ಸಿಂಗಪುರಕ್ಕೆ ಹೊರಟಿದ್ದ ವಿಮಾನದಲ್ಲಿ ಹೊಗೆ, ಪ್ರಯಾಣಿಕರು ಸುರಕ್ಷಿತ
ಚೆನ್ನೈ, ಮೇ 20 : ತ್ರಿಚ್ಚಿಯಿಂದ ಸಿಂಗಪುರಕ್ಕೆ ಹೊರಟಿದ್ದ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಕಾರಣ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗಿನ ಜಾವ ತುರ್ತಾಗಿ ಲ್ಯಾಂಡ್ ಆಗಿದೆ. ಪೈಲಟ್ ಸಮಯಪ್ರಜ್ಞೆ ತೋರಿದ ಕಾರಣ ಎಲ್ಲ 161 ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ.
ತಮಿಳುನಾಡಿನ ತ್ರಿಚ್ಚಿಯಿಂದ ಸಿಂಗಪುರಕ್ಕೆ ಹೊರಟಿದ್ದ ಸ್ಕೂಟ್ ಏರ್ ವೇಸ್ ವಿಮಾನ ಟಿಆರ್ 567ನಲ್ಲಿ ಬೆಳಿಗಿನ ಜಾವ 3.40ಕ್ಕೆ ಕಾರ್ಗೋ ವಿಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಕೂಡಲೆ ವಿಮಾನವನ್ನು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ.

ಚೆನ್ನೈನಲ್ಲಿ ಎಲ್ಲ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಸ್ಕೂಟ್ ಏರ್ ವೇಸ್ ವಿಮಾನ ಸೋಮವಾರ ಸಂಜೆ ಮತ್ತೆ ಸಿಂಗಪುರಕ್ಕೆ ಹಾರಲಿದೆ.












Click it and Unblock the Notifications