ಫೇಸ್‌ಬುಕ್ ಪ್ರೇಮಿ ಜೊತೆ ಓಡಿಹೋಗಲು ನಿರಾಕರಿಸಿದ ಅಮ್ಮನನ್ನು ಕೊಂದ ಮಗಳು
ತಿರುವಳ್ಳೂರ್, ಡಿಸೆಂಬರ್ 26: ಫೇಸ್‌ಬುಕ್ ಪ್ರೇಮಿ ಜೊತೆ ಓಡಿಹೋಗಲು ಅನುಮತಿ ನೀಡಿಲ್ಲ ಎನ್ನುವ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ತಿರುವಳ್ಳೂರಲ್ಲಿ ನಡೆದಿದೆ.
ಫೇಸ್‌ಬುಕ್ ಪ್ರೇಮಿ ಜೊತೆ ಓಡಿಹೋಗಲು ಯತ್ನಿಸಿದಾಗ ತಾಯಿ ತಡೆದಿದ್ದಾರೆ. ಆಗ ಕೋಪದಿಂದ ತಾಯಿಗೆ ಕತ್ತಿಯಿಂದ ಇರಿದು ಹತ್ಯೆ ಮಾಡಿದ್ದಾರೆ.
ಇನ್ನು ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವ ದೇವಿ ಪ್ರಿಯಾ ಫೇಸ್‌ಬುಕ್ ಗೆಳೆಯ ವಿವೇಕ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ಪ್ರೇಮಿಗಳು ಮನೆಯಿಂದ ಪರಾರಿಯಾಗಲು ನಿರ್ಧಾರ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿವೇಕ್ ಕಾರ್ಮೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ, ಇವರು ಪ್ರೀತಿಯ ವಿಷಯ ತಿಳಿದ ತಾಯಿಗೆ ಆಘಾತವಾಗಿದೆ ಮನೆಬಿಟ್ಟು ಹೋಗಬೇಡ ಎಂದು ಬುದ್ಧಿಮಾತು ಹೇಳಿದ್ದಾಳೆ. ಅದಕ್ಕೆ ಕೋಪಗೊಂಡ ಮಗಳು ತಾಯಿಯನ್ನು ಕೊಲೆ ಮಾಡಿದ್ದಾಳೆ. ಆ ಸಂದರ್ಭದಲ್ಲಿ ಆಕೆಯ ಗೆಳೆಯರಾದ ಸತೀಶ್ ಮತ್ತು ವಿಘ್ನೇಶ್ ಅಲ್ಲಿಯೇ ಇದ್ದರು ಅವರು ಪರಾರಿಯಾಗಲುಯತ್ನಿಸಿದಾಗ ಸ್ಥಳೀಯರು ಮತ್ತು ಆ ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.












Click it and Unblock the Notifications