ತಮಿಳುನಾಡು ಚುನಾವಣೆ; ಆಸ್ತಿ ವಿವರ ಹಂಚಿಕೊಂಡ ನಟಿ ಖುಷ್ಬೂ

ಚೆನ್ನೈ, ಮಾರ್ಚ್ 19: ತಮಿಳುನಾಡಿನ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲಿರುವ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭ ತಮ್ಮ ಆಸ್ತಿ ವಿವರ ನೀಡಿದ್ದು, ತಮ್ಮ ಬಳಿ ಒಟ್ಟು 22.55 ಕೋಟಿ ರೂ ಆಸ್ತಿ ಇರುವುದಾಗಿ ಘೋಷಣೆ ಮಾಡಿದ್ದಾರೆ.

ಖುಷ್ಬೂ ಅವರ ಬಳಿ 17.99 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದ್ದು, ಅವರ ಪತಿ ಸಿ. ಸುಂದರ್ ಅವರ ಹೆಸರಿನಲ್ಲಿ 16.57 ಕೋಟಿ ರೂ ಮೌಲ್ಯದ ಆಸ್ತಿ ಇರುವುದಾಗಿ ತಿಳಿಸಿದ್ದಾರೆ. ಖುಷ್ಬೂ ಅವರ ಬಳಿ 4.55 ಕೋಟಿ ರೂ ಹಾಗೂ ಸುಂದರ್ ಬಳಿ 1.83 ಕೋಟಿ ರೂ ಚರಾಸ್ತಿ ಇದ್ದು, ಖುಷ್ಬೂ ಅವರ ಹೆಸರಿನಲ್ಲಿ 3.45 ಕೋಟಿ ರೂಪಾಯಿ ಸಾಲ ಹಾಗೂ ಅವರ ಪತಿ ಹೆಸರಿನಲ್ಲಿ 5.55 ಕೋಟಿ ರೂ ಸಾಲವಿರುವುದಾಗಿ ಘೋಷಿಸಿದ್ದಾರೆ.

Tamil Nadu Election Khushbu Sundar Declares Assets Worth 22.55 Crore Rs

ತಮಿಳುನಾಡಿನ ಕೆಲವೆಡೆ ಫ್ಲ್ಯಾಟ್ ಹಾಗೂ ತೆಲಂಗಾಣ, ಊಟಿ ಸೇರಿದಂತೆ ಹಲವೆಡೆ ಜಮೀನು, ವಸತಿ ಸಮುಚ್ಚಯಗಳನ್ನು ಹೊಂದಿರುವುದಾಗಿ ದಾಖಲೆ ನೀಡಿದ್ದಾರೆ.

ಡಿಎಂಕೆ ಪಕ್ಷದಿಂದ ರಾಜಕೀಯಕ್ಕೆ ಕಾಲಿಟ್ಟಿದ್ದ ಖುಷ್ಬೂ 2014ರಲ್ಲಿ ಕಾಂಗ್ರೆಸ್ ಸೇರಿಕೊಂಡಿದ್ದರು. 2020 ಅಕ್ಟೋಬರ್ ತಿಂಗಳಿನಲ್ಲಿ ಬಿಜೆಪಿ ಸೇರಿ, ಇದೀಗ ಡಿಎಂಕೆ ಅಭ್ಯರ್ಥಿ ಡಾ. ಎಳಿಲನ್ ವಿರುದ್ಧ ಕಣದಲ್ಲಿದ್ದಾರೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಬಿಜೆಪಿ ಜೊತೆ ಮೈತ್ರಿಯಲ್ಲಿದೆ.

ತಮಿಳುನಾಡಿನಲ್ಲಿ ಏಪ್ರಿಲ್ 6ರಂದು 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 2ಕ್ಕೆ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+