ತಮಿಳುನಾಡಿನಲ್ಲಿ 18-44 ವರ್ಷದವರಿಗೆ ಕೊರೊನಾ ಲಸಿಕೆ ಉಚಿತ
ಚೆನ್ನೈ, ಮೇ 20: ತಮಿಳುನಾಡಿನಲ್ಲಿ 18-44 ವರ್ಷ ವಯಸ್ಸಿನವರಿಗೆ ಉಚಿತವಾಗಿ ಕೊರೊನಾ ಲಸಿಕೆ ವಿತರಣೆ ಮಾಡುವುದಾಗಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಿಳಿಸಿದ್ದಾರೆ.
ಆದ್ಯತೆ ಮೇರೆಗೆ ಕೋವಿಡ್ ವಾರಿಯರ್‌ಗಳಿಗೆ ಮತ್ತು ಆಯ್ದ ಗುಂಪುಗಳಿಗೆ ಮಾತ್ರ ಲಸಿಕೆ ವಿತರಣೆ ಮಾಡಲು ತೀರ್ಮಾನಿಸಲಾಗಿದೆ.ತಿರುಪುರದಲ್ಲಿ 18-44 ವರ್ಷದವರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಸ್ಟಾಲಿನ್ ಗುರುವಾರ ಉದ್ಘಾಟಿಸಿದರು.
18ಕ್ಕಿಂತ ಹೆಚ್ಚಿನ ವಯಸ್ಸಿನವರು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ, ಈ ಗುಂಪಿಗೆ ಲಸಿಕೆ ಹಾಕುವಾಗ ಮೊದಲು ಹೆಚ್ಚಿನ ಅಪಾಯದ ವರ್ಗದ ಜನರು ಮತ್ತು ಕಾರ್ಮಿಕರಿಗೆ ಲಸಿಕೆ ಹಾಕಲು ಸ್ಟಾಲಿನ್ ಆದೇಶಿಸಿದ್ದಾರೆ.

45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡುವ ವ್ಯವಸ್ಥೆಯಲ್ಲಿ 3.5 ಕೋಟಿ ಲಸಿಕೆ ಪ್ರಮಾಣವನ್ನು ಜಾಗತಿಕ ಬಿಡ್‌ಗಳ ಮೂಲಕ ಮತ್ತು 1.5 ಕೋಟಿ ರೂ,ಗಳನ್ನು ಸಂಗ್ರಹಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
18-44 ವಯೋಮಾನದ ಜನರಿಗೆ ಲಸಿಕೆ ಹಾಕುವಿಕೆಯನ್ನು ಎಲ್ಲಾ ರಾಜ್ಯ ಸರ್ಕಾರಗಳು ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.ಲಸಿಕೆ ಎಂಬುದು ಸಾಂಕ್ರಾಮಿಕ ರೋಗವನ್ನು ಗೆಲ್ಲುವ ದೊಡ್ಡ ಅಸ್ತ್ರವಾಗಿದೆ, ತಮಿಳುನಾಡಿನಲ್ಲಿ ಎಲ್ಲಾ ಜನರಿಗೆ ಲಸಿಕೆ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ ಮತ್ತು ಅದೇ ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications