ಕೊರೊನಾದಿಂದ ಮೃತರಾದವರ ಅಂತ್ಯಕ್ರಿಯೆಗೆ ಜಾಗ ನೀಡಿದ ವಿಜಯಕಾಂತ್

ಚೆನ್ನೈ, ಏಪ್ರಿಲ್ 22: ಕೊರೊನಾ ವೈರಸ್‌ ಸೋಂಕು ತಗುಲಿ ಮರಣ ಹೊಂದಿದವರನ್ನು ಅಂತ್ಯಕ್ರಿಯೆ ಮಾಡಲು ತನ್ನ ಸ್ವತಃ ಜಾಗ ನೀಡುವುದಾಗಿ ತಮಿಳು ನಟ, ಡಿಎಂಕೆ ಪಕ್ಷದ ಅಧ್ಯಕ್ಷ ವಿಜಯಕಾಂತ್ ಘೋಷಣೆ ಮಾಡಿದ್ದಾರೆ.

ಕಳೆದ ಭಾನುವಾರ ಚೆನ್ನೈನಲ್ಲಿ ವೈದ್ಯರೊಬ್ಬರು ಕೊರೊನಾ ವೈರಸ್ ತಗುಲಿ ಮರಣ ಹೊಂದಿದರು. ಅವರ ಅಂತ್ಯಕ್ರಿಯೆಯನ್ನು ಅಣ್ಣಾ ನಗರದಲ್ಲಿ ಮಾಡಲು ಹೋದಾಗ ಅಲ್ಲಿನ ಸ್ಥಳಿಯರು ಆಕ್ಷೇಪ ವ್ಯಕ್ತಿಪಡಿಸಿದರು. ತಮಗೂ ಕೊರೊನಾ ವೈರಸ್‌ ತಗುಲಬಹುದು ಎನ್ನುವ ಭೀತಿಯಲ್ಲಿ ಆ ಜಾಗದಲ್ಲಿ ಅಂತ್ಯಕ್ರಿಯೆಯನ್ನು ವಿರೋಧಿಸಿದರು.

ಇದನ್ನು ಗಮನಿಸಿದ ವಿಜಯಕಾಂತ್ ಕೊರೊನಾ ವೈರಸ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ತಾನು ಭೂಮಿ ನೀಡುವುದಾಗಿ ತಿಳಿಸಿದ್ದಾರೆ. ತಮ್ಮ ಆಂಡಾಳ್ ಆಳಗರ್ ಇಂಜಿನಿಯರಿಂಗ್ ಕಾಲೇಜಿನ ಪ್ರದೇಶದ ಸ್ವಲ್ಪ ಜಾಗವನ್ನು ಅದಕ್ಕಾಗಿ ನೀಡುವೆ ಎಂದಿದ್ದಾರೆ.

Vijayakanth Offers Land For Burial Of Doctor Who Died Of COVID19

ವಿಜಯಕಾಂತ್ ವ್ಯಕ್ತಿತ್ವದ ಬಗ್ಗೆ ನಟ ಪವನ್ ಕಲ್ಯಾಣ್ ಮಂಗಳವಾರ ಸಂಜೆ ಟ್ವೀಟ್ ಮಾಡಿದ್ದಾರೆ. ''ಕೊರೊನಾದಿಂದ ಮೃತಪಟ್ಟ ವ್ಯಕ್ತಿ ಮೃತ ದೇಹವನು ಸ್ಮಶಾನದಲ್ಲಿ ಹೂಳಲು ಸ್ಥಳೀಯರು ನಿರಾಕರಿಸಿದರು. ಆದರೆ, ಡಿಎಂಡಿಕೆ ಮುಖಂಡ, ಸೂಪರ್ ಸ್ಟಾರ್ ವಿಜಯಕಾಂತ್ ತಮ್ಮ ಕಾಲೇಜಿನ ಜಾಗದಲ್ಲಿ ಸ್ವಲ್ಪ ಭಾಗವನ್ನು ನೀಡಿರುವುದು ಅದ್ಭುತ ಸಂಗತಿ. ಅವರದು ತುಂಬಾ ದೊಡ್ಡ ವ್ಯಕ್ತಿತ್ವ" ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+