ಸಾಮಾಜಿಕ ತಾಣದಲ್ಲಿ 'ರೆಮೋ' ಹಾಡುಗಳದ್ದೇ ಸದ್ದು

By: ಒನ್ ಇಂಡಿಯಾ ಸಿಬ್ಬಂದಿ
Subscribe to Oneindia Kannada

ಚೆನ್ನೈ, ಸೆಪ್ಟೆಂಬರ್, 05: ತಮಿಳು ಸಿನಿ ಅಂಗಳದಲ್ಲಿ ಭಾರಿ ಸದ್ದು-ಸುದ್ದಿ ಮಾಡುತ್ತಿರುವ ಶಿವಕಾರ್ತಿಕೇಯನ್ ಮತ್ತು ಕೀರ್ತಿ ಸುರೇಶ್ ಅಭಿನಯದ 'ರೆಮೋ' ಚಿತ್ರದ ಆಡಿಯೋ ನಿಮ್ಮೆಲ್ಲರಿಗೆ ಈಗ ಲಭ್ಯ.

ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್ 'ರೆಮೋ' ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದಾರೆ.[ರೆಮೋ ಸಿನಿಮಾದ ಹಕ್ಕು ಪಡೆದ ದೀಪಕ್]

ಕೆಲವೇ ಗಂಟೆಗಳ ಹಿಂದೆ ಟ್ವೀಟ್ ಮಾಡುವ ಮೂಲಕ ಎ.ಆರ್.ರೆಹಮಾನ್ 'ರೆಮೋ' ಆಲ್ಬಂ ನ ಹೊರತಂದಿದ್ದಾರೆ. ತಮ್ಮ ಚೊಚ್ಚಲ ನಿರ್ಮಾಣದ ಚಿತ್ರ 'ರೆಮೋ' ಆಡಿಯೋ ಬಿಡುಗಡೆ ಮಾಡಿರುವುದಕ್ಕೆ ಎ.ಆರ್.ರೆಹಮಾನ್ ರವರಿಗೆ ನಿರ್ಮಾಪಕ ಆರ್.ಡಿ.ರಾಜಾ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

remo

ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ 'ರೆಮೋ' ಹಾಡುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. 'ರೆಮೋ' ಚಿತ್ರದ ಪ್ರಚಾರಾರ್ಥವಾಗಿ ಈಗಾಗಲೇ ಬಿಡುಗಡೆ ಆಗಿರುವ 'ಸಿರಿಕ್ಕಾದೆ' ವಿಡಿಯೋ ಹಿಟ್ ಆಗಿದೆ. ಹೀಗಾಗಿ, 'ರೆಮೋ' ಆಲ್ಬಂಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ.[ರಜನಿ ಸೋದರಳಿಯನ ಸಾಂಗ್ ಯೂಟ್ಯೂಬಿನಲ್ಲಿ ರಿಲೀಸ್]

ಅಕ್ಟೋಬರ್ 7 ರಂದು, 3000 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ 'ರೆಮೋ' ತೆರೆ ಕಾಣಲಿದೆ. ಭಾಗ್ಯರಾಜ್ ಕಣ್ಣನ್ ಆಕ್ಷನ್-ಕಟ್ ಹೇಳಿರುವ 'ರೆಮೋ' ಚಿತ್ರಕ್ಕೆ, 24AM ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಆರ್.ಡಿ.ರಾಜಾ ಬಂಡವಾಳ ಹೂಡಿದ್ದಾರೆ.

remo

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Popular Music Director AR Rahman has released Tamil Movie 'Remo' Audio through his twitter account today (September 5th). 'Remo' songs are composed by Anirudh Ravichandar.
Please Wait while comments are loading...