ಗಂಡ ಸುಂದರಾಂಗನಲ್ಲ ಅಂತ ಕೊಲೆಯೇ ಮಾಡಿಬಿಟ್ಟ ನವವಿವಾಹಿತೆ!

By: ಅನುಶಾ ರವಿ
Subscribe to Oneindia Kannada

ಚೆನ್ನೈ, ಏಪ್ರಿಲ್ 11: ನೋಡಲು ಅಂದವಾಗಿಲ್ಲ ಅಂತ ರುಬ್ಬುವ ಕಲ್ಲು ಹೊತ್ತು ಹಾಕಿ ನವವಿವಾಹಿತೆಯೊಬ್ಬಳು ಗಂಡನನ್ನೇ ಕೊಲೆ ಮಾಡಿದ್ದಾಳೆ.

22 ವರ್ಷದ ಯುವತಿಯೊಬ್ಬಳು ವಾರದ ಹಿಂದೆ ತಮಿಳುನಾಡಿನ ಕಡಲೂರಿನ ಯುವಕನನ್ನು ಮದುವೆಯಾಗಿದ್ದಳು. ಆದರೆ ಆತ ಸುಂದರವಾಗಿಲ್ಲ ಅಂತ ತಲೆ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.[ಸ್ಟೇಝಿಲ್ಲಾ ಸ್ಥಾಪಕ ಯೋಗೇಂದ್ರ ವಸುಪಾಲ್ ಗೆ ಜಾಮೀನು]

Tamil Nadu: 22-year-old murders husband for 'not being handsome enough'

ಮಹಿಳೆಗೆ ಆಕೆಯ ಸಂಬಂಧಿಕರು ಪದೇ ಪದೇ ನಿನ್ನ ಗಂಡ ಚೆನ್ನಾಗಿಲ್ಲ. ನಿನಗೆ ಸರಿಯಾದ ಜೋಡಿಯಲ್ಲ ಎಂದು ಹೀಯಾಳಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಯವತಿ ತನ್ನ ಗಂಡನನ್ನೇ ಕೊಲೆ ಮಾಡಿದ್ದಾಳೆ.

ಆಕೆಯ ಗಂಡ ಮರದ ಕೆತ್ತನೆ ಮಾಡುವ ಉದ್ಯೋಗ ಮಾಡುತ್ತಿದ್ದ. ಕೊಲೆ ಮಾಡಿದ ನಂತರ ಆಕೆ ಮನೆಯಿಂದ ಅಳುತ್ತಾ ಹೊರ ಬಂದು ತನ್ನ ಗಂಡನನ್ನು ಯಾರೋ ಕೊಲೆ ಮಾಡಿದರು ಎಂದು ಹೇಳಿ ಮುಗ್ಧಳಂತೆ ನಟಿಸಿದ್ದಾಳೆ.[ಶರತ್ ಕುಮಾರ್ ಆಯ್ತು, ಅವರ ಪತ್ನಿ ರಾಧಿಕಾ ಕಚೇರಿ ಮೇಲೆ ಐಟಿ ದಾಳಿ]

ಆದರೆ ಸ್ಥಳಕ್ಕೆ ಬಂದ ಪೊಲೀಸರು ಅನುಮಾನದ ಮೇಲೆ ವಿಚಾರಣೆ ನಡೆಸಿ ಮಹೀಲೆಯನ್ನು ಬಂಧಿಸಿದ್ದಾರೆ. ನಂತರ ಸ್ಥಳೀಯ ನ್ಯಾಯಾಲಯಕ್ಕೆ ಮಹಿಳೆಯನ್ನು ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ನವವಿವಾಹಿತೆಯನ್ನು ಒಪ್ಪಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Unhappy that her husband was not handsome, a newly married woman smashed his head with a grinding stone killing him. The 22-year-old, the police said, murdered her husband on Monday night in Cuddalore of Tamil Nadu and later attempted to shift the blame by claiming innocence.
Please Wait while comments are loading...