• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Quarantineನಿಂದ ಬೆತ್ತಲೆ ಓಟ, ವೃದ್ಧೆಗೆ ಕಚ್ಚಿದ ಯುವಕ!

|

ಚೆನ್ನೈ, ಮಾರ್ಚ್ 29 : ಮನೆಯಲ್ಲಿ quarantine ನಲ್ಲಿದ್ದ ಯುವಕ ಏಕಾಏಕಿ ಬೆತ್ತಲೆಯಾಗಿ ಓಡಿ ಹೋದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಶ್ರೀಲಂಕಾದಿಂದ ಬಂದಿದ್ದ ಯುವಕನಿಗೆ quarantineಗೆ ಸೂಚಿಸಲಾಗಿತ್ತು. ಶನಿವಾರ ಸಂಜೆ ಬೆತ್ತಲಾಗಿ ಮನೆಯಿಂದ ಹೊರ ಬಂದ ಆತ, ಪಕ್ಕದ ಮನೆಯಲ್ಲಿದ್ದ 80 ವರ್ಷದ ವೃದ್ಧೆಗೆ ಕಚ್ಚಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ಕೊರೊನಾ: quarantineಗೆ 17 ಹೋಟೆಲ್‌ ಗುರುತಿಸಿದ ಬಿಬಿಎಂಪಿ

ಕುತ್ತಿಗೆಗೆ ಗಾಯವಾಗಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಬಟ್ಟೆ ವ್ಯಾಪಾರ ಮಾಡುತ್ತಿದ್ದ ಯುವಕ ಕೆಲವು ದಿನಗಳ ಹಿಂದೆ ಶ್ರೀಲಂಕಾದಿಂದ ವಾಪಸ್ ಆಗಿದ್ದ. ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!

ಶ್ರೀಲಂಕಾದಿಂದ ಯುವಕ ವಾಪಸ್ ಆದ ಬಗ್ಗೆ ಮಾಹಿತಿ ಪಡೆದಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು ಆತನ ಮನೆಗೆ ಭೇಟಿ ನೀಡಿದ್ದರು. ನಿಯಮಗಳ ಪ್ರಕಾರ quarantine ಗೆ ಸೂಚನೆ ನೀಡಿದ್ದರು. ಆದರೆ, ಆತ ಓಡಿ ಹೋಗಿದ್ದೇಕೆ? ಎಂಬುದು ಇನ್ನು ತಿಳಿದುಬಂದಿಲ್ಲ.

ಈ ಕೊರೊನಾ ವೆಬ್ ತಾಣಗಳು ಫೇಕ್ ಎಂದ ಸೈಬರ್ ಕ್ರೈಂ ಸೆಲ್

ಯುವಕ ಮನೆಯಿಂದ ಹೋಗ ಹೋಗುತ್ತಿದ್ದಂತೆ ಆತನ ತಂದೆ ಹಿಡಿಯಲು ಪ್ರಯತ್ನ ನಡೆಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಬೆತ್ತಲೆಯಾಗಿ ರಸ್ತೆಯಲ್ಲಿ ಓಡಿದ ಆತ, ವೃದ್ಧೆಗೆ ಕಚ್ಚಿದ್ದಾನೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಾರೆ.

ತಮಿಳುನಾಡಿನಲ್ಲಿ ಇದುವರೆಗೂ 42 ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಬ್ಬರು ಮೃತಪಟ್ಟಿದ್ದಾರೆ. ಲಾಕ್ ಡೌನ್ ಜಾರಿಗೆ ತರಲಾಗಿದ್ದು, ಅಕ್ಕ-ಪಕ್ಕದ ರಾಜ್ಯಗಳ ಗಡಿಗಳನ್ನು ಬಂದ್ ಮಾಡಲಾಗಿದೆ.

English summary
A young man under home quarantine for coronavirus in Tamil Nadu ran out of his house and fatally bit a 80-year old woman. He return from Sri Lanka recently and advised for home quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X