ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನುಮುಂದೆ ಸರ್ಕಾರಿ ಸೇವೆಗಳಿಗೆ ತಮಿಳು ಕಡ್ಡಾಯ: ತಮಿಳುನಾಡು ಸರ್ಕಾರ

|
Google Oneindia Kannada News

ಚೆನ್ನೈ, ಡಿಸೆಂಬರ್ 04:ತಮಿಳುನಾಡಿನಲ್ಲಿ ಸರ್ಕಾರಿ ಸೇವೆ ಸಲ್ಲಿಸುವುದಕ್ಕೆ ಇನ್ನು ಮುಂದೆ ತಮಿಳು ಭಾಷೆ ಕಡ್ಡಾಯವಾಗಿರಲಿದೆ.

ಈ ಕುರಿತು ಸರ್ಕಾರ ಮಹತ್ವದ ಸೂಚನೆ ನೀಡಿದೆ. ರಾಜ್ಯ ಸರ್ಕಾರ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇನ್ನು ಮುಂದೆ ತಮಿಳು ಭಾಷೆ ಕಡ್ಡಾಯವಾಗಿದ್ದು, ಈ ವಿಷಯದಲ್ಲಿ ಉತ್ತೀರ್ಣರಾದರೆ ಮಾತ್ರ ತಮಿಳುನಾಡು ಸರ್ಕಾರಿ ಸೇವೆ ಮತ್ತು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಕೆಲಸ ಪಡೆಯಬಹುದು ತಮಿಳು ಭಾಷೆಯ ಪೇಪರ್ ಕಡ್ಡಾಯವಾಗಿದ್ದು, ಅದರಲ್ಲಿ ಉತ್ತೀರ್ಣರಾದರೆ ಮಾತ್ರ ಸರ್ಕಾರಿ ಮತ್ತು ಪಿಎಸ್‌ಯು ಸೇವೆಗಳಿಗೆ ಪ್ರವೇಶಕ್ಕೆ ಅರ್ಹತೆ ಪಡೆಯಲಿದ್ದಾರೆ.

ಈ ನಿಯಮವು ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್ ಸೇರಿದಂತೆ ಎಲ್ಲಾ ರಾಜ್ಯ ಸರ್ಕಾರದ ನೇಮಕಾತಿ ಏಜೆನ್ಸಿಗಳಿಗೆ ಅನ್ವಯಿಸುತ್ತದೆ ಎಂದು ಸರ್ಕಾರ ತಿಳಿಸಿದೆ.

MK Stalin

ಡಿಸೆಂಬರ್ 1, 2021ರ ಸರ್ಕಾರಿ ಆದೇಶದ ಪ್ರಕಾರ, ರಾಜ್ಯ ಸರ್ಕಾರ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 10ನೇ ತರಗತಿಯ ಮಾನದಂಡಗಳಿಗೆ ಅನುಗುಣವಾಗಿ ತಮಿಳು ಭಾಷೆಯ ಪೇಪರ್ ಕಡ್ಡಾಯವಾಗಿದೆ ಮತ್ತು ಇದರಲ್ಲಿ ಕನಿಷ್ಠ ಶೇಕಡಾ 40 ರಷ್ಟು ಅಂಕ ಪಡೆಯಬೇಕು ಎಂದು ಹೇಳಿದೆ.

ಅರ್ಹತಾ ತಮಿಳು ಭಾಷೆಯ ಪತ್ರಿಕೆಯಲ್ಲಿ ಆಕಾಂಕ್ಷಿಗಳು ತೇರ್ಗಡೆಯಾಗದಿದ್ದರೆ, ಒಟ್ಟಾರೆ ಪರೀಕ್ಷೆಯ ಯೋಜನೆಯ ಭಾಗವಾಗಿರುವ ಇತರ ವಿಷಯಗಳ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಮಿಳು ಕೂಡಾ ದೇವರ ಭಾಷೆ ಎಂದ ಮದ್ರಾಸ್ ಹೈಕೋರ್ಟ್ತಮಿಳು ಕೂಡಾ ದೇವರ ಭಾಷೆ ಎಂದ ಮದ್ರಾಸ್ ಹೈಕೋರ್ಟ್

ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್, ತಮಿಳನ್ನು ದೇವರ ಭಾಷೆ ಎಂದು ಕೊಂಡಾಡಿತ್ತು. ದೇಶದಾದ್ಯಂತ ದೇವಾಲಯದ ಪವಿತ್ರೀಕರಣಗಳನ್ನು ಅಳ್ವಾರ್, ಅರುಣಗಿರಿನಾಥರ್ ಮತ್ತು ನಾಯನ್ಮಾರ್ ಗಳಂತಹ ಸಂತರು ರಚಿಸಿದ ತಮಿಳು ಸ್ತೋತ್ರಗಳನ್ನು ಪಠಿಸಬೇಕು ಎಂದು ಹೇಳಿತ್ತು. ತಮಿಳು ಪ್ರಪಂಚದ ಪ್ರಾಚೀನ ಭಾಷೆಗಳಲ್ಲಿ ಒಂದು ಮಾತ್ರವಲ್ಲದೇ ದೇವರ ಭಾಷೆ ಕೂಡ ಆಗಿದೆ.

ತಮಿಳು ಕವಿಗಳ ಜ್ಞಾನವನ್ನು ಪರೀಕ್ಷಿಸಲು ಶಿವನು ತಿರುವಿಲಯಾಡಲ್ ನುಡಿಸಿದನೆಂದು ನಂಬಲಾಗಿದೆ. ಮೇಲಿನವು ತಮಿಳು ಭಾಷೆ ದೇವರೊಂದಿಗೆ ಸಂಪರ್ಕ ಹೊಂದಿದೆ ಎಂದರ್ಥ. ಇದು ದೇವರೊಂದಿಗೆ ಸಂಪರ್ಕ ಹೊಂದಿದೆ, ಇದು ದೈವಭಕ್ತಿಯ ಭಾಷೆಯಾಗಿದೆ ಎಂದು ಪೀಠ ಹೇಳಿದೆ.

ತಮಿಳು ಭಾಷೆಯನ್ನು ಆಳ್ವಾರರು (ವೈಷ್ಣವ ಸಂತರು) ಅಭಿವೃದ್ಧಿಪಡಿಸಿದ್ದಾರೆ ಎಂಬ ಮಾತನ್ನು ನ್ಯಾಯಾಲಯವು ಉಲ್ಲೇಖಿಸಿ, ಅಂದಿನಿಂದ ಇಂದಿನವರೆಗೂ ತಿರುಪತಿಯ ಪವಿತ್ರ ತಿರುಮಲಾ ಬೆಟ್ಟಗಳಲ್ಲಿ, ತಮಿಳು ಹಿಂದೂ ಪಂಚಾಂಗ ಪ್ರಕಾರ ಮಾರ್ಗಳಿ (ಡಿಸೆಂಬರ್-ಜನವರಿ) ಯಲ್ಲಿ, ವೈಷ್ಣವ ಸಂತ ಸಂತ ಆಂಡಾಳ್ ಅವರಿಂದ ನಿರೂಪಿಸಲ್ಪಟ್ಟ "ತಿರುಪಾವೈ" ಮಾತ್ರ ದೇವರನ್ನು ಸ್ತುತಿಸಲು ಬಳಸಲಾಗುತ್ತದೆ.

Recommended Video

ಓಮಿಕ್ರಾನ್ ರೂಪಾಂತರ, ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. | Oneindia Kannada | Oneindia Kannada

ಭಗವತ್ ಗೀತೆಯ ಪ್ರಕಾರ, ಶ್ರೀಕೃಷ್ಣನು ತಾನು ಮಾರ್ಗಳಿ ತಿಂಗಳಲ್ಲಿ ತನ್ನನ್ನು ತಾನು ಪ್ರಕಟಪಡಿಸಿಕೊಳ್ಳುವುದಾಗಿ ಹೇಳಿದ್ದಾನೆ. ಹೀಗಾಗಿ, ತಿರುಮಲ ದೇವರು ತಾನು ಇಷ್ಟಪಡುವ ಮಾರ್ಗಳಿ ತಿಂಗಳಲ್ಲಿ ತಮಿಳು ತಿರುಪಾವೈ ಕೇಳಲು ಬಯಸುತ್ತಾನೆ. ವೈಷ್ಣವ ಧರ್ಮವು ತಮಿಳು ಸ್ತುತಿಗೀತೆಗಳಿಗೆ ಪ್ರಾಮುಖ್ಯತೆ ನೀಡಿದ್ದು, ಶೈವ ಧರ್ಮ ಅನುಯಾಯಿಗಳು ಕೂಡಾ ಇದೇ ವೇಳೆ ಭಕ್ತಿ ಪರಂಪರೆಯ ಫಲವಾಗಿ ಲಭ್ಯ ಸಾಹಿತ್, ವಿಶೇಷವಾಗಿ ಭಕ್ತಿ ಸಾಹಿತ್ಯವನ್ನು ಬಳಸಿ ತಮಿಳಿಗೆ ಅಷ್ಟೇ ಮಹತ್ವವನ್ನು ನೀಡಿದೆ.

English summary
All state government held competitive exams would from now on have a compulsory paper in the Tamil language and a pass in the subject is the basic qualifying norm for entry to Tamil Nadu government services and state-run public sector enterprises, the government announced on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X