ಹೊಸ ಪಕ್ಷ ಸ್ಥಾಪನೆ ಮಾಡಿದ ಟಿಟಿವಿ ದಿನಕರನ್

ಚೆನ್ನೈ, ಮಾರ್ಚ್ 15 : ಶಶಿಕಲಾ ನಟರಾಜನ್ ಆಪ್ತ ಟಿಟಿವಿ ದಿನಕರನ್ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ನಟ ರಜನಿಕಾಂತ್, ಕಮಲ್ ಹಾಸನ್ ಹೊಸ ಪಕ್ಷ ಸ್ಥಾಪನೆ ಮಾಡಿದ ಬಳಿಕ ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಪಕ್ಷ ಉದಯವಾಗಿದೆ.

ಗುರುವಾರ ಮಧುರೈನಲ್ಲಿ ಟಿಟಿವಿ ದಿನಕರನ್ ಹೊಸ ಪಕ್ಷದ ಹೆಸರು ಘೋಷಣೆ ಮಾಡಿದರು. 'ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ' ಎಂಬ ಪಕ್ಷವನ್ನು ಆರ್.ಕೆ.ನಗರದ ಪಕ್ಷೇತರ ಶಾಸಕ ಟಿಟಿವಿ ದಿನಕರನ್ ಸ್ಥಾಪನೆ ಮಾಡಿದ್ದಾರೆ.

TTV Dinakaran

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಭಾವಚಿತ್ರವನ್ನು ಹೊಂದಿರುವ ಧ್ವಜವನ್ನು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಪಕ್ಷ ಒಳಗೊಂಡಿದೆ.

ಹೊಸ ಪಕ್ಷ ಸ್ಥಾಪನೆ ಮಾಡಿದ ಬಳಿಕ ಮಾತನಾಡಿದ ದಿನಕರನ್, 'ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ' ಎಂದರು.

'ನಮ್ಮ ಪಕ್ಷಕ್ಕೆ ಎರಡು ಎಲೆಯ ಚಿಹ್ನೆಯನ್ನು ಪಡೆಯಲು ನಾವು ಪ್ರಯತ್ನ ಮಾಡಲಿದ್ದೇವೆ. ಅಲ್ಲಿಯ ತನಕ ಪಕ್ಷದ ಚಿಹ್ನೆ ಕುಕ್ಕರ್ ಆಗಿರುತ್ತದೆ' ಎಂದು ಹೇಳಿದರು.

ತಮಿಳುನಾಡು ಮಾಜಿ ಸಿಎಂ ಜೆ.ಜಯಲಲಿತಾ ಅವರ ನಿಧನದಿಂದ ತೆರವಾದ ರಾಧಾಕೃಷ್ಣ ನಗರ (ಆರ್.ಕೆ.ನಗರ) ವಿಧಾನಸಭಾ ಕ್ಷೇತ್ರಕ್ಕೆ ಡಿ.21ರಂದು ಮತದಾನ ನಡೆದಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ದಿನಕರನ್ ಸ್ಪರ್ಧಿಸಿ, ಜಯಗಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+