ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಎಫ್ ಐಆರ್

Posted By:
Subscribe to Oneindia Kannada

ನವದಹೆಲಿ, ಮೇ 18: ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಕಪ್ಪು ಹಣ ಬಿಳಿಯಾಗಿಸುವ ದಂಧೆ ಹಾಗೂ ವಿದೇಶಿ ಬಂಡವಾಳ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಚೆನ್ನೈನಲ್ಲಿರುವ ಕಾರ್ತಿ ಚಿದಂಬರಂ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ಸಿಬಿಐ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಕಂಡುಬಂದ ಅಂಶಗಳ ಆಧಾರದ ಮೇಲೆ ಸಿಬಿಐ, ಈಗ ಕಾರ್ತಿ ವಿರುದ್ಧ ಎಫ್ ಐಆರ್ ದಾಖಲಿಸಿದೆ.

The CBI filed FIR against Karti Chidambaram following the recent raids

ಕಾರ್ತಿ ಚಿದಂಬರಂ ಅವರ ಐಎನ್ಎಕ್ಸ್ ಕಂಪನಿಗೆ ವಿದೇಶಿ ಬಂಡವಾಳ ಹೂಡಿಕೆಗಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯಿಂದ (ಎಫ್ ಐಪಿಬಿ) ಅನುಮತಿ ಸಿಗುವ ಮುಂಚೆಯೇ ಆ ಕಂಪನಿಗೆ ವಿದೇಶಿ ಕಂಪನಿಗಳಿಂದ ಹಣ ಹೂಡಿಕೆಯಾಗಿರುವ ಆರೋಪವಿದೆ.

ಇದಲ್ಲದೆ, ಎಫ್ ಐಪಿಬಿ ಅನುಮತಿ ಕೂಡ ನಿಯಮಾವಳಿಗಳನ್ನು ಉಲ್ಲಂಘಿಸಿ ಸಿಕ್ಕಿರುವ ಬಗ್ಗೆ ಆರೋಪಗಳಿರುವ ಕಾರಣದಿಂದಾಗಿ, ಸಿಬಿಐ ಕಾರ್ತಿ ಮನೆ ಮೇಲೆ ಇತ್ತೀಚೆಗೆ ದಾಳಿ ನಡೆಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There is more trouble brewing for Karti Chidambaram son of former union minister, P Chidambaram as the Enforcement Directorate is set to file a case under the provisions of the Prevention of Money Laundering Act.
Please Wait while comments are loading...