ವೇಶ್ಯಾವಾಟಿಕೆ: ತಮಿಳು ನಟ ಸೇರಿ ಮೂವರ ಸೆರೆ

Tamil actor and pimp Kannada Prasad arrested by chennai police
ಚೆನ್ನೈ, ಮೇ 31: ತಮಿಳು ಚಿತ್ರೋದ್ಯಮಕ್ಕೆ ಹೊಂದಿಕೊಂಡಂತೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಯುವಕರ ತಂಡವೊಂದನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ವೇಶ್ಯಾವಾಟಿಕೆಯ ಸೂತ್ರಧಾರ ಕುಖ್ಯಾತ ಕನ್ನಡ ಪ್ರಸಾದ್ ಎಂಬ ವ್ಯಕ್ತಿಯ ಆಪ್ತ ಸೇರಿದಂತೆ ಮೂವರು ವಿಟರನ್ನು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಚೆನ್ನೈ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ವಿಟ ಪುರುಷರನ್ನು ತಮಿಳು ನಟರಾದ ರವಿಚಂದ್ರನ್ (26), ಮುರುಗನ್ (33) ಮರಿಯಪ್ಪನ್ (34) ಮತ್ತು ನೀಲಕಂಠ ರೆಡ್ಡಿ (25) ಎಂದು ಗುರುತಿಸಲಾಗಿದೆ. ಬಂಧಿತ ಮುರುಗನ್ ವೇಶ್ಯಾವಾಟಿಕೆಯ ಸೂತ್ರಧಾರ ಕುಖ್ಯಾತ ಕನ್ನಡ ಪ್ರಸಾದ್ ಬಳಿ ಕಾರು ಚಾಲಕನಾಗಿ 7 ವರ್ಷಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ.

ಕನ್ನಡ ಪ್ರಸಾದ್ ಮುಖಾಂತರ ಮುರುಗನ್ ಸಣ್ಣ ಪ್ರಮಾಣದ ನಟಿಯರ ಸ್ನೇಹ ಬೆಳೆಸುತ್ತಿದ್ದ. ಮುಂದೆ, ಮರಿಯಪ್ಪನನನ್ನು ಮುರುಗನ್ ಕೆಲಸಕ್ಕೆ ಸೇರಿಸಿಕೊಂಡಿದ್ದ. ಮರಿಯಪ್ಪನ್ ಕಾರುಗಳಲ್ಲಿ ಮಹಿಳೆಯರನ್ನು ಕರೆದೊಯ್ಯುತ್ತಿದ್ದ.

ಮತ್ತೊಬ್ಬ ಬಂಧಿತ ವಿಟಪುರುಷ ರವಿಚಂದ್ರನ್, ತಮಿಳು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ. ಮಾನ್ ಕರಾಟೆ ಮತ್ತು 49-0 ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾನೆ. ತಮಿಳು ಸಿನಿಮಾಗಳಲ್ಲಿ ಒಳ್ಳೆಯ ಪಾತ್ರಗಳನ್ನು ಕೊಡಿಸುವುದಾಗಿ ಆಮಿಷ ತೋರಿ ಯುವತಿಯರನ್ನು ಯಾಮಾರಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+