ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನ ಈ ರೈಲು ನಿಲ್ದಾಣದ ವಿಶ್ವ ದಾಖಲೆ ತಪ್ಪಿದ್ದು ಒಂದಕ್ಷರದಲ್ಲಿ

|
Google Oneindia Kannada News

ಚೆನ್ನೈ, ಏಪ್ರಿಲ್ 14: ಪುರಚ್ಚಿ ತಲೈವರ್ ಡಾ.ಎಂ.ಜಿ.ರಾಮಚಂದ್ರನ್ ಸೆಂಟ್ರಲ್ ರೈಲ್ವೆ ಸ್ಟೇಷನ್ ಎಂಬುದು ತಮಿಳುನಾಡಿನಲ್ಲಿನ ನಿಲ್ದಾಣದ ಹೆಸರು. ಇಂಗ್ಲಿಷ್ ನಲ್ಲಿ ಇದನ್ನು ಬರೆದರೆ 57 ಅಕ್ಷರಗಳಾಗುತ್ತವೆ. ವಿಶ್ವ ದಾಖಲೆಯನ್ನು ಸರಿಗಟ್ಟುವುದಕ್ಕೆ ಒಂದಕ್ಷರ ಮಾತ್ರ ಕಡಿಮೆ ಬಿದ್ದು, ಅತಿ ಉದ್ದದ ಹೆಸರಲ್ಲಿ ಎರಡನೇ ಸ್ಥಾನದಲ್ಲಿ ನಿಂತಿದೆ.

'Llanfairpwllgwyngyllgogerychwyrndrobwllllantysiliogogogoch' ವೇಲ್ಸ್ ನಲ್ಲಿರುವ ರೈಲು ನಿಲ್ದಾಣದ ಹೆಸರು . ಇಂಗ್ಲಿಷ್ ಅಕ್ಷರಗಳನ್ನೆಲ್ಲ ಒಟ್ಟು ಮಾಡಿದರೆ 58 ಆಗುತ್ತದೆ. ಆ ಮೂಲಕ ವಿಶ್ವದಾಖಲೆ ಬರೆದಿದೆ. ಅದಕ್ಕೂ ಮುನ್ನ ವಿಶ್ವ ದಾಖಲೆಯ ಶ್ರೇಯ ಹೊಂದಿದ್ದು ಆಂಧ್ರಪ್ರದೇಶ. ಅಲ್ಲಿ ವೆಂಕಟನರಸಿಂಹರಾಜುವಾರಿಪೇಟ ರೈಲು ನಿಲ್ದಾಣದ ಹೆಸರಲ್ಲಿ ಇತ್ತು.

ಚೆನ್ನೈ ರೈಲ್ವೆ ನಿಲ್ದಾಣಕ್ಕೆ ಎಂಜಿಆರ್ ಹೆಸರು: ಮೋದಿಚೆನ್ನೈ ರೈಲ್ವೆ ನಿಲ್ದಾಣಕ್ಕೆ ಎಂಜಿಆರ್ ಹೆಸರು: ಮೋದಿ

ಇದೀಗ ಪುರಚ್ಚಿ ತಲೈವರ್ ಡಾ.ಎಂ.ಜಿ.ರಾಮಚಂದ್ರನ್ ಸೆಂಟ್ರಲ್ ರೈಲ್ವೆ ಸ್ಟೇಷನ್ ಅಥವಾ ಬಹುತೇಕರು ಕರೆಯುವಂತೆ ಚೆನ್ನೈ ಸೆಂಟ್ರಲ್ ಹೆಸರಿನಲ್ಲಿದೆ. ಇದೇ ತಿಂಗಳ ಐದನೇ ತಾರೀಕಿನಂದ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ ಹೆಸರು ಮರುನಾಮಕರಣ ಮಾಡಲಾಯಿತು. ಎರಡು ದಶಕದ ಹಿಂದೆ ಮದ್ರಾಸ್ ಸೆಂಟ್ರಲ್ ಎನ್ನಲಾಗುತ್ತಿತ್ತು. ಐಆರ್ ಸಿಟಿಸಿ ವೆಬ್ ಸೈಟ್ ನಲ್ಲಿ ಎಮ್ ಎಎಸ್ ಎಂದು ತೋರಿಸುತ್ತದೆ.

Tamil Nadu loses the honour of having longest railway station name by 1 letter

ಸದ್ಯಕ್ಕೆ ದೇಶದ ಆತಿ ಉದ್ದದ ಹೆಸರುಳ್ಳ ಎರಡನೇ ರೈಲು ನಿಲ್ದಾಣ ಅಂದರೆ ಅದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಗರ ಅಥವಾ ಪ್ರಯಾಣಿಕರು ಇದನ್ನು ಬೆಂಗಳೂರು ನಿಲ್ದಾಣ ಆಂತಷ್ಟೇ ಕರೆಯುತ್ತಾರೆ. ರೈಲು ನಿಲ್ದಾಣಗಳ ಪೈಕಿ ಊರನೇ ಅತಿ ಉದ್ದದ ಹೆಸರೆಂದರೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್. ಅದರಲ್ಲಿ ಮೂವತ್ಮೂರು ಅಕ್ಷರಗಳಿವೆ.

ಚೆನ್ನೈ ಹಾಗೂ ಮುಂಬೈ ಎರಡೂ ರೈಲು ನಿಲ್ದಾಣಗಳಿಗೆ ಈ ವರೆಗೆ ಮೂರು ಸಲ ಹೆಸರು ಬದಲಿಸಲಾಗಿದೆ.

English summary
Puratchi Thalaivar Dr. M.G. Ramachandran Central Railway Station in Tamil Nadu, with 57 letters, missed the honour of having the longest railway station name by just an alphabet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X