ವಿಕ್ರಮ್ ಲ್ಯಾಂಡರ್ ಪತ್ತೆಗೆ ನೆರವಾಗಿದ್ದು ಚೆನ್ನೈ ಟೆಕ್ಕಿ

ಚೆನ್ನೈ, ಡಿಸೆಂಬರ್ 03: ಭಾರತದ ಚಂದ್ರಯಾನ- 2 ಯೋಜನೆಯ 'ವಿಕ್ರಮ್ ಲ್ಯಾಂಡರ್' ಚಂದ್ರನ ಮೇಲೆ ಪತನಗೊಂಡ ಸ್ಥಳವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪತ್ತೆ ಹಚ್ಚಿ, ಚಿತ್ರ ಕಳಿಸಿದೆ. ಈ ವಿಕ್ರಮ್ ಲ್ಯಾಂಡರ್ ನಿಖರವಾಗಿದೆ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ನೆರವಾಗಿದ್ದು ಚೆನ್ನೈ ಮೂಲದ ಟೆಕ್ಕಿ ಎಂಬುದು ತಿಳಿದು ಬಂದಿದೆ.

ಚಂದ್ರನ ದಕ್ಷಿಣ ಧ್ರುವದ ಚಿತ್ರಗಳಲ್ಲಿ ವಿಕ್ರಮ್‌ ಲ್ಯಾಂಡರ್‌ ಪತನಗೊಂಡ ಸ್ಥಳವನ್ನು ನಾಸಾದ Lunar Reconnaissance Orbiter ದಿ ಲೂನಾರ್‌ ರಿಕಾನೈಸೆನ್ಸ್‌ ಆರ್ಬಿಟರ್‌ (ಎಲ್‌ಆರ್‌ಓ) ಉಪಗ್ರಹವು ನಿಖರವಾಗಿ ಪತ್ತೆ ಹಚ್ಚಿದೆ.

ವಿಕ್ರಮ್ ಲ್ಯಾಂಡರ್ ಪತನಗೊಂಡ ಬಳಿಕ ಅದರ ಭಾಗಗಳು 24 ವಿವಿಧ ಸ್ಥಳಗಳಲ್ಲಿ ಚದುರಿ ಹೋಗಿವೆ. ಕೆಲವು ಕಿಲೋಮೀಟರ್ ತನಕ ಬಿಡಿಭಾಗಗಳು ಹರಡಿಕೊಂಡಿರುವುದು ಚಿತ್ರ ತೋರಿಸುತ್ತಿದೆ.

ಈ ನಿಖರ ಮಾಹಿತಿ ಪತ್ತೆ ಹಚ್ಚಿದ ಕೀರ್ತಿಯನ್ನು ನನಗೆ ನಾಸಾ ನೀಡಿದೆ ಎಂದು ಷಣ್ಮುಗ ಸುಬ್ರಮಣಿಯನ್ ಅಲಿಯಾಸ್ ಶಾನ್ (@Ramanean) ಟ್ವೀಟ್ ಮಾಡಿದ್ದಾರೆ.

2019ರ ಸೆಪ್ಟೆಂಬರ್ 7ರಂದು ಮುಂಜಾನೆ 1.55ಕ್ಕೆ ಚಂದ್ರನ ಮೇಲೆ ಇಳಿಯುವ ಕೊನೆ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ಈ ಮೂಲಕ ಭಾರತದ ಮಹತ್ವದ ಚಂದ್ರಯಾನ -2 ಯೋಜನೆ ಕೊನೆ ಕ್ಷಣದಲ್ಲಿ ವಿಫಲವಾಗಿತ್ತು.

ವಿಕ್ರಮ್ ಲ್ಯಾಂಡರ್ ಸೆಪ್ಟೆಂಬರ್ 7ರ ಮುಂಜಾನೆ 1.38ಕ್ಕೆ ಲ್ಯಾಂಡರ್ ಗಗನನೌಕೆಯಿಂದ ಕಳಚಿಕೊಂಡಿತ್ತು. ಚಂದ್ರನ ದಕ್ಷಿಣ ಭಾಗದ ಮೇಲ್ಮೈ ಸನಿಹಕ್ಕೆ ಬಂದಿತ್ತು. ಕೊನೆಯ ಕ್ಷಣದಲ್ಲಿ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತ್ತು.

ಷಣ್ಮುಗ ಸುಬ್ರಮಣಿಯನ್

ಷಣ್ಮುಗ ಸುಬ್ರಮಣಿಯನ್

ನಾಸಾ ಅವರು ಷಣ್ಮುಗ ಸುಬ್ರಮಣಿಯನ್ ಅವರು ಎಲ್ ಆರ್ ಒ ಯೋಜನೆಯನ್ನು ಸಂಪರ್ಕಿಸಿ ಚಂದ್ರನ ಮೇಲ್ಮೈನ ವಾಯುವ್ಯದಲ್ಲಿ 750 ಮೀಟರ್ ದೂರದಲ್ಲಿ ಅಪಘಾತ ಸ್ಥಳವಿದೆ ಎಂದು ಹೇಳಿದ್ದರು.


ಚೆನ್ನೈನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಾನ್ ಅವರು ಸದ್ಯ ಕಾಗ್ನಿಜೆಂಟ್ ನಲ್ಲಿ ಪ್ರೊಗ್ರಾಂ ಅನಾಲಿಸ್ಟ್ ಆಗಿದ್ದಾರೆ. ಎಲ್ ಆರ್ ಒದಿಂದ ಲಭ್ಯವಾದ ಚಂದ್ರದ ಚಿತ್ರಗಳನ್ನು ಸಂಗ್ರಹಿಸಿದ ಶಾನ್ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 14,15 ಹಾಗೂ ನವೆಂಬರ್ 11ರ ಚಿತ್ರಗಳನ್ನು ಪರಿಶೀಲಿಸಿ ನಿಖರವಾದ ಸ್ಥಳ ಪತ್ತೆ ಹಚ್ಚಿದ್ದಾರೆ.

ನಾಸಾಗೆ ಸುದೀರ್ಘವಾಗಿ ಪತ್ರ ಬರೆದಿದ್ದ ಶಾನ್

ನಾಸಾಗೆ ಸುದೀರ್ಘವಾಗಿ ಪತ್ರ ಬರೆದಿದ್ದ ಶಾನ್

ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ಬಗ್ಗೆ ನಾಸಾಗೆ ಸುದೀರ್ಘವಾಗಿ ಪತ್ರ ಬರೆದಿದ್ದಾರೆ. ಮೊದಲಿಗೆ ಈ ಬಗ್ಗೆ ಹೆಚ್ಚು ಗಮನಹರಿಸದ ನಾಸಾ ನಂತರ, ಶಾನ್ ಗುರುತು ಪತ್ತೆ ಕ್ರಮವನ್ನೇ ಅನುಸರಿಸಿದೆ. ಇದು ಸರಿಯಾದ ವಿಧಾನ ಈ ಕ್ರಮದಿಂದ ನಿಖರವಾದ ಸ್ಥಳ ಪತ್ತೆ ಸಾಧ್ಯ ಎಂಬುದನ್ನು ದೃಢಪಡಿಸಿಕೊಂಡಿದೆ. ನಂತರ ಎಲ್ ಆರ್ ಒ ಯೋಜನೆಯ ವಿಜ್ಞಾನಿ ಜಾನ್ ಕೆಲ್ಲರ್ ಅವರು ಶಾನ್ ಅವರನ್ನು ಅಭಿನಂದಿಸಿ ಪತ್ರ ಬರೆದಿದ್ದಾರೆ.

ಇದೇ ವಿಕ್ರಮ್ ಲ್ಯಾಂಡರ್ ?

ನಾಸಾಗೆ ನೆರವಾಗುವಂಥ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದ ಶಾನ್, ನಿಖರವಾದ ಸ್ಥಳವನ್ನು ಗುರುತು ಹಾಕಿ ಇದೇ ವಿಕ್ರಮ್ ಲ್ಯಾಂಡರ್ ? ಇರಬಹುದೇ ಎಂದು ಚಿತ್ರ ಸಮೇತ ಟ್ವೀಟ್ ಮಾಡಿದ್ದರು.

ತಾಂತ್ರಿಕ ಸಮಸ್ಯೆ ವಿಫಲ

ತಾಂತ್ರಿಕ ಸಮಸ್ಯೆ ವಿಫಲ

ಚಂದ್ರಯಾನ 2ರ ಯೋಜನೆ ನಿರ್ಮಾಣಕ್ಕೆ 603 ಕೋಟಿ ರೂ. ವೆಚ್ಚ ತಗುಲಿತ್ತು. ಅದರ ಉಡಾವಣೆಗೆ 367 ಕೋಟಿ ರೂ. ವೆಚ್ಚವಾಗಿದೆ ಎಂದು ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು. ಚಂದ್ರಯಾನ 2 ಸಂಪೂರ್ಣ ಸ್ವದೇಶಿ ನಿರ್ಮಿತವಾಗಿದ್ದು, ಸ್ವದೇಶಿ ನಿರ್ಮಿತ ಜಿಎಸ್‌ಎಲ್‌ವಿ ಎಂಕೆ III-ಎಂ1 ರಾಕೆಟ್ ಮೂಲಕ ಜುಲೈ 22ರಂದು ಉಡಾವಣೆ ಮಾಡಲಾಗಿತ್ತು.

ಚಂದ್ರನನ್ನು ಗುರಿಯನ್ನಾಗಿರಿಸಿಕೊಂಡು ಹೊರಟಿದ್ದ ನೌಕೆಯನ್ನು ಕಕ್ಷೆಗೆ ಸೇರ್ಪಡಿಸುವ ಕಾರ್ಯವು 119*127 ಕಿ.ಮೀಯಲ್ಲಿ ಯಶಸ್ವಿಯಾಗಿ ನಡೆದಿತ್ತು. ಉದ್ದೇಶದಂತೆಯೇ ಲ್ಯಾಂಡರ್ ಸೆ. 2ರಂದು ಆರ್ಬಿಟರ್‌ನಿಂದ ಬೇರ್ಪಟ್ಟಿತು. ಎರಡು ಯಶಸ್ವಿ ಡಿ-ಮ್ಯಾನೆಯುವರ್‌ಗಳ ಬಳಿಕ ಸೆ. 7ರಂದು ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ಗಾಗಿ ಲ್ಯಾಂಡರ್ ಇಳಿಯುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಈ ಪ್ರಯತ್ನ ವಿಫಲವಾಯಿತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+