ಜಯಾ ಉಯಿಲಿನಲ್ಲೇನಿದೆ, ಪೋಯೆಸ್ ಗಾರ್ಡನ್ ಯಾರಿಗೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಡಿಸೆಂಬರ್ 08 : ಅರವತ್ತೆಂಟು ವರ್ಷಗಳ ಕಾಲ ರಂಗುರಂಗಿನ ಜೀವನ ನಡೆಸಿ ಜಯಲಲಿತಾ ಅವರು ಮರೀನಾ ಬೀಚ್ ಮಣ್ಣು ಸೇರಿದ ನಂತರ ಎಲ್ಲರನ್ನೂ ಹಲವಾರು ಪ್ರಶ್ನೆಗಳು ಕಾಡುತ್ತಿವೆ. ಜಯಲಲಿತಾ ಅವರು ಉಲಿಯು ಬರೆದಿದ್ದಾರಾ? ಬರೆದಿದ್ದರೆ ಅವರ ಆಸ್ತಿಯೆಲ್ಲ ಯಾರ ಪಾಲಾಗಲಿದೆ?

ಎಲ್ಲಕ್ಕಿಂತ ಹೆಚ್ಚಾಗಿ, 24 ಸಾವಿರ ಚದರ ಅಡಿ ಜಮೀನಿನಲ್ಲಿ ವಿಸ್ತರಿಸಿಕೊಂಡಿರುವ ವೈಭವೋಪೇತ ಪೋಯೆಸ್ ಗಾರ್ಡನ್ ಎಂಬ ಅರಮನೆಯಂಥ ಬಂಗ್ಲೆಗೆ ಯಾರು ವಾರಸುದಾರರಾಗುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಬಲ್ಲ ಮೂಲದ ಪ್ರಕಾರ, ಈ ಕುರಿತಂತೆ ಜಯಲಲಿತಾ ಅವರು ಎರಡು ವರ್ಷಗಳ ಹಿಂದೆಯೇ ಉಯಿಲು ಬರೆದಿದ್ದು, ಕೋಟ್ಯಂತರ ಬೆಲೆಬಾಳುವ ಪೋಯೆಸ್ ಗಾರ್ಡನ್ ಬಂಗ್ಲೆ ತಮ್ಮ ಆಪ್ತಸಖಿ ಶಶಿಕಲಾ ನಟರಾಜನ್ ಅವರಿಗೆ ಸೇರಲಿದೆ ಎಂದು ಉಯಿಲಿನಲ್ಲಿ ಬರೆದಿದ್ದಾರಂತೆ. ['ಚಿನ್ನ'ದ ಗೊಂಬೆ ಜಯಲಲಿತಾ ಬಳಿಯಿದ್ದ ಬಂಗಾರವೆಷ್ಟು?]

What does Jayalalithaas will state? Who will own Poes Garden

ಈ ವಿಲ್ ಅನ್ನು ಎರಡು ವರ್ಷಗಳ ಹಿಂದೆ ಬರೆಯಲಾಗಿತ್ತಾದರೂ, ನಂತರದ ದಿನಗಳಲ್ಲಿ ಅದನ್ನು ತಿದ್ದುಪಡಿ ಮಾಡಲಾಗಿತ್ತಾ ಎಂಬುದರ ಬಗ್ಗೆ ಯಾವುದೇ ಕುರುಹಿಲ್ಲ. ನಿಲಗಿರಿಯಲ್ಲಿರುವ ಕೋದಂಡ ಎಸ್ಟೇಟ್ ಮತ್ತು ಸಸಿ ಎಂಟರ್ಪ್ರೈಸಸ್ ಶಶಿಕಲಾ ಅವರ ಮಡಿಲಿಗೆ ಸೇರಲಿವೆ. ಜಯಾ ಪಬ್ಲಿಕೇಷನ್ ಕೂಡ ಅವರ ಪಾಲಾಗಲಿದೆ. [ಪ್ರಭಾವ ಬಳಸಿ ಗಿರಗಿಟ್ಲೆಯಾಡಿಸುವ ಶಶಿಕಲಾ : ಆಚಾರ್ಯ]

ಈಗ ಕೋಟಿಕೋಟಿ ಬಾಳುವ ಪೋಯೆಸ್ ಗಾರ್ಡನ್ ಅನ್ನು ಜಯಲಲಿತಾ ಅವರು 1967ರಲ್ಲಿ ಕೇವಲ 1.32 ಲಕ್ಷ ರು.ಗೆ ಕೊಂಡಿದ್ದರು. ಈಗ, ಎಐಎಂಡಿಕೆಯಲ್ಲಿ ಜಯಲಲಿತಾ ನಂತರ ಪ್ರಭಾವಿ ವ್ಯಕ್ತಿಯಾಗಿರುವ ಶಶಿಕಲಾ ನಟರಾಜನ್ ಅವರು ಇದರ ಒಡತಿಯಾಗಲಿದ್ದಾರೆ. ಪಕ್ಷದಲ್ಲಿ ಶಶಿಕಲಾ ಅವರನ್ನು ಚಿನ್ನಮ್ಮ ಎಂದೇ ಕರೆಯುತ್ತಾರೆ. [ಪ್ರಭಾವ ಬಳಸಿ ಗಿರಗಿಟ್ಲೆಯಾಡಿಸುವ ಶಶಿಕಲಾ : ಆಚಾರ್ಯ]

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಜಯಾ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ, ಅವರ ಬಳಿ ಒಟ್ಟಾರ 113.73 ಕೋಟಿ ರು. ಆಸ್ತಿಯಿದೆ. ಅದರಲ್ಲಿ 41.63 ಕೋಟಿ ರು. ಚರಾಸ್ತಿಯಾಗಿದ್ದರೆ, 72.09 ಕೋಟಿ ರು. ಸ್ಥಿರಾಸ್ತಿಯಾಗಿವೆ. ಅವರ ಬಳಿ ಕೇವಲ 41 ಸಾವಿರ ರು. ನಗದಿತ್ತು ಮತ್ತು 2.04 ಕೋಟಿ ರು. ಋಣಭಾರವಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
For many the will drawn up by J Jayalalithaa is of immense interest. A source says that there was a will drawn up by Jayalalithaa two years back in which she is said to have stated that this sprawling bungalow Poes Garden would go to her close aide and confidante Sasikala Natarajan.
Please Wait while comments are loading...