Get Updates
Get notified of breaking news, exclusive insights, and must-see stories!

ಸಾಕು ನಾಯಿಗೆ ಸೀಮಂತ ಮಾಡಿದ ತಮಿಳುನಾಡಿನ ದಂಪತಿ

ನಾಯಿಯ ಹುಟ್ಟುಹಬ್ಬವನ್ನು ಆಚರಿಸುವುದು ಈಗ ಸಾಮಾನ್ಯ ವಿಷಯವಾಗಿದೆ. ವಿಶೇಷ ವೈದ್ಯರಿಂದ ಹಿಡಿದು ನಾಯಿಯ ಅಲಂಕಾರಗಳವರೆಗೆ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಿ. ಜೊತೆಗೆ ನಾಯಿಯೊಂದಿಗೆ ವಿಶೇಷ ದಿನವನ್ನು ಆಚರಿಸುವವರನ್ನೂ ಕಂಡಿರುತ್ತೀರಿ. ಅಷ್ಟೇ ಯಾಕೆ ನಾಯಿಯ ಪ್ರತಿಮೆಯನ್ನು ನಿರ್ಮಿಸಿ ನಿತ್ಯ ಪೂಜಿಸುವವರೂ ಇದ್ದಾರೆ. ಆದರೆ ನಾಯಿಯ ಸೀಮಂತ ಮಾಡಿರುವವರನ್ನು ನೀವು ಎಲ್ಲಾದರೂ ನೋಡಿದ್ದೀರಾ? ನೋಡಿರಲು ಸಾಧ್ಯವಿಲ್ಲ ಬಿಡಿ. ಯಾಕೆಂದ್ರೆ ಇದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸುದ್ದಿ.

ಪ್ರಾಣಿ ಪ್ರೇಮಿಗಳು ತಮ್ಮ ಸಾಕುಪ್ರಾಣಿಗಳನ್ನು ಕುಟುಂಬದ ಸದಸ್ಯರಂತೆಯೇ ನೋಡಿಕೊಳ್ಳುತ್ತಾರೆ. ಇದಕ್ಕೆ ಬಲವಾದ ಸಾಕ್ಷಿ ನೀಡುವ ದೃಶ್ಯವೊಂದು ವೈರಲ್ ಆಗಿದೆ. ನಾಯಿಗಳು ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಎಲ್ಲರಿಗೂ ತಿಳಿದಿದೆ. ಆದರೆ ತಮಿಳುನಾಡಿನ ಕುಟುಂಬವೊಂದು ತಮ್ಮ ಸಾಕು ನಾಯಿಗೆ ತಮ್ಮ ಮನೆಯ ಸದಸ್ಯನ ಸ್ಥಾನ ನೀಡಿದೆ. ಜೊತೆಗೆ ನಾಯಿಯ ಸೀಮಂತವನ್ನು ಅದ್ದೂರಿಯಾಗಿ ಮಾಡಿದೆ.

ತಮಿಳುನಾಡಿನ ಕುಟುಂಬವೊಂದು ಇತ್ತೀಚೆಗೆ ತಮ್ಮ ಗರ್ಭಿಣಿ ನಾಯಿಗೆ ಸೀಮಂತ ಸಮಾರಂಭವನ್ನು ಆಯೋಜಿಸಿತ್ತು. ಸಮಾರಂಭದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಈ ದೃಶ್ಯವನ್ನು ಕಂಡ ಪ್ರಾಣಿ ಪ್ರಿಯರು ಮನಸೋತಿದ್ದಾರೆ.

Tamil Nadu Family Organises Baby Shower For Pet Dog

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ಕುಟುಂಬ ಸದಸ್ಯರು ಎಲ್ಲಾ ಸಂಪ್ರದಾಯಗಳೊಂದಿಗೆ ನಾಯಿಯ ಸೀಮಂತ ಮಾಡುತ್ತಾರೆ. ದೃಶ್ಯದಲ್ಲಿ ನಾಯಿಗೆ ಹೂವಿನ ಹಾರವನ್ನು ಹಾಕಲಾಗಿದೆ. ಗರ್ಭಿಣಿಯರಿಗೆ ಹಿಂದೂ ಸಂಪ್ರದಾಯದ ಪ್ರಕಾರ ಮಾಡುವ ಸೀಮಂತ ಕಾರ್ಯವನ್ನು ಎಲ್ಲಾ ಪದ್ಧತಿಗಳ ಅನುಸಾರ ನಾಯಿಗೂ ಪೂಜಿಸಿ ಮಾಡಲಾಗಿದೆ.

ಸಂಪ್ರದಾಯದಂತೆ ನಾಯಿಗೆ ಹೊಸ ಬಟ್ಟೆ ತೊಡಿಸಿ, ಕುಟುಂಬದ ಮಹಿಳಾ ಸದಸ್ಯರು ನಾಯಿಗೆ ಗಾಜಿನ ಬಳೆಗಳನ್ನು ತೊಡಿಸಿದ್ದಾರೆ. ಪೂಜೆಗಾಗಿ ಸಿಹಿತಿಂಡಿಗಳು ಮತ್ತು ಹಣ್ಣುಗಳನ್ನು ಇರಿಸಿರುವುದು ದೃಶ್ಯಗಳಲ್ಲಿ ಕಾಣಿಸುತ್ತಿದೆ. ಈ ಸಂದರ್ಭಕ್ಕಾಗಿ ಐದು ವಿಧದ ಅನ್ನವನ್ನು ತಯಾರಿಸಲಾಗಿದೆ.

Tamil Nadu Family Organises Baby Shower For Pet Dog

ಕುಟುಂಬ ಸದಸ್ಯರು ನಾಯಿಯನ್ನು ದಬೂ ಎಂದು ಕರೆಯುತ್ತಿರುವುದನ್ನು ವಿಡಿಯೊದಲ್ಲಿ ಕೇಳಬಹುದು. ಪೂಜೆಯ ವೇಳೆ ನಾಯಿಗೆ ಕುಂಕುಮ, ಹೂವುಗಳನ್ನು ಹಾಕುವ ಮೂಲಕ ಆರತಿ ಬೆಳಗಿಸಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ಜನರು ಕುಟುಂಬವನ್ನು ಅಭಿನಂದಿಸಿದ್ದಾರೆ ಮತ್ತು ಇತರ ಕುಟುಂಬದ ಸದಸ್ಯರಂತೆ ತಮ್ಮ ನಾಯಿಯನ್ನು ಪರಿಗಣಿಸಿದ್ದಕ್ಕಾಗಿ ಪ್ರಶಂಸಿಸಿದ್ದಾರೆ.

ಒಬ್ಬ ಬಳಕೆದಾರರು ಬರೆದಿದ್ದಾರೆ, "ನಿಮ್ಮ ಗರ್ಭಿಣಿ ನಾಯಿಗಾಗಿ ಅದ್ಭುತ ಸಮಾರಂಭವನ್ನು ಹೊಂದಲು ನಿಮ್ಮೆಲ್ಲರಿಗೂ ತುಂಬಾ ಸಂತೋಷವಾಗಿದೆ. ನಿಮ್ಮ ಸಾಕುಪ್ರಾಣಿಗಳ ಬಗ್ಗೆ ತೋರಿದ ಮಹಾನ್ ದಯೆಗಾಗಿ ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ." "ದೇವರು ನಿಮ್ಮನ್ನು ಎಲ್ಲಾ ಸಮಯದಲ್ಲೂ ಆಶೀರ್ವದಿಸಲಿ! ಈ ನಾಯಿ ತುಂಬಾ ಅದೃಷ್ಟಶಾಲಿ" ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

Tamil Nadu Family Organises Baby Shower For Pet Dog

"ಎಂತಹ ಅದ್ಭುತ ಕುಟುಂಬ. ದೇವರು ಎಲ್ಲರನ್ನು ಆಶೀರ್ವದಿಸಲಿ" ಎಂದು ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+