ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಕೊರೊನಾ ಅಟ್ಟಹಾಸ: ಒಂದೇ ದಿನ 527 ಕೇಸ್

|
Google Oneindia Kannada News

ಚೆನ್ನೈ, ಮೇ 4: ಕೊರೊನಾ ವೈರಸ್‌ ದಾಳಿಯಿಂದ ಮುಕ್ತವಾಗಲು ರಾಜ್ಯಗಳು ಹರಸಾಹಸ ಪಡುತ್ತಿದೆ. ಮಹಾರಾಷ್ಟ್ರ, ಗುಜರಾತ್, ದೆಹಲಿಯಲ್ಲಿ ಕೊರೊನಾ ಅಟ್ಟಹಾಸ ಮಾಡಿದೆ. ಇದೀಗ, ತಮಿಳುನಾಡಿನಲ್ಲಿ ಕೊವಿಡ್ ಹಾವಳಿ ಹೆಚ್ಚಾಗಿದೆ.

ಇಂದು ಒಂದೇ ದಿನ ತಮಿಳುನಾಡಿನಲ್ಲಿ 527 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈವರೆಗೂ ತಮಿಳುನಾಡಿನಲ್ಲಿ ದಿನವೊಂದರಲ್ಲಿ ವರದಿಯಾದ ಸೋಂಕಿತರ ಪೈಕಿ ಇದೇ ಹೆಚ್ಚು ಎಂದು ಹೇಳಿದೆ.

ಕೊರೊನಾ ಮುಕ್ತ ರಾಜ್ಯದತ್ತ ಕೇರಳ ಹೆಜ್ಜೆ, ಎಷ್ಟು ಕೇಸ್ ಸಕ್ರಿಯವಾಗಿದೆ?ಕೊರೊನಾ ಮುಕ್ತ ರಾಜ್ಯದತ್ತ ಕೇರಳ ಹೆಜ್ಜೆ, ಎಷ್ಟು ಕೇಸ್ ಸಕ್ರಿಯವಾಗಿದೆ?

ಸರ್ಕಾರದ ಮಾಹಿತಿಯಂತೆ ಇಂದು 30 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಪತ್ತೆಯಾದ ಕೊರೊನಾ ಕೇಸ್‌ಗಳ ಪೈಕಿ ಕೊಯೆಂಬೆಡು ಮಾರುಕಟ್ಟೆಯಲ್ಲಿ ಹೆಚ್ಚು ಕೇಸ್ ವರದಿಯಾಗಿದೆ.

Tamilnadu Records 527 Fresh Cases Today

ಅಂದ್ಹಾಗೆ, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3550ಕ್ಕೆ ಏರಿಕೆಯಾಗಿದೆ. 1409 ಜನರು ಸೋಂಕಿನಿಂದ ಗುಣಮುಖರಾಗಿದ್ದು, 2110 ಕೇಸ್‌ಗಳು ಸಕ್ರಿಯವಾಗಿದೆ. ಈವರೆಗೂ 31 ಜನರು ಕೊರೊನಾಗೆ ಬಲಿಯಾಗಿದ್ದಾರೆ.

ಇನ್ನು ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2573 ಪ್ರಕರಣಗಳು ದಾಖಲಾಗಿದೆ. 83 ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 42836ಕ್ಕೆ ಏರಿಕೆಯಾಗಿದ್ದು, 11762 ಜನರು ಗುಣಮುಖರಾಗಿದ್ದಾರೆ. 1389 ಜನರು ಮೃತಪಟ್ಟಿದ್ದಾರೆ.

English summary
Tamil Nadu Records 527 Fresh Cases Today, In Its Biggest Jump till Date. taking the total number of cases in the state to 3,550.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X