ಆರ್.ಕೆ ನಗರ ಉಪಚುನಾವಣೆಯಲ್ಲಿ ಟಿಟಿವಿ ದಿನಕರನ್ ಸ್ಪರ್ಧೆ

Subscribe to Oneindia Kannada

ಚೆನ್ನೈ, ನವೆಂಬರ್ 29: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನದಿಂದ ತೆರವಾಗಿರುವ ಆರ್.ಕೆ ನಗರ ವಿಧಾನಸಭೆ ಚುನಾವಣೆಯಲ್ಲಿ ಟಿಟಿವಿ ದಿನಕರನ್ ಸ್ಪರ್ಧಿಸಲಿದ್ದಾರೆ.

ನನ್ನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರದ ಭಾಗವೇ ಐಟಿ ದಾಳಿ: ದಿನಕರನ್

"ವಿಕೆ ಶಶಿಕಲಾ ಸೂಚನೆ ಮೇರೆಗೆ ಆರ್.ಕೆ ನಗರ ವಿಧಾನಸಭೆ ಚುನಾವಣೆಗೆ ಟಿಟಿವಿ ದಿನಕರನ್ ನಮ್ಮ ಅಭ್ಯರ್ಥಿಯಾಗಿದ್ದಾರೆ," ಎಂದು ಟಿಟಿವಿ ದಿನಕರನ್ ಬಣದ ನಾಯಕ ಅನ್ಬಳಗನ್ ಹೇಳಿದ್ದಾರೆ.

TTV Dinakaran is Sasikala’s candidate for RK Nagar bypoll

ಈಗಾಗಲೇ ಆರ್.ಕೆ ನಗರ ಉಪಚುನಾವಣೆಗೆ ಡಿಎಂಕೆ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು ಮರುದು ಗಣೇಶನ್ ಕಣಕ್ಕಿಳಿಯಲಿದ್ದಾರೆ.

ಇನ್ನು ಎಐಎಡಿಎಂಕೆಯ ಅಕೃತ ಎರಡೆಲೆ ಚಿನ್ಹೆ ಪಡೆದಿರುವ ಓ ಪನ್ನೀರ್ ಸೆಲ್ವಂ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಬಣದಿಂದ ಇನ್ನೂ ಅಭ್ಯರ್ಥಿ ಹೆಸರು ಘೋಷಣೆಯಾಗಿಲ್ಲ.

ಆರ್.ಕೆ ನಗರ ವಿಧಾನಸಭೆ ಉಪಚುನಾವಣೆಗೆ ಡಿಸೆಂಬರ್ 21ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 24ರಂದು ಮತ ಎಣಿಕೆ ನಡೆಯಲಿದೆ. ಡಿ.4 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಡಿ.5 ರಿಂದ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಡಿ.7 ಕೊನೆಯ ದಿನವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
“With the consent of VK Sasikala, TTV Dinakaran will be our candidate for upcoming by-elections in RK Nagar,” said TTV faction leader Anbalagan in Chennai.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ