ಚೆನ್ನೈನಲ್ಲಿ ಭೂಕುಸಿತ, ನಡುರಸ್ತೆಯಲ್ಲಿ ಹೂತು ಹೋದ ಬಸ್, ಕಾರ್
ಚೆನ್ನೈನ ಅಣ್ಣಾಸಾಲೈ ಪ್ರದೇಶದಲ್ಲಿ ಭಾನುವಾರ ಭೂ ಕುಸಿತ ಉಂಟಾಗಿದೆ. 25 ಪ್ರಯಾಣಿಕರಿದ್ದ ಸಾರಿಗೆ ಬಸ್ ಹಾಗೂ ಹೋಂಡಾ ಸಿಟಿ ಕಾರೊಂದು ನಡುರಸ್ತೆಯಲ್ಲಿ ಹೂತು ಹೋಗಿವೆ. ಇಂಥದ್ದೊಂದು ಘಟನೆಯನ್ನು ಕಂಡು ಸಾರ್ವಜನಿಕರು ಅಚ್ಚರಿಗೊಳಗಾಗಿದ್ದಾರೆ.
ಚೆನ್ನೈ, ಏಪ್ರಿಲ್ 09: ಇಲ್ಲಿನ ಅಣ್ಣಾಸಾಲೈ ಪ್ರದೇಶದಲ್ಲಿ ಭಾನುವಾರ ಭೂ ಕುಸಿತ ಉಂಟಾಗಿದೆ. 25 ಪ್ರಯಾಣಿಕರಿದ್ದ ಸಾರಿಗೆ ಬಸ್ ಹಾಗೂ ಹೋಂಡಾ ಸಿಟಿ ಕಾರೊಂದು ನಡುರಸ್ತೆಯಲ್ಲಿ ಹೂತು ಹೋಗಿವೆ.
ಇಂಥದ್ದೊಂದು ಘಟನೆಯನ್ನು ಕಂಡು ಸಾರ್ವಜನಿಕರು ಅಚ್ಚರಿಗೊಳಗಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಅಮೆರಿಕ ರಾಯಭಾರ ಕಚೇರಿ ಸೇರಿದಂತೆ ಪ್ರತಿಷ್ಟಿತ ಕಚೇರಿಗಳನ್ನೊಳಗೊಂಡ ಅಣ್ಣಾಸಾಲೈ ಪ್ರದೇಶದಲ್ಲಿ ಇಂಥ ಘಟನೆ ನಡೆದಿರುವುದು ಆತಂಕ, ಅಚ್ಚರಿ, ಆಘಾತ ತಂದಿದೆ.

ಜೆಮಿನಿ ಬ್ರಿಡ್ಜ್ ಸಮೀಪ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಇದರ ಬಳಿಯೇ ಭೂ ಕುಸಿತ ಉಂಟಾಗಿದೆ.












Click it and Unblock the Notifications