Breaking; ಪೆಟ್ರೋಲ್, ಡೀಸೆಲ್ ಹೊರೆ ಇಳಿಸಿದ್ದೇವೆ ಎಂದ ತಮಿಳುನಾಡು
ಚೆನ್ನೈ, ಏಪ್ರಿಲ್ 28; ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೊರೆಯನ್ನು ಕಡಿಮೆ ಮಾಡಲು ತೆರಿಗೆಯನ್ನು ತಗ್ಗಿಸಲು ರಾಜ್ಯಗಳಿಗೆ ಮನವಿ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳ ಸಭೆಯಲ್ಲಿ ಹೇಳಿದ್ದರು.
ಬುಧವಾರ ಕೋವಿಡ್ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳ ಸಭೆ ಕರೆದಿದ್ದರು. ಸಭೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳ ಇಳಿಕೆ ಬಗ್ಗೆ ಮೋದಿ ಮಾತನಾಡಿದ್ದು, ಈ ಕುರಿತು ಚರ್ಚೆಗಳು ನಡೆಯುತ್ತಿವೆ.
ಗುರುವಾರ ತಮಿಳುನಾಡು ರಾಜ್ಯದ ಹಣಕಾಸು ಸಚಿವ ಪಳನಿವೇಲ್ ತ್ಯಾಗ ರಾಜನ್ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು. "ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರಕ್ಕೂ ಮೊದಲೇ 2021ರಲ್ಲಿಯೇ ಪೆಟ್ರೋಲ್ ಮೇಲಿನ ವ್ಯಾಟ್ ಕಡಿತಗೊಳಿಸಿದೆ" ಎಂದರು.

"ರಾಜ್ಯ ಸರ್ಕಾರದ ತೀರ್ಮಾನದಿಂದ ವಾರ್ಷಿಕ ಬೊಕ್ಕಸಕ್ಕೆ 1,160 ಕೋಟಿ ನಷ್ಟವಾಗುತ್ತಿದೆ. ವ್ಯಾಟ್ ಕಡಿತಗೊಳಿಸಿದ ಮೇಲೆ ಪೆಟ್ರೋಲ್ ದರದಲ್ಲಿ 3 ರೂ. ಇಳಿಕೆಯಾಗಿದೆ. ಇದರಿಂದಾಗಿ ರಾಜ್ಯದ ಜನರಿಗೆ ಅನುಕೂಲವಾಗಿದೆ" ಎಂದು ಸಚಿವ ಪಳನಿವೇಲ್ ತ್ಯಾಗ ರಾಜನ್ ಹೇಳಿದರು.
ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, "ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತ ಮಾಡಿದೆ ಮತ್ತು ತೆರಿಗೆಯನ್ನು ತಗ್ಗಿಸಲು ರಾಜ್ಯಗಳಿಗೆ ಮನವಿ ಮಾಡಿದೆ" ಎಂದು ಹೇಳಿದ್ದರು.
"ಕೆಲವು ರಾಜ್ಯಗಳು ತೆರಿಗೆಗಳನ್ನು ಕಡಿತಗೊಳಿಸಿದವು. ಆದರೆ ಕೆಲವು ರಾಜ್ಯಗಳು ಕಡಿತದ ಪ್ರಯೋಜನಗಳನ್ನು ಜನರಿಗೆ ವರ್ಗಾಯಿಸಲಿಲ್ಲ. ಇದರಿಂದ ರಾಜ್ಯದ ಜನತೆಗೆ ಅನ್ಯಾಯವಾಗುವುದಲ್ಲದೇ ನೆರೆಯ ರಾಜ್ಯಗಳಿಗೂ ತೊಂದರೆಯಾಗುತ್ತದೆ. ಕರ್ನಾಟಕ ಮತ್ತು ಗುಜರಾತ್‌ನಂತಹ ರಾಜ್ಯಗಳು ಆದಾಯ ನಷ್ಟದ ನಡುವೆಯೂ ಜನರ ಕಲ್ಯಾಣಕ್ಕಾಗಿ ತೆರಿಗೆ ಕಡಿತ ನಿರ್ಧಾರವನ್ನು ಕೈಗೊಂಡವು" ಎಂದು ತಿಳಿಸಿದ್ದರು.
"ಕೆಲವು ರಾಜ್ಯಗಳು ತೆರಿಗೆಯನ್ನು ಕಡಿಮೆ ಮಾಡದೆ ಆದಾಯಗಳಿಸುತ್ತಿವೆ. ಕಳೆದ ನವೆಂಬರ್‌ನಲ್ಲಿ ವ್ಯಾಟ್ ತೆರಿಗೆ ಕಡಿಮೆ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಜಾರ್ಖಂಡ್‌ನಂತಹ ಹಲವು ರಾಜ್ಯಗಳು ಕಾರಣಾಂತರಗಳಿಂದ ಕಡಿತ ಮಾಡಲಿಲ್ಲ" ಎಂದು ಹೇಳಿದ್ದರು.












Click it and Unblock the Notifications