕೆ? ಹಾಗಿದ್ರೆ, ಅಲ್ಲಿ ಏನು ನಡೆಯುತ್ತಿತ್ತು? ಯಾಕೆ ಹಲವಾರು ಸಂಗತಿಗಳನ್ನು ಮುಚ್ಚಿಡುವಂಥ ಕೆಲಸ ಮಾಡಲಾಯಿತು? ಇದಕ್ಕೆಲ್ಲ ಯಾರು ಹೊಣೆ ಮುಂತಾದ ಪ್ರಶ್ನೆಗಳು ಹುಟ್ಟಿಕೊಂಡಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸತತ 75 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ಜಯಲಲಿತಾ ಅವರು, ಡಿಸೆಂಬರ್ 5, 2016ರಂದು ಸ್ವರ್ಗಸ್ಥರಾದರು. ಅದರ ಹಿಂದೆಯೇ ಹಲವಾರು ಊಹಾಪೋಹಗಳು ಗಾಳಿಯಲ್ಲಿ ಸುತ್ತಾಡಿದ್ದವು. ಅವರನ್ನು ವಿಷವುಣ್ಣಿಸಿ ಹತ್ಯೆಗೈಯಲಾಯಿತು ಎಂಬ ಸುದ್ದಿಯೂ ಹರಿದಾಡಿ ಜಯಲಲಿತಾ ಅಭಿಮಾನಿಗಳನ್ನು ವಿಚಲಿತರನ್ನಾಗಿ ಮಾಡಿತ್ತು. ಆ ಪತ್ರಿಕಾಗೋಷ್ಠಿಯ ವಿವರಗಳು ಕೆಳಗಿನಂತಿವೆ.

ತೀವ್ರ ಹೃದಯಾಘಾತದಿಂದ ಜಯಾ ಸಾವು
ಅಪೋಲೋ ಆಸ್ಪತ್ರೆಯ 24 ಬೆಡ್ ಗಳುಳ್ಳ ತುರ್ತು ಚಿಕಿತ್ಸಾ ಘಟಕದಲ್ಲಿ ಎಲ್ಲ ರೋಗಿಗಳನ್ನೂ ಬೇರೆಡೆ ಸ್ಥಳಾಂತರಿಸಿ ಜಯಲಲಿತಾ ಅವರನ್ನು ಮಾತ್ರ ಇರಿಸಲಾಗಿತ್ತು. 75 ದಿನಗಳ ಹೋರಾಟದ ನಂತರ 69 ವರ್ಷಗಳ ಜಯಲಲಿತಾ ಅವರು ಭಾರೀ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದ್ದರು. ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ ಆರುಮುಘಸ್ವಾಮಿ ಆಯೋಗ ಈಗಾಗಲೆ ತನಿಖೆ ನಡೆಸುತ್ತಿದೆ.

ಆಸ್ಪತ್ರೆಯ ಎಲ್ಲ ಸಿಸಿಟಿವಿ ಸ್ವಿಚ್ ಆಫ್
ಜಯಲಲಿತಾ ಅವರಿಗೆ ನೀಡುತ್ತಿದ್ದ ಚಿಕಿತ್ಸೆಯ ಸಿಸಿಟಿವಿ ಫುಟೇಜನ್ನು ಆಯೋಗಕ್ಕೆ ಏಕೆ ನೀಡಿಲ್ಲ ಎಂಬ ಪ್ರಶ್ನೆಗೆ, ದಯವಿಟ್ಟು ಕ್ಷಮಿಸಿ. ಎಲ್ಲ 75 ದಿನಗಳ ಕಾಲ ಅಪೋಲೋ ಆಸ್ಪತ್ರೆಯ ಎಲ್ಲ ಸಿಸಿಟಿವಿಗಳನ್ನು ಸ್ವಿಚ್ ಆಫ್ ಮಾಡಲಾಗಿತ್ತು. ಅವರನ್ನು ಅಡ್ಮಿಟ್ ಮಾಡಿಕೊಳ್ಳುತ್ತಿದ್ದಂತೆ, ಐಸಿಯುಗಿತ್ತ ಎಲ್ಲ ಸಂಪರ್ಕಗಳನ್ನು ಬಂದ್ ಮಾಡಲಾಗಿತ್ತು. ಅಲ್ಲಿದ್ದ ಎಲ್ಲ ರೋಗಿಗಳನ್ನು ಸ್ಥಳಾಂತರಗೊಳಿಸಲಾಯಿತು. ಅವರನ್ನು ಯಾರೂ ನೋಡಬಾರದು ಎಂಬ ಉದ್ದೇಶದಿಂದ 24 ಬೆಡ್ ಗಳ ಐಸಿಯುನ ಎಲ್ಲ ಕ್ಯಾಮೆರಾಗಳನ್ನು ಬಂದ್ ಮಾಡಲಾಗಿತ್ತು. ಯಾವುದೇ ಸಂದರ್ಶಕರನ್ನು ಕೂಡ ಅವರನ್ನು ಭೇಟಿಯಾಗಲು ಬಿಟ್ಟಿರಲಿಲ್ಲ ಎಂದು ಅವರು ವಿವರ ನೀಡಿದ್ದಾರೆ.

ಐಸಿಯುನಲ್ಲಿ ಯಾರನ್ನೂ ಬಿಡುವುದಿಲ್ಲ
ನಮ್ಮ ಆಸ್ಪತ್ರೆಯಲ್ಲಿ ಇರುವುದು ಒಂದೇ ಪಾಲಿಸಿ. ಐಸಿಯುನಲ್ಲಿ ದಾಖಲಾಗಿರುವ ರೋಗಿಯ ಹತ್ತಿರದ ಸಂಬಂಧಿಗಳನ್ನು ಹೊರತುಪಡಿಸಿ ಯಾರನ್ನೂ ಐಸಿಯು ಒಳಗೆ ಬಿಡುವುದಿಲ್ಲ. ಅವರನ್ನು ದಾಖಲಿಸಿಕೊಳ್ಳುವಾಗಲೇ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಆದರೆ, ವೈದ್ಯರ ಅನುಮತಿ ಮೇರೆಗೆ ಮಾತ್ರ ಕೆಲವರನ್ನು ಬಿಡಬಹುದು. ಆದರೆ, ನಾವೆಷ್ಟೇ ಪ್ರಯತ್ನ ಪಟ್ಟರೂ ದುರಾದೃಷ್ಟವಶಾತ್ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಅವರು ತೀವ್ರ ಹೃದಯಾಘಾತದಿಂದ ಅಸುನೀಗಿದರು ಎಂದು ಪ್ರತಾಪ್ ರೆಡ್ಡಿ ವಿವರಿಸಿದರು.

ಆಯೋಗದ ಮುಂದೆ ಹಾಜರಾಗಲು ರೆಡಿ
ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನದೇನನ್ನೂ ಹೇಳಲು ಸಾಧ್ಯವಿಲ್ಲ. ಆದರೆ, ಆಸ್ಪತ್ರೆಯ ವೈದ್ಯರು, ನರ್ಸ್ ಗಳು, ವಾರ್ಡ್ ಬಾಯ್ ಗಳು, ತಂತ್ರಜ್ಞರು ಅಷ್ಟೇ ಏಕೆ ವಿದೇಶದಿಂದ ಕರೆಸಲಾಗಿದ್ದ ವೈದ್ಯರ ತಂಡ ಕೂಡ ಅವರ ಆರೋಗ್ಯ ಸುಧಾರಿಸಲು ಸಾಕಷ್ಟು ಶ್ರಮ ಪಟ್ಟಿತು. ತನಿಖಾಧಿಕಾರಿಗಳು ಇಷ್ಟಪಟ್ಟರೆ ಆಯೋಗದ ಮುಂದೆ ಆಸ್ಪತ್ರೆಯ ಅಧಿಕಾರಿಗಳು ಹಾಜರಾಗುತ್ತಾರೆ. ಅಲ್ಲದೆ, ನಾವು ಎಲ್ಲ ದಾಖಲಾತಿಗಳನ್ನು ನೀಡಿದ್ದೇವೆ ಎಂದು ಅವರು ಪತ್ರಿಕಾಗೋಷ್ಠಿಗೆ ಮಂಗಳ ಹಾಡಿದರು.

ಕಾನೂನಿನ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ?
ಅಕ್ರಮ ಆಸ್ತಿ ಗಳಿಸಿದ ಆರೋಪದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಶಶಿಕಲಾ ನಟರಾಜನ್ ಅವರು, ಜಯಲಲಿತಾ ಅವರ ಕಡೆಯ ದಿನಗಳ ಚಿಕಿತ್ಸೆಯನ್ನು ವಿಡಿಯೋ ಶೂಟ್ ಮಾಡಲಾಗಿತ್ತು ಎಂದು ಕೆಲ ದಿನಗಳ ಹಿಂದೆ ಆಯೋಗದ ಮುಂದೆ ಹೇಳಿಕೆ ನೀಡಿದ್ದರು. ಈಗ ಆಸ್ಪತ್ರೆಯ ಚೇರ್ಮನ್ ನೀಡುತ್ತಿರುವ ಹೇಳಿಕೆ ಶಶಿಕಲಾ ಅವರ ಹೇಳಿಕೆಗೆ ತದ್ವಿರುದ್ಧವಾಗಿದೆ. ಎಲ್ಲ 75 ದಿನಗಳ ಕಾಲವೂ ಸಿಸಿಟಿವಿಯನ್ನು ಸ್ವಿಚ್ಡ್ ಆಫ್ ಮಾಡಲು ಶಶಿಕಲಾ ಅವರೇ ಆದೇಶ ನೀಡಿದ್ದರು ಎಂಬ ಹೇಳಿಕೆಯನ್ನು ವೈದ್ಯರು ನೀಡಿದ್ದಾರೆ. ಯಾಕೆ ಶಶಿಕಲಾ ಅವರು ಕಾನೂನಿನ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ?
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications