ಜಯಲಲಿತಾ ಮೇಡಂ 'ಸ್ಸಾರಿ' ಎಂದ ಶ್ರೀಲಂಕಾ
ಚೆನೈ, ಆ.1 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಮುಂದೆ ಶ್ರೀಲಂಕಾ ಸರ್ಕಾರ ಬೇಷರತ್ ಕ್ಷಮೆಯಾಚಿಸಿದೆ. ಶ್ರೀಲಂಕಾದ ರಕ್ಷಣಾ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಆಗಿರುವ ಪ್ರಮಾದದಿಂದ ಭಾರತದಲ್ಲಿ ಸಂಚಲನ ಉಂಟಾಗಿತ್ತು. ಲಂಕನ್ ವೆಬ್ ತಾಣದಲ್ಲಿ ಜಯಲಲಿತಾ ವಿರುದ್ಧದ ಅವಹೇಳನಕಾರಿ ಲೇಖನ ಪ್ರಕಟವಾಗಿತ್ತು.
ಶ್ರೀಲಂಕಾದ ರಕ್ಷಣಾ ಇಲಾಖೆ ವೆಬ್ ತಾಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಅವರ ಚಿತ್ರಗಳನ್ನು ಪ್ರಕಟಿಸಿ ಹೀಗೆ ಬರೆಯಲಾಗಿತ್ತು: 'ಈ ಹಿಂದೆ ಯುಪಿಎ ಸರ್ಕಾರಕ್ಕೆ ಬರೆಯುತ್ತಿದ್ದಂತೆ ಮೋದಿಗೂ ಪತ್ರ ಬರೆದರೆ ಏನು ನಡೆಯೋದಿಲ್ಲ. ಮೋದಿ ಮೇಲೆ ಪ್ರಭಾವ ಬೀರಬೇಕಾದ್ರೆ ಜಯಲಲಿತಾ ಪ್ರೇಮ ಪತ್ರದ ರೀತಿಯಲ್ಲಿ ಪತ್ರ ಬರಬೇಕಾಗುತ್ತೆ' ಎಂದಿತ್ತು.

ತಮಿಳುನಾಡಿನ ಮೀನುಗಾರರು ಪದೇಪದೇ ಶ್ರೀಲಂಕಾ ಸಾಗರ ಪ್ರದೇಶಕ್ಕೆ ಬಂದು ಅಕ್ರಮ ಮೀನುಗಾರಿಕೆ ನಡೆಸುತ್ತಾರೆ. ಈ ವೇಳೆ ಮೀನುಗಾರರನ್ನು ಬಂಧಿಸಿದರೆ, ಅವರನ್ನು ಬಿಡಿಸುವಂತೆ ಈ ಹಿಂದೆ ಯುಪಿಎ ಸರ್ಕಾರದ ಮೇಲೆ ಜಯಲಲಿತಾ ಒತ್ತಡ ಹೇರುತ್ತಿದ್ದರು.
ಆದರೆ ಈಗ ಮೋದಿ ಸರ್ಕಾರ ಬಂದಿದ್ದು, ಇಂತಹ ಪತ್ರಗಳಿಂದ ಏನೂ ನಡೆಯೋದಿಲ್ಲ. ಈಗ ಮೀನುಗಾರರನ್ನು ಬಿಡಿಸಬೇಕಾದರೆ ಮೋದಿ ಅವರಿಗೆ ಲವ್ ಲೆಟರ್ ರೀತಿಯ ಪತ್ರ ಬರೆಯಬೇಕಾಗುತ್ತದೆಂದು ಜಯಲಲಿತಾ ವಿರುದ್ಧ ಲೇವಡಿ ಮಾಡಲಾಗಿತ್ತು.
ಈ ವಿಷಯ ಬಹಿರಂಗವಾಗುತ್ತಿದ್ದಂತೆ ತಮಿಳುನಾಡಿನ ಹಲವೆಡೆ ಪ್ರತಿಭಟನೆಗಳು ನಡೆಯಿತು. ಬಿಜೆಪಿ ಮೈತ್ರಿ ಪಕ್ಷ ಎಂಡಿಎಂಕೆ ಹಾಗೂ ಪಿಎಂಕೆ ಕೂಡಾ ಶ್ರೀಲಂಕಾ ಸರ್ಕಾರದ ವಿರುದ್ಧ ದನಿ ಎತ್ತಿದ್ದವು. ಶ್ರೀಲಂಕಾ ಅಧ್ಯಕ್ಷ ಮಹೀಂದ್ರಾ ರಾಜಪಕ್ಸೆ ಹಾಗೂ ರಕ್ಷಣಾ ಕಾರ್ಯದ್ರ್ಶಿ ಅವರು ಕ್ಷಮೆಯಾಚಿಸದಿದ್ದರೆ ಪಕ್ಷಾತೀತವಾಗಿ ತಮಿಳರು ಬೀದಿಗಿಳಿದು ಹೋರಾಟ ನಡೆಸುವುದಾಗಿ ಪಿಎಂಕೆ ಮುಖ್ಯಸ್ಥ ಎಸ್ ರಾಮದಾಸ್ ಎಚ್ಚರಿಸಿದ್ದರು.
ಆದರೆ, How Meaningful are Jayalalithaa's Love Letters to Narendra Modi' ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗಿರುವ ಲೇಖನ ಕ್ಕೂ ಶ್ರೀಲಂಕಾ ರಕ್ಷಣಾ ಇಲಾಖೆಗೂ ಸಂಬಂಧವಿಲ್ಲ ಇದು ಜನರ ಅಭಿಪ್ರಾಯ ಎಂದು ಸ್ಪಷ್ಟನೆ ನೀಡಲಾಗಿತ್ತು.ಆದರೆ, ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಶ್ರೀಲಂಕಾ ಸರ್ಕಾರ, ಲೇಖನವನ್ನು ತೆಗೆದು ಹಾಕಿ ಕ್ಷಮೆಯಾಚಿಸಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications