• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೈಕ್ ಸವಾರನ ನಿಲ್ಲಿಸಿ ತಮಿಳುನಾಡು ಪೊಲೀಸ್ ಕೇಳಿದ್ದು ಕೊರೊನಾ ಸರ್ಟಿಫಿಕೇಟ್, ದಾಖಲೆಗಳನ್ನಲ್ಲ

|

ನೀವು ಬೈಕ್ ಅಥವಾ ಕಾರಿನಲ್ಲಿ ಹೋಗುತ್ತಿರುವಾಗ ಹೆದ್ದಾರಿಯಲ್ಲೋ ಅಥವಾ ಯಾವುದೋ ಪ್ರದೇಶದಲ್ಲಿಪೊಲೀಸರು ಕೈ ಅಡ್ಡ ಮಾಡುವುದು ಸಾಮಾನ್ಯ. ಈಗಂತೂ ಕೊರೊನಾ ಇರುವುದರಿಂದ ಪ್ರತಿ ರಾಜ್ಯದ ಗಡಿಯಲ್ಲೂ ಚೆಕ್ ಮಾಡಿ ಕಳಿಸುವುದು ಇದ್ದೇ ಇದೆ.

ಹಾಗೆಯೇ ಬೆಂಗಳೂರಿನಿಂದ ತಮಿಳುನಾಡಿಗೆ ಹೊರಟಿದ್ದ ಯುವಕನೊಬ್ಬನಿಗೆ ಹೆದ್ದಾರಿಯಲ್ಲಿ ಪೊಲೀಸರು ಕೈ ಮಾಡಿ ನಿಲ್ಲಿಸಿದ್ದಾರೆ. ಬೆಂಗಳೂರಿಂದ ಬಂದವರಾ ಎಂದು ಎಂದು ವಿಚಾರಿಸಿದ್ದಾರೆ.

ಆದರೆ ಪೊಲೀಸ್ ಕೈ ಮಾಡಿದ್ದು, ಬೈಕಿನ ದಾಖಲೆ ಅಥವಾ ಕೊರೊನಾ ಸರ್ಟಿಫಿಕೇಟ್ ಕೇಳಲು ಅಲ್ಲ. ಬದಲಾಗಿ ವೃದ್ಧರೊಬ್ಬರು ಸರ್ಕಾರಿ ಬಸ್‌ನಿಂದ ಔಷಧವನ್ನು ಬೀಳಿಸಿಕೊಂಡಿದ್ದಾರೆ. ಅದನ್ನು ಅವರಿಗೆ ತಲುಪಿಸುತ್ತೀರಾ ಎಂದು ಮನವಿ ಮಾಡಿಕೊಂಡಿದ್ದಾರೆ.

ಅರುಣ್ ಕುಮಾರ್ ಎಂಬುವವರು ಇದನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಪೊಲೀಸ್ ಈ ಮನವಿ ಮಾಡುತ್ತಿದ್ದಂತೆಯೇ ಸಮಯವನ್ನು ವ್ಯರ್ಥ ಮಾಡದೆ ಅರುಣ್ ಔಷಧಿಯ ಬಾಟಲಿಯನ್ನು ಪಡೆದು ಮುಂದೆ ಸಾಗಿ ಬಸ್ ನಿಲ್ಲಿಸಿ ಇದನ್ನು ಮಹಿಳೆಗೆ ನೀಡುತ್ತಾರೆ.

ಕಳೆದು ಹೋದ ಔಷಧಿ ಸಿಗುತ್ತಿದ್ದಂತೆಯೇ ಮಹಿಳೆ ಧನ್ಯವಾದ ಅರ್ಪಿಸುತ್ತಾರೆ. ಬಸ್ ಚಾಲಕರು ಕೂಡಾ ಈ ಯುವಕನ ಕಾರ್ಯವನ್ನು ಮೆಚ್ಚಿ ಮುಂದೆ ಹೋಗಿದ್ದಾರೆ.

ಈ ಎಲ್ಲಾ ವಿಡಿಯೋವನ್ನು ಯುವಕ ತಮ್ಮ ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

English summary
A biker getting stopped by a policeman often means bad news. But here is a heartwarming story of a Tamil Nadu cop who stopped a biker to offer him an opportunity to be a Good Samaritan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X