• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ವಿಟ್ಟರಲ್ಲಿ #madrasday ಟ್ರೆಂಡಿಂಗ್, 379ನೇ HBD

By Mahesh
|

ಚೆನ್ನೈ, ಆಗಸ್ಟ್ 22: ತಮಿಳುನಾಡಿನ ರಾಜಧಾನಿ ಮದ್ರಾಸ್ (ಈಗಿನ ಅಧಿಕೃತ ಹೆಸರು ಚೆನ್ನೈ) ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 379ನೇ ವರ್ಷಾಚರಣೆ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಟ್ವಿಟ್ಟರ್ ನಲ್ಲಿ ಮದ್ರಾಸ್ ಇತಿಹಾಸ, ಹಿರಿಮೆ, ಗರಿಮೆ, ಹಳೆ ನೆನಪುಗಳ ಮೆಲುಕು ಹಾಕಲಾಗುತ್ತಿದೆ.

ಬ್ರಿಟಿಷರ ಕಾಲದ ಪ್ರಮುಖ ಬಂದರು ಪಟ್ಟಣವಾಗಿದ್ದ ಮದ್ರಾಸ್, ಭಾರತದ ಇತಿಹಾಸದೊಡನೆ ಹಾಸುಹೊಕ್ಕಿದೆ. ಆಗಸ್ಟ್ 22, 1639ರಂದು ಸ್ಥಳೀಯ ನಾಯಕ ಜನಾಂಗಕ್ಕೆ ಸೇರಿದ್ದ ಭೂಮಿಯನ್ನು ಖರೀದಿಸಿದ ಅಂದಿನ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಡೆ, ಸೇಂಟ್ ಜಾರ್ಜ್ ಕೋಟೆ ಕಟ್ಟಿದ. ಮದ್ರಾಸ್ ಎಂದು ಪುನರ್ ನಾಮಕರಣ ಮಾಡಿದ ಎಂದು ಇತಿಹಾಸದ ಪುಟಗಳು ಹೇಳುತ್ತವೆ.

ಚೆನ್ನಪಟ್ಟಿನಮ್, ಮದ್ರಾಸಟ್ನಂ ಎಂದು ಕರೆಯಲಾಗುತ್ತಿದ್ದ ಪಟ್ಟಣದ ಪ್ರಮುಖ ಕಟ್ಟಡವಾಗಿದ್ದ ಫೋರ್ಟ್ ಸೈಂಟ್ ಜಾರ್ಜ್ ಈಗ ತಮಿಳುನಾಡಿನ ಅಸೆಂಬ್ಲಿಯಾಗಿ ಮಾರ್ಪಾಟ್ಟಾಗಿದೆ.

ಸಣ್ಣ ಪುಟ್ಟ ಗ್ರಾಮೀಣ ಭಾಗಗಳನ್ನು ಹೊಂದಿಕೊಂಡಿದ್ದ ಮದ್ರಾಸ್ ನಂತರ ದೇಶದ ವಿವಿಧ ಭಾಗದ ಜನರಿಗೆ ಆಶ್ರಯ ತಾಣವಾಗಿದೆ. ಭಾರತದ ಪ್ರಮುಖ ಮೆಟ್ರೋ ಸಿಟಿಗೆ ಇತ್ತೀಚೆಗೆ ಮೆಟ್ರೋ ರೈಲು ಸಂಪರ್ಕ ಕೂಡಾ ಸಿಕ್ಕಿದೆ.

ಪುರಾತನ ಕಟ್ಟಡಗಳ ರಕ್ಷಣೆ

ಪುರಾತನ ಕಟ್ಟಡಗಳ ರಕ್ಷಣೆ

ಮದ್ರಾಸ್ ಗೆ ಮೊದಲು ಕಾಲಿರಿಸಿದ ಪೋರ್ಚುಗೀಸರು ಕಟ್ಟಿದ ಸೇಂಟ್ ಥಾಮಸ್ ಮೌಂಟ್ ಚರ್ಚ್ ಸೇರಿದಂತೆ ಹತ್ತು ಹಲವು ಪುರಾತನ ಕಟ್ಟಡಗಳ ರಕ್ಷಣೆಗಾಗಿ ಹೆರಿಟೇಜ್ ವಾಕ್ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 19ರಿಂದ ಮದ್ರಾಸ್ ಡೇ ಅಂಗವಾಗಿ 150ಕ್ಕೂ ಅಧಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪಾರಂಪರಿಕ ಕಟ್ಟಡ ಉಳಿಸುವುದು, ಪರಿಸರ ರಕ್ಷಣೆ ಮುಂತಾದ ಕಾರ್ಯಕ್ರಮಗಳು ಗಮನ ಸೆಳೆದಿವೆ.

ಹಲವು ಉದ್ಯಮಗಳ ತವರು ಚೆನ್ನೈ

ಹಲವು ಉದ್ಯಮಗಳ ತವರು ಚೆನ್ನೈ

ಸಂಗೀತ, ಸಾಹಿತ್ಯ, ಸಿನಿಮಾ, ಲಲಿತಕಲೆ, ಜವಳಿ, ಆರೋಗ್ಯ, ಆಟೋಮೊಬೈಲ್ ಅಲ್ಲದೆ, ಐಟಿ ಉದ್ಯಮಕ್ಕೂ ಚೆನ್ನೈ ಪ್ರಮುಖ ಕೇಂದ್ರವಾಗಿದೆ.

ಚೆನ್ನೈ ಎಂಬ ಹೆಸರಿನ ಬಗ್ಗೆ ಚರ್ಚೆ

'ಚೆನ್ನ' ಎಂಬುದು ತಮಿಳು ಪದವಲ್ಲ, ಮದ್ರಾಸ್ ಕೂಡಾ ಇಂಗ್ಲೀಷರು ಕೊಟ್ಟ ಹೆಸರು. ಹಾಗಾದರೆ ಇದು ಯಾವ ಭಾಷೆಯದ್ದು ಎಂಬ ಪ್ರಶ್ನೆಗೆ ಉತ್ತರಿಸಿ, ಗುರು ಪ್ರಸಾದ್ ಎಂಬುವರು ಪೆರಿಯಾರ್ ಅವರು ಕನ್ನಡಿಗ, ಹಾಗಾಗಿ ಚೆನ್ನೈ ಎಂಬ ಹೆಸರಿನ ಮೂಲ ಪದ ಚೆನ್ನ ಕೂಡಾ ಕನ್ನಡ ಎಂದಿದ್ದಾರೆ.

ಚೆನ್ನೈನಲ್ಲಿ ಏನಿದೆ ಏನಿಲ್ಲ ಎಲ್ಲವೂ ಇದೆ

ನಗರದ ಒಂದು ಪಕ್ಷಿನೋಟ ಇರುವ ಚಿತ್ರಗಳನ್ನು ಹಂಚಿಕೊಂಡ ಚೆನ್ನೈ ಪ್ರಿಯರು.

ಮದ್ರಾಸ್ ಡೇಗೆ ಶುಭಹಾರೈಕೆಗಳ ಮಹಾಪೂರ

ಮದ್ರಾಸ್ ಡೇಗೆ ಶುಭಹಾರೈಕೆಗಳ ಮಹಾಪೂರವೆ ಹರಿದು ಬರುತ್ತಿದೆ. ನಗರದ ವೈವಿಧ್ಯ ಪರಿಸರವನ್ನು ಸಾರುವ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ.

1942rರಲ್ಲೆ ಮದ್ರಾಸ್ ನಗರ ಹೇಗಿತ್ತು?

1942ರಲ್ಲಿ ಮದ್ರಾಸ್ ನಗರ ಹೇಗಿತ್ತು? ಎಂಬುದ ಬಗ್ಗೆ ಸಾಕ್ಷ್ಯಚಿತ್ರ ಇಲ್ಲಿದೆ

ಅಂದಿನ ಮದ್ರಾಸ್ ,ಇಂದಿನ ಚೆನ್ನೈ

ಅಂದಿನ ಮದ್ರಾಸ್ ,ಇಂದಿನ ಚೆನ್ನೈ ಕಟ್ಟಡಗಳ ಸ್ವರೂಪ ಹೇಗೆ ಬದಲಾಗಿವೆ ಎಂಬುದನ್ನು ತೋರಿಸುವ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಚೆನ್ನೈ ಸೆಂಟ್ರಲ್ ರಣಕಣ
ಮತದಾರರು
Electors
13,16,603
 • ಪುರುಷ
  6,53,358
  ಪುರುಷ
 • ಸ್ತ್ರೀ
  6,62,925
  ಸ್ತ್ರೀ
 • ತೃತೀಯ ಲಿಂಗಿ
  320
  ತೃತೀಯ ಲಿಂಗಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Madras(now Chennai) turns 379 today(Aug 22). It is widely believed that it was on August 22, 1639, that a deal was struck between British administrator Francis Day and the Nayak rulers to buy a sliver of land Twitterati celebrating Madras Happy Birthday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more