ತಮಿಳುನಾಡಿನ ವ್ಯಾಪಾರಿಯಿಂದ PMGKYಗೆ 246 ಕೋಟಿ ಜಮೆ
ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ತಿರುಚೆಂಗೊಡೆಯ ವ್ಯಾಪಾರಿಯೊಬ್ಬರು 246 ಕೋಟಿ ರುಪಾಯಿ ಹಣವನ್ನು ಜಮೆ ಮಾಡಿದ್ದು, ಆ ನಂತರ ಆದಾಯ ತೆರಿಗೆ ಇಲಾಖೆ ನೀಡಿದ ಹೊಸ ಅವಕಾಶದ ಅನ್ವಯ ಆ ಹಣ ಏನು ಮಾಡಿದ್ದಾರೆ ಎಂದು ತಿಳಿಯಲು ಈ ವರದಿ ಓದಿ
ಚೆನ್ನೈ, ಮಾರ್ಚ್ 26: ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ತಿರುಚೆಂಗೊಡೆ ಮೂಲದ ವ್ಯಾಪಾರಿಯೊಬ್ಬರು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ 246 ಕೋಟಿ ರುಪಾಯಿ ಜಮೆ ಮಾಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದಾಯ ತೆರಿಗೆ ಅಧಿಕಾರಿಗಳ ಪ್ರಕಾರ, ಆತ ಅಮಾನ್ಯವಾದ ನೋಟುಗಳನ್ನು ಜಮೆ ಮಾಡಿದ ನಂತರ ಹದಿನೈದು ದಿನಗಳ ಕಾಲ ಚಲನವಲನಗಳ ಮೇಲೆ ನಿಗಾ ವಹಿಸಲಾಗಿತ್ತು.
ಆರಂಭದಲ್ಲಿ ಆತ ವಿಚಾರ ಮುಚ್ಚಿಡಲು ಯತ್ನಿಸಿದ್ದು, 15 ದಿನಗಳ ನಂತರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ (PMGKY) ಸೇರಲು ಒಪ್ಪಿ, ಒಟ್ಟು ಮೊತ್ತದ ಶೇ 45ರಷ್ಟನ್ನು ತೆರಿಗೆಯಾಗಿ ಪಾವತಿಸಲು ಒಪ್ಪಿದ್ದಾರೆ. ಅಪನಗದೀಕರಣ ಘೋಷಣೆ ನಂತರ 200ಕ್ಕೂ ಹೆಚ್ಚು ಖಾಸಗಿ ವ್ಯಕ್ತಿಗಳು ಹಾಗೂ ಕಂಪೆನಿಗಳು ತಮಿಳುಣಾಡು ಹಾಗೂ ಪುದುಚೆರಿಯ ವಿವಿಧ ಬ್ಯಾಂಕ್ ಖಾತೆಗಳಲ್ಲಿ 600 ಕೋಟಿ ರುಪಾಯಿ ಹೆಚ್ಚು ಮಾಡಿರುವುದಾಗಿ ವರದಿಯಾಗಿದೆ.[ಮಂಗಳೂರು: ಐಟಿ ದಾಳಿ, ಒಂದೇ ದಿನದಲ್ಲಿ ಸಿಕ್ಕಿರೋದು ರು.172 ಕೋಟಿ!]

ಆ ಪೈಕಿ ಹಲವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾಗೆ ಸೇರಿದ್ದಾರೆ. ಈ ಅವಕಾಶ ಮಾರ್ಚ್ 31ಕ್ಕೆ ಕೊನೆಯಾಗುತ್ತದೆ. ಮಾರ್ಚ್ ಅಂತ್ಯದ ವೇಳೆಗೆ ಲೆಕ್ಕ ನೀಡದೆ ಇರಿಸಿಕೊಂಡಿದ್ದ ಹಣದ ಮೊತ್ತ ಸಾವಿರ ಕೋಟಿ ಆಗಲಿದೆ. ಈಗಲೂ ತಮ್ಮ ಬಳಿಯ ಹಣದ ಲೆಕ್ಕ ಕೊಡದವರಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಏಪ್ರಿಲ್ 1ರ ನಂತರ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.[ಇದೋ ನೋಡಿ ಬಂತು ಕಪ್ಪುಹಣ ಬಿಳುಪಾಗಿಸಲು ಮತ್ತೊಂದು ಅವಕಾಶ]
ಲೆಕ್ಕಕ್ಕೆ ಕೊಡದ ಹಣ ಇಟ್ಟುಕೊಂಡಂಥವರು ನಗದು, ಚೆಕ್, ಡಿಡಿ ಅಥವಾ ಬೇರಾವ ರೀತಿಯಲ್ಲಾದರೂ ಬ್ಯಾಂಕ್ ಗೆ ಹಣ ಜಮೆ ಮಾಡಬಹುದು. ಆ ಪೈಕಿ ಶೇ 50ರಷ್ಟು ತೆರಿಗೆ ಹೋಗುತ್ತದೆ. ಉಳಿದ ಶೇ 25ರಷ್ಟನ್ನು ನಾಲ್ಕು ವರ್ಷದ ಅವಧಿಗೆ ಬಡ್ಡಿರಹಿತ ಬಾಂದ್ ರೂಪದಲ್ಲಿ ರಿಸರ್ವ್ ಬ್ಯಾಂಕ್ ಬಳಿ ಇರಿಸಲಾಗುತ್ತದೆ. ಉಳಿದ ಹಣವನ್ನು ಪಾವತಿದಾರರು ಬಳಸಿಕೊಳ್ಳಬಹುದು.












Click it and Unblock the Notifications