ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯಿಂದ ಡಿಸ್ಚಾರ್ಜ್‌ಗೂ ಮುನ್ನ ಕೊರೊನಾ ಸೋಂಕಿತೆಗೆ ಹೃದಯಾಘಾತ, ಸಾವು

|
Google Oneindia Kannada News

ಚೆನ್ನೈ, ಮೇ 6: ರೋಗ ಬಿಟ್ಟರು ವಿಧಿ ಬಿಡುವುದಿಲ್ಲ ಬಿಡುವುದಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

Recommended Video

BSY 1610 ಕೋಟಿ ಪ್ಯಾಕೇಜ್ ಘೋಷಣೆ , ಕೊರೊನ ಪರಿಹಾರದಲ್ಲಿ ರಾಜ್ಯವೇ ನಂಬರ್ ಒನ್ | Yediyurappa | Karnataka

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಇನ್ನೇನು ಮನೆಗೆ ತೆರಳಬೇಕು ಎನ್ನುವಷ್ಟರಲ್ಲಿ ಕೊರೊನಾ ಸೋಂಕಿತ ಮಹಿಳೆಗೆ ಹೃದಯಾಘಾತವಾಗಿ ಅಲ್ಲೇ ಕೊನೆಯುಸಿರೆಳೆದಿದ್ದಾರೆ.

ತಮಿಳುನಾಡಿನ ತಿರುವಣ್ಣಾ ಮಲೈನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಅರ್ನಿಯ ಪಲ್ಲಿಕೂಡ ರಸ್ತೆಯ ನಿವಾಸಿ ಸುಮಾರು 55 ವರ್ಷದ ಮಹಿಳೆ ಈ ಹಿಂದೆ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದರು. ತಿರುವಣ್ಣಾ ಮಲೈನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

TN Woman Who Recovered From Corona Dies Of Cardiac Arrest

ಚಿಕಿತ್ಸೆ ಫಲಕಾರಿಯಾಗಿ ಆಕೆ ಸೋಂಕು ಮುಕ್ತರಾಗಿದ್ದರು. ಇತ್ತೀಚೆಗೆ ನಡೆದ ಕೊರೊನಾ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದ ಕಾರಣ ಅವರನ್ನು ಮನೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು.

ಬಸ್ ನಲ್ಲೇ ಹೃದಯಾಘಾತ; 22 ವರ್ಷದ ಯುವಕ ಸಾವುಬಸ್ ನಲ್ಲೇ ಹೃದಯಾಘಾತ; 22 ವರ್ಷದ ಯುವಕ ಸಾವು

ಈಕೆಯ ಪುತ್ರ ದೆಹಲಿಯ ಮರ್ಕಜ್ ನಡೆದ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರಿಂದ ಇವರಿಗೂ ವೈರಸ್ ಸೋಂಕು ತಗುಲಿತ್ತು ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.

ಅದರಂತೆ ಮನೆಗೆ ತೆರಳಲು ಸಿದ್ಧರಾಗಿದ್ದ ಮಹಿಳೆ ಇನ್ನೊಂದು ದಿನದಲ್ಲಿ ಮನೆಗೆ ತೆರಳಬೇಕಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಅವರಿಗೆ ಹೃದಯಾಘಾತವಾಗಿ ಅವರು ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಕಾಲೇಜಿನ ಡೀನ್ ಪೆರುಮಾಳ್ ಬಾಬು ಅವರು, ಕಳೆದ ಎರಡು ಕೊರೊನಾ ಪರೀಕ್ಷೆಯಲ್ಲಿ ಮಹಿಳೆಯ ವರದಿ ನೆಗೆಟಿವ್ ಬಂದಿತ್ತು. ಹೀಗಾಗಿ ಆಕೆಯನ್ನು ಡಿಸ್ಚಾರ್ಜ್ ಮಾಡಲು ಸೂಚಿಸಿದ್ದೆವು. ಆದರೆ ಈಗ ಆಕೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

English summary
A 55-year-old woman, who had been undergoing treatment for COVID-19 for about three weeks, died at the Tiruvannamalai government medical college hospital on Wednesday. Doctors said the death was caused by a sudden cardiac arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X