ತಮಿಳುನಾಡು ಶಾಸಕರಿಗೆ ಶೇ 100 ಸಂಬಳ ಏರಿಕೆ
ಚೆನ್ನೈ, ಜುಲೈ 19: ತಮಿಳುನಾಡಿನ ಶಾಸಕರಿಗೆ ಶೇ100ರಷ್ಟು ಸಂಬಳ ಏರಿಕೆಯಾಗಿದೆ. ಜನಪ್ರತಿನಿಧಿಗಳ ಸಂಬಳವನ್ನು ಹೆಚ್ಚಳ ಮಾಡಿ ಪಳನಿಸ್ವಾಮಿ ಸರ್ಕಾರ ಆದೇಶ ಹೊರಡಿಸಿದೆ.
ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನೇಕ ತಿಂಗಳುಗಳಿಂದ ತಮಿಳುನಾಡಿನ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಇಂದು ಕೂಡಾ ಅರೆ ಬೆತ್ತಲೆ ಪ್ರತಿಭಟನೆ ಕೂಡ ಮಾಡಿದ್ದಾರೆ. ಆದರೆ, ಇತ್ತ ಚೆನ್ನೈ ನನಗೆಷ್ಟು ನಿನಗೆಷ್ಟು ಎಂದು ಸಂಬಳ ಏರಿಕೆ ಬಗ್ಗೆ ತಮಿಳುನಾಡಿನ ಶಾಸಕರು ಚರ್ಚೆ ನಡೆಸುತ್ತಿರುವುದು ದುರಂತವೇ ಸರಿ.

ಸಂಬಳ ಏರಿಕೆ ಎಷ್ಟು?: 55 ಸಾವಿರವಿದ್ದ ಸಂಬಳ 1 ಲಕ್ಷದ 10 ಸಾವಿರವಾಗಿದೆ.ಮೊದಲು ರೈತರ ಸಮಸ್ಯೆ ಆಲಿಸಿ ನಂತ್ರ ನಿಮ್ಮ ಸಂಬಳ ಹೆಚ್ಚಳ ಮಾಡಿಕೊಳ್ಳಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಶಾಸಕರ ನಿವೃತ್ತಿ ಪಿಂಚಣಿ ಮೊತ್ತ 12,000 ರು ನಿಂದ 20,000 ರುಗೆ ಏರಿಸಲಾಗಿದೆ. ಶಾಸಕರ ಕ್ಷೇತ್ರ ನಿಧಿ ಮೊತ್ತವನ್ನು 2 ಕೋಟಿ ರು ನಿಂದ 2.5 ಕೋಟಿ ರು ಗೇರಿಸಲಾಗಿದೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಬುಧವಾರದಂದು ಅಸೆಂಬ್ಲಿಯಲ್ಲಿ ಘೋಷಿಸಿದರು.












Click it and Unblock the Notifications