ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CUET 2022: ವಿವಿಗಳಿಗೆ ಸಿಇಟಿ ವಿರೋಧಿಸಿ ತಮಿಳುನಾಡಿನಲ್ಲಿ ನಿರ್ಣಯ ಅಂಗೀಕಾರ

|
Google Oneindia Kannada News

ಚೆನ್ನೈ, ಏಪ್ರಿಲ್‌ 13: ಕೇಂದ್ರ ಸರಕಾರ ಪ್ರಸ್ತಾಪಿಸಿರುವ ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಗಳಿಗೆ (ಸಿಯುಇಟಿ) ವಿರೋಧ ವ್ಯಕ್ತಪಡಿಸಿ ತಮಿಳುನಾಡು ಸರ್ಕಾರವು
ಮಂಡಿಸಿದ್ದ ನಿರ್ಣಯವನ್ನು ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.

ತಮಿಳುನಾಡಿನ ವಿಧಾನಸಭೆಯಲ್ಲಿ ಸರ್ವ ಪಕ್ಷಗಳ ಸರ್ವಾನುಮತದಿಂದ ಬೆಂಬಲ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಕೇಂದ್ರ ಸರ್ಕಾರವು ಸಿಯುಇಟಿ ನಡೆಸುವ ಪ್ರಸ್ತಾಪವನ್ನು ಈ ಹಿಂದೆ ಖಂಡಿಸಿದ್ದರು ಹಾಗೂ ತಮ್ಮ ವಾದವನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದರು.

ಸಿಯುಇಟಿ ಪರೀಕ್ಷೆಗಳು ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬಿಳಲಿದೆ, ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಹಾಳು ಗೆಡುವಲಿದೆ. ಅಲ್ಲದೆ, ವಿಧ್ಯಾರ್ಥಿಗಳಿಗೆ ಮತಷ್ಟು ಆತಂಕವನ್ನು ಉಂಟು ಮಾಡಲಿದೆ ಎಂದರು.

Tamil Nadu Assembly Passes Resolution Urging Centre to Withdraw CUET

ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದುಕೊಳ್ಳುವ ವಿಧ್ಯಾರ್ಥಿಗಳು ಪಠ್ಯಕ್ರಮವು ಹಾಗೂ ನ್ಯಾಷನಲ್‌ ಕೌನ್ಸಿಲ್‌ ಆಪ್‌ ಎಜುಕೇಶನಲ್‌ ರಿಸರ್ಚ್‌ ಅಂಡ್‌ ಟ್ರೈನಿಂಗ್ (ಎನ್‌ಸಿಇಆರ್‌ಟಿ) ಆಧಿರಿಸಿದ ಪರೀಕ್ಷೆಗಳು ವಿದ್ಯಾರ್ಥಿಗಳು ಸಮಾನವಾಗಿ ಓದುವ ಅವಕಾಶವನ್ನು ವಂಚಿಸುವ ಸಾಧ್ಯತೆ ಇದೆ ಎಂದು ನಾವು ಭಾವಿಸುತ್ತೇವೆ ಎಂದರು.

ವಿವಿಧ ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಕಲಿಯುವ ರಾಜ್ಯದ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿರುವುದು ಕೂಡ ದೊಡ್ಡ ಸಮಸ್ಯೆಯನ್ನು ಸೃಷ್ಟಿ ಮಾಡಲಿದೆ ಎಂದು ವಿಧಾನಸಭೆಯಲ್ಲಿ ಸಿಎಂ ಸ್ಟಾಲಿನ್ ತಿಳಿಸಿದರು.

English summary
Tamil Nadu Assembly Passes resolution urging the Centre to withdraw the proposal to conduct Common University Entrance Test (CUET). Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X