ತಮಿಳು ನಟಿ ಪದ್ಮಜಾ ಆತ್ಮಹತ್ಯೆ: ಸಾವಿಗೆ ಕಾರಣ ಏನು?
ಚೆನ್ನೈ, ಮಾರ್ಚ್ 04: ಕೆಲ ತಮಿಳು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನಟಿ ಪದ್ಮಜಾ ಕಳೆದ ಭಾನುವಾರ ಚೆನ್ನೈನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
23 ವರ್ಷ ವಯಸ್ಸಿನ ಪಿ.ಪದ್ಮಜಾ ಚೆನ್ನೈನ ತಿರುವೊಟ್ಟಿಯೂರ್ ನಲ್ಲಿರುವ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಪದ್ಮಜಾ ಸಾವಿಗೆ ಕಾರಣ ಏನು ಎಂಬುದು ತಿಳಿದುಬಂದಿರಲಿಲ್ಲ. ಆದ್ರೀಗ ತನಿಖೆ ನಡೆಸಿದ ಪೊಲೀಸರು ಕೌಟುಂಬಿಕ ಮತ್ತು ಆರ್ಥಿಕ ಸಮಸ್ಯೆಯಿಂದ ಪದ್ಮಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಹೇಳಿದ್ದಾರೆ.
25 ವರ್ಷದ ಪವನ್ ಎಂಬುವರನ್ನು ಪದ್ಮಜಾ ಮದುವೆ ಆಗಿದ್ದರು. ಪವನ್-ಪದ್ಮಜಾ ದಂಪತಿಗೆ ಒಂದು ಮಗು ಕೂಡ ಇತ್ತು. ಆದ್ರೆ, ಗಂಡ-ಹೆಂಡತಿ ಮಧ್ಯೆ ಉತ್ತಮ ಬಾಂಧವ್ಯ ಇರಲಿಲ್ಲ. ಸದಾ ಜಗಳ ಆಡುತ್ತಿದ್ದರು. ಪತಿಯೊಂದಿಗೆ ಕಿತ್ತಾಡಿಕೊಂಡು ಪದ್ಮಜಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಹೋದರಿಗೆ ಫೋನ್ ಮಾಡಿ, ಸಾಲದ ಹೊರೆ ಇರುವ ಬಗ್ಗೆ ಪದ್ಮಜಾ ನೋವು ತೋಡಿಕೊಂಡಿದ್ದರು. ಜೊತೆಗೆ ಸಿನಿಮಾ ಮತ್ತು ಧಾರಾವಾಹಿಗಳಲ್ಲೂ ಅವಕಾಶ ಸಿಗದ ಕಾರಣ, ಮಾನಸಿಕ ಖಿನ್ನತೆಗೆ ಒಳಗಾಗಿ ಪದ್ಮಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.












Click it and Unblock the Notifications