ಆರ್.ಕೆ ನಗರ ಉಪಚುನಾವಣೆ, ಟಿಟಿವಿ ದಿನಕರನ್ ಗೆ ಭರ್ಜರಿ ಜಯ

Subscribe to Oneindia Kannada
   ತಮಿಳುನಾಡಿನ ಆರ್ ಕೆ ನಗರ ಫಲಿತಾಂಶ : ಟಿ ಟಿ ವಿ ದಿನಕರನ್ ಗೆ ಭರ್ಜರಿ ಜಯ | Oneindia Kannada

   ಚೆನ್ನೈ, ಡಿಸೆಂಬರ್ 24: ತಮಿಳುನಾಡು ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್.ಕೆ ನಗರ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ ಇಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.

   ಆರ್.ಕೆ ನಗರ ಉಪಚುನಾವಣೆ: ಮತಎಣಿಕೆ ಕೇಂದ್ರದಲ್ಲಿ ಮಾರಾಮಾರಿ

   ಮೊದಲ ಸುತ್ತಿನಿಂದ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಶಶಿಕಲಾ ನಟರಾಜನ್ ಬೆಂಬಲಿತ ಅಭ್ಯರ್ಥಿ ಟಿಟಿವಿ ದಿನಕರನ್ ಅಂತಿಮ ಸುತ್ತಿನ ಅಂತ್ಯಕ್ಕೆ89,013 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ವಿರುದ್ಧ 40,707 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.

   TTV Dhinakaran wins RK Nagar bi-poll

   ಎರಡನೇ ಸ್ಥಾನವನ್ನು ಎಐಎಡಿಎಂಕೆ ಪಡೆದುಕೊಂಡಿದ್ದು, ಪಕ್ಷದ ಅಭ್ಯರ್ಥಿ ಇ. ಮಧುಸೂದನ್ ಕೇವಲ 48,306 ಮತಗಳನ್ನು ಪಡೆದಿದ್ದಾರೆ.

   ಆರ್.ಕೆ.ನಗರ ಉಪ ಚುನಾವಣಾ ಫಲಿತಾಂಶ ಇಂದು ಪ್ರಕಟ

   ಡಿಎಂಕೆ ಇಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಪಕ್ಷದ ಅಭ್ಯರ್ಥಿ ಮರುದು ಗಣೇಶನ್24,651 ಮತಗಳನ್ನಷ್ಟೇ ಪಡೆದಿದ್ದಾರೆ. ಇಲ್ಲಿ ಕೇವಲ 1,417 ಮತಗಳನ್ನು ಪಡೆಯಲು ಬಿಜೆಪಿ ಅಭ್ಯರ್ಥಿ ಶಕ್ತವಾಗಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   V.K Sasikala supported independent candidate TTV Dhinakaran has won RK Nagar bi-poll with a margin of more than 30 thousand votes.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ