• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡಿನಲ್ಲಿ ಕೊರೊನಾ ಅಟ್ಟಹಾಸ: ಸೋಂಕಿತರ ಸಂಖ್ಯೆ 411ಕ್ಕೆ ಏರಿಕೆ

|

ಚೆನ್ನೈ, ಏಪ್ರಿಲ್ 3: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್‌ ಅಟ್ಟಹಾಸ ಮಾಡುತ್ತಿದೆ. ಮಾರ್ಚ್ ತಿಂಗಳಲ್ಲಿ ಒಂದು ಹಂತಕ್ಕೆ ನಿಯಂತ್ರಣದಲ್ಲಿದ್ದ ಕೊರೊನಾ ಹರಡುವಿಕೆ ಕಳೆದ ನಾಲ್ಕೈದು ದಿನದಲ್ಲಿ ಹಳಿತಪ್ಪಿದೆ.

ದಿನಕ್ಕೆ ಹತ್ತು, ಇಪ್ಪತ್ತರಲ್ಲಿ ಇರುತ್ತಿದ್ದ ಸಂಖ್ಯೆ ಈಗ ಇನ್ನೂರು, ಮುನ್ನೂರಿಗೆ ಬಂದಿದೆ. ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು ಎರಡನೇ ಸ್ಥಾನ ಪಡೆದುಕೊಂಡಿದೆ.

ದೆಹಲಿ ಧಾರ್ಮಿಕ ಸಭೆಯಿಂದ 2 ದಿನದಲ್ಲಿ 647 ಜನರಿಗೆ ಸೋಂಕುದೆಹಲಿ ಧಾರ್ಮಿಕ ಸಭೆಯಿಂದ 2 ದಿನದಲ್ಲಿ 647 ಜನರಿಗೆ ಸೋಂಕು

ಇಂದು ಒಂದೇ ದಿನ ತಮಿಳುನಾಡಿನಲ್ಲಿ 102 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಅದರಲ್ಲಿ 100 ಜನರು ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಎಂದು ತಮಿಳುನಾಡು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಬೀಲಾ ರಾಜೇಶ್ ಮಾಹಿತಿ ನೀಡಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 411ಕ್ಕೆ ಏರಿದೆ. ದುರಂತ ಅಂದ್ರೆ 411ರ ಪೈಕಿ 364 ಜನರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರು.

ಲಾಕ್‌ಡೌನ್‌ ಉಲ್ಲಂಘಿಸಿದ್ದಕ್ಕೆ ತಂದೆ ಮೇಲೆ ಮಗನಿಂದ ಕೇಸ್ಲಾಕ್‌ಡೌನ್‌ ಉಲ್ಲಂಘಿಸಿದ್ದಕ್ಕೆ ತಂದೆ ಮೇಲೆ ಮಗನಿಂದ ಕೇಸ್

ತಮಿಳುನಾಡಿನಿಂದ 1200 ಜನರು ದೆಹಲಿಯ ಜಮಾತ್‌ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರೆಲ್ಲರನ್ನು ಗುರುತಿಸಿ ಕ್ವಾರೆಂಟೈನ್‌ ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 384ಕ್ಕೆ ಏರಿದೆ. ಅದರಲ್ಲಿ 58 ಜನರು ವಿದೇಶಿ ಪ್ರವಾಸದ ಹಿನ್ನೆಲೆ ಹೊಂದಿದ್ದಾರೆ. 259 ಜನರು ಜಮಾತ್ ಮಸೀದಿಯಲ್ಲಿ ಪಾಲ್ಗೊಂಡಿದ್ದವರು ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಪ್ರಸ್ತುತ ಸೋಂಕಿತರ ಸಂಖ್ಯೆ 124ರಲ್ಲಿದೆ. ದೆಹಲಿಗೆ ಹೋಗಿದ್ದ ಬಹುತೇಕ ಎಲ್ಲರನ್ನು ಕ್ವಾರೆಂಟೈನ್‌ಗೆ ಒಳಪಡಿಸಿದ್ದೇವೆ ಎಂದು ಸರ್ಕಾರ ಹೇಳಿದೆ.

English summary
Total number of positive cases in the tamilnadu stands at 411, out of them 364 had participated in Delhi's Jamaat event: Beela Rajesh, State Health Secy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X