ದೆವ್ವ, ಭೂತದ ಸಿನ್ಮಾ ನೋಡಿ ಪ್ರಾಣ ಬಿಟ್ಟ ವೃದ್ಧ

Posted By:
Subscribe to Oneindia Kannada

ಚೆನ್ನೈ, ಜೂನ್ 17: ಕಾಂಜುರಿಂಗ್ 2 ಹರಾರ್ ಚಿತ್ರಗಳಿಗೆ ಹೊಸ ಭಾಷ್ಯ ಬರೆದ ತಣ್ಣನೆಯ ಕ್ರೌರ್ಯದ ಥ್ರಿಲ್ಲಿಂಗ್ ಚಿತ್ರ. ಈ ಚಿತ್ರಕ್ಕೆ ಭಾರತದಲ್ಲಿ ಅಭಿಮಾನಿಗಳೇನು ಕಡಿಮೆ ಇಲ್ಲ. ಆದರೆ, ತಮಿಳುನಾಡಿನ ತಿರುನಲ್ವೇಲಿಯಲ್ಲಿ ಗುರುವಾರ ರಾತ್ರಿ ಚಿತ್ರಮಂದಿರದಲ್ಲಿ ನಡೆದಿದ್ದು ಮಾತ್ರ ದುರಂತ.

ಹಾಲಿವುಡ್ ಹಾರರ್ ಶ್ರೇಣಿಯಲ್ಲಿ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಕಾಂಜುರಿಂಗ್ ಚಿತ್ರ ಸರಣಿಯ ಎರಡನೇ ಚಿತ್ರವನ್ನು ನೋಡಲು ಹೋಗಿದ್ದ 65 ವರ್ಷ ವಯಸ್ಸಿನ ವೃದ್ಧರೊಬ್ಬರು ಚಿತ್ರವನ್ನು ವೀಕ್ಷಿಸುವಾಗಲೇ ಭಯಕಂಪಿತರಾಗಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.[ಹಾಲಿವುಡ್ಡಿನ ಟಾಪ್ 10 ಹಾರರ್ ಚಿತ್ರಗಳು]

Tamil Nadu: 65-year-old man dies watching 'The Conjuring 2' in theatre!

ಆಂಧ್ರಪ್ರದೇಶ ಮೂಲದ ಇಬ್ಬರು ವ್ಯಕ್ತಿಗಳು ಈ ಚಿತ್ರವನ್ನು ನೋಡಲು ಹೋಗಿದ್ದರು. ಶ್ರೀ ಬಾಲಸುಬ್ರಮಣಿಯರ್ ಸಿನಿಮಾಸ್ ಚಿತ್ರಮಂದಿರದಲ್ಲಿ ನೈಟ್ ಶೋ ನೋಡುತ್ತಿದ್ದರು. ಚಿತ್ರದ ಕ್ಲೈಮ್ಯಾಕ್ಸ್ ಹಂತದಲ್ಲಿ ಒಬ್ಬ ವ್ಯಕ್ತಿ ಎದೆ ಹಿಡಿದುಕೊಂಡು ನೋವಿನಿಂದ ಚೀರಿ, ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.[ದೆವ್ವದ ಕತೆಗಳು ಎ೦ದರೇ ಸಾಕು ಕಿವಿ ನೆಟ್ಟಗೆ!]

ತಕ್ಷಣವೇ ಅವರನ್ನು ಹಳೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೃದ್ಧನನ್ನು ಪರೀಕ್ಷಿಸಿದ ವೈದ್ಯರು, ಆಸ್ಪತ್ರೆಗೆ ಬರುವಷ್ಟರಲ್ಲೇ ಪ್ರಾಣಪಕ್ಷಿ ಹಾರಿ ಹೋಗಿದೆ ಎಂದಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಮೃತನ ಜೊತೆಗಿದ್ದವನಿಗೆ ವೈದ್ಯರು ಸೂಚಿಸಿದ್ದಾರೆ. [ಸಿನಿಮಾದವ್ರಿಗೆ ದೇವರಿಗಿಂತ ದೆವ್ವಾನೇ ಬಲು ಇಷ್ಟ]

ಆದರೆ, ಶವವನ್ನು ಅಲ್ಲೇ ಬಿಟ್ಟ ಆ ವ್ಯಕ್ತಿ ಪರಾರಿಯಾಗಿದಾರೆ. ಮೃತ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರಗಳು ಸಿಕ್ಕಿಲ್ಲ ಹಾಗೂ ಜತೆಗಿದ್ದ ವ್ಯಕ್ತಿಯ ಸುಳಿವು ಸಿಕ್ಕಿಲ್ಲ, ತಿರುನಲ್ವೇಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a shocking incident, a 65-year-old man died while watching the recently released Hollywood horror movie -- The Conjuring 2, at a cinema theatre in Tiruvannamalai on Thursday, June 16 night.
Please Wait while comments are loading...